ಸಾಮಾನ್ಯ ವಿಮಾನ ಪ್ರಯಾಣಿಕರು ಈ ಟ್ರಿಕ್ ಬಳಸಿದರೆ ಸುಲಭವಾಗಿ ಬ್ಯುಸಿನೆಸ್ ಕ್ಲಾಸ್‌ಗೆ ಅಪ್‌ಗ್ರೇಡ್ ಆಗಬಹುದು!

Update: 2016-09-23 18:29 GMT

ಏರ್ ಮೈಲ್ಸ್ ಹೊರತಾಗಿಯೂ ಸಾಮಾನ್ಯ ಪ್ರಯಾಣಿಕರೂ ಉಚಿತ ಅಪ್‌ಗ್ರೇಡ್ ಪಡೆಯುವ ಸಾಧ್ಯತೆಯಿದೆ. ಗಾಡ್ ಸೇವ್ ದ ಪಾಯಿಂಟ್ಸ್ ಎನ್ನುವ ಏರ್‌ಮೈಲ್ಸ್ ವೆಬ್‌ತಾಣ ನಡೆಸುವ ಸತತವಾಗಿ ವಿಮಾನದಲ್ಲಿ ಓಡಾಡುವ ಮತ್ತು ಪಾಯಿಂಟ್ಸ್ ತಜ್ಞ ಗಿಲ್ಬರ್ಟ್ ಓಟ್ ಪ್ರಕಾರ ಮುಖ್ಯವಾಗಿ ಫ್ಲೆಕ್ಸಿಬಲ್ ಸ್ಕೆಡ್ಯೂಲ್ ಹೊಂದಿರಬೇಕು. ಬ್ಯುಸಿನೆಸ್ ಮತ್ತು ಫಸ್ಟ್ ಕ್ಲಾಸ್‌ನಲ್ಲಿ ಉಚಿತ ಸೀಟುಗಳನ್ನು ಪಡೆಯಲು ವಿಮಾನ ಪ್ರಯಾಣಿಕರಿಗೆ ನೆರವಾಗುವುದೇ ಓಟ್ ವೃತ್ತಿಯಾಗಿದೆ. ಅವರು ಸ್ವತಃ ಒಮ್ಮೆ ಖಾಸಗಿ ಜೆಟ್‌ನಲ್ಲೂ ಉಚಿತ ಪ್ರಯಾಣ ಪಡೆದಿದ್ದಾರೆ!

"ಅಪ್‌ಗ್ರೇಡ್‌ಗಳು ಸಾಮಾನ್ಯವಾಗಿ ಪ್ರಾಮಾಣಿಕತೆ ಮತ್ತು ಹಣ ವೆಚ್ಚ ಮಾಡುವುದನ್ನು ಅನುಸರಿಸಿರುತ್ತದೆ" ಎನ್ನುತ್ತಾರೆ ಓಟ್. ಆದರೆ ಸಾವಿರಾರು ಮೈಲ್ ಓಡಾಟ ಅಥವಾ ಉನ್ನತ ಸ್ಥಾನ ಹೊಂದಿರದೆಯೂ ಅಪ್‌ಗ್ರೇಡ್ ಪಡೆಯುವ ಒಂದು ಪರಿಣಾಮಕಾರಿ ದಾರಿ ಇದೆ. ಹೆಚ್ಚು ಮಾರಾಟವಾದ ವಿಮಾನವನ್ನು ಬಳಸುವುದು ಮತ್ತು ಸ್ಕೆಡ್ಯೂಲ್ ಬದಲಾವಣೆಯನ್ನು ತಮ್ಮ ಪರವಾಗಿ ಬಳಸಿಕೊಳ್ಳುವುದು. ಅಪ್‌ಗ್ರೇಡ್ ಪಡೆಯಲು ಉತ್ತಮ ಟ್ರಿಕ್ ಎಂದರೆ ಹೆಚ್ಚು ಮಾರಾಟವಾದ ವಿಮಾನಗಳನ್ನು ಬಳಸುವುದು ಮತ್ತು ಸ್ಕೆಡ್ಯೂಲ್ ಬದಲಾವಣೆಯ ಲಾಭ ಪಡೆಯುವುದು. ವಿಮಾನದ ಟಿಕೆಟ್ ಹೆಚ್ಚು ಮಾರಾಟವಾದಾಗ ಸಾಮಾನ್ಯವಾಗಿ ಮುಂದಿನ ವಿಮಾನಕ್ಕೆ ಯಾರು ಹೋಗುತ್ತೀರಿ ಎಂದು ಕೇಳಲಾಗುತ್ತದೆ. ತಕ್ಷಣವೇ ಒಪ್ಪಿಕೊಂಡಲ್ಲಿ ಬಂಪರ್ ಬಹುಮಾನ ಸಿಗಲಿದೆ.

ಸಮಯದ ನಿರ್ದಿಷ್ಟತೆ ಇಲ್ಲದೆ ಪ್ರಯಾಣಿಸುವವರು ಮುಂದಿನ ವಿಮಾನ ಬಳಸಲು ಒಪ್ಪಿಕೊಳ್ಳಬಹುದು. ಈ ಅಹಿತಕ್ಕಾಗಿ ಅವರಿಗೆ ಏರ್‌ಲೈನ್‌ನಿಂದ ಹಣವೂ ವಾಪಸಾಗಬಹುದು. ಹೀಗೆ ಬೇರೆ ವಿಮಾನಕ್ಕೆ ಹೋದಾಗ ಮುಂದಿನ ಸೀಟಿನಲ್ಲಿ ಕುಳಿತು ಪ್ರಯಾಣಿಸುವ ಅವಕಾಶವನ್ನೂ ಬಹಳಷ್ಟು ವಿಮಾನಗಳು ಕೊಡುತ್ತವೆ.

ಲಾಸ್ ಏಂಜಲೀಸ್‌ನ ಹೆಚ್ಚು ಟಿಕೆಟು ಮಾರಾಟವಾದ ವಿಮಾನವನ್ನು ಉದಾಹರಣೆಯಾಗಿ ಅವರು ಕೊಡುತ್ತಾರೆ. ಅದಕ್ಕೆ ಅವರು 300 ಡಾಲರ್ ಪಾವತಿಸಿದ್ದರು. ಬದಲಿಗೆ ಮತ್ತೊಂದು ವಿಮಾನಕ್ಕೆ ಹೋಗಲು ಒಪ್ಪಿದಾಗ ಏರ್‌ಲೈನ್ ಅವರಿಗೆ 500 ಡಾಲರ್ ವೋಚರ್ ಅನ್ನು ಮುಂದಿನ ಪ್ರಯಾಣಕ್ಕೆ ಕೊಡಬಹುದು ಮತ್ತು ಬ್ಯುಸಿನೆಸ್ ಕ್ಲಾಸಲ್ಲಿ ಪ್ರಯಾಣಿಸುವ ಅವಕಾಶ ಸಿಗಲಿದೆ. "ನಾನು ಟಿಕೆಟಿಗೆ ಪಾವತಿಸಿದ ಹಣಕ್ಕಿಂತ ಹೆಚ್ಚಿನದನ್ನು ಪಡೆಯುತ್ತೇನೆ ಮತ್ತು ಸಾಮಾನ್ಯವಾಗಿ ಅಪ್‌ಗ್ರೇಡ್ ಕೂಡ ಪಡೆಯುತ್ತೇನೆ. ಮೈಲುಗಟ್ಟಲೆ ಪ್ರಯಾಣಿಸದೆ ಇದ್ದಲ್ಲಿ ಅಥವಾ ಏರ್‌ಲೈನ್ ಜೊತೆಗೆ ಉನ್ನತ ಪ್ರಭಾವ ಹೊಂದಿಲ್ಲದಿದ್ದಾಗ ಇದು ಉತ್ತಮ ಅವಕಾಶ" ಎನ್ನುತ್ತಾರೆ ಓಟ್.

ಸತತ ಪ್ರಯಾಣಿಕರಿಗೆ ಅಪ್‌ಗ್ರೇಡ್ ಬೇಗ ಸಿಗುತ್ತದೆ. ಅಂತಹವರು ತಕ್ಷಣವೇ ಅಪ್‌ಗ್ರೇಡ್ ಸಿಗಬಹುದಾದ ವಿಮಾನಗಳಲ್ಲಿ ಬುಕ್ ಮಾಡಬೇಕು. "ನಾನು ವರ್ಜಿನ್ ಅಟ್ಲಾಂಟಿಕ್ ಇಕಾನಮಿ ಬುಕ್ ಮಾಡಿದಲ್ಲಿ ಮತ್ತು ನನಗೆ ಪ್ರೀಮಿಯಂ ಅಪ್‌ಗ್ರೇಡ್ ಅಥವಾ ಬ್ಯುಸಿನೆಸ್ ಅಪ್‌ಗ್ರೇಡ್ ಬೇಕಿದ್ದಲ್ಲಿ ವಿಮಾನ ಬುಕ್ ಮಾಡುವಾಗ ಗಮನಹರಿಸುತ್ತೇನೆ. ಆ ವಿಮಾನದಲ್ಲಿ ಬ್ಯುಸಿನೆಸ್ ಅಥವಾ ಪ್ರೀಮಿಯಂ ಸೀಟು ಇದ್ದಲ್ಲಿ ನನಗೆ ಬೇಗನೇ ಅಪ್‌ಗ್ರೇಡ್ ಸಿಗಲಿದೆ. ನಾನು ನಗದು ಬುಕಿಂಗ್ ಮಾಡುತ್ತೇನೆ ಮತ್ತು 20 ಸೆಕೆಂಡುಗಳಲ್ಲಿ ಕರೆಬಂದು ಅಪ್‌ಗ್ರೇಡ್ ಆಗಿರುತ್ತದೆ" ಎನ್ನುತ್ತಾರೆ.

ಸೂಟ್ ಧರಿಸಿ ಬ್ಯಾಂಡೇಜ್ ಹಾಕಿ ಕಾಲು ಮುರಿದಿದೆ ಎಂದು ಹೇಳಿ ಅಪ್‌ಗ್ರೇಡ್ ಪಡೆಯುವ ಹಾದಿ ಈಗ ಕೆಲಸ ಮಾಡುವುದಿಲ್ಲ. ಅಪ್‌ಗ್ರೇಡ್ ಪಡೆಯುವ ಈ ಹಳೇ ವಿಧಾನಗಳು ಈಗ ಬೇಡ ಎನ್ನುತ್ತಾರೆ ಓಟ್.

ಕೃಪೆ: http://www.businessinsider.in/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News