×
Ad

ಹಿಂದೂ ಮುನ್ನಣಿ ಕಾಯಕರ್ತನ ಕೊಲೆ: ಉದ್ವಿಗ್ನ

Update: 2016-09-23 16:37 IST

ಮೆಟ್ಟುಪಾಲಯಂ, ಸೆಪ್ಟಂಬರ್ 23: ಕೊಯಮತ್ತೂರಿನಲ್ಲಿ ಹಿಂದೂಮುನ್ನಣಿ ಕಾರ್ಯಕರ್ತ ಪಿ.ಆರ್,ಒ. ಶಶಿಕುಮಾರ್(35)ರನ್ನು ಅಪರಿಚಿತರು ಇರಿದು ಕೊಲೆಗೈದಘಟನೆ ನಡೆದಿದೆ ಎಂದು ವರದಿಯಾಗಿದೆ. ಗುರುವಾರ ರಾತ್ರೆ 12:30ಕ್ಕೆ ಘಟನೆ ನಡೆದಿದ್ದು, ಶಶಿಕುಮಾರ್ ತನ್ನಮನೆಗೆ ಹೋಗುತ್ತಿದ್ದಾಗ ದ್ವಿಚಕ್ರವಾಹನಗಳಲ್ಲಿ ಬಂದ ನಾಲ್ವರು ಅಪರಿಚಿತರು ಇರಿದು ಕೊಲೆಗೈದಿದ್ದಾರೆ. ಮೃತ ಶಶಿಕುಮಾರ್ ರ ದೇಹದಲ್ಲಿ ಹದಿನೈದು ಕಡೆ ತಿವಿತದ ಗಾಯಗಳಿವೆ.

ಘಟನೆಯ ನಂತರ ಕೊಯಮತ್ತೂರು ನೀಲಗಿರಿ ಜಿಲ್ಲೆಯಲ್ಲಿ ಸಂಘರ್ಷದ ಸ್ಥಿತಿ ನೆಲೆಸಿದೆ. ಹಿಂದೂಮುನ್ನಣಿ ಕಾರ್ಯಕರ್ತರ ದಾಳಿಯಿಂದ ನಾಲ್ಕು ಸರಕಾರಿ ಬಸ್‌ಗಳಿಗೆ ಹಾನಿಯಾಗಿವೆ. ಕೋಯಮತ್ತೂರು, ಮೆಟ್ಟುಪಾಲಯಂ ರಸ್ತೆಯ ವಾಹನಸಂಚಾರಕ್ಕೆ ಅಡ್ಡಿಯಾಗಿದೆ. ಇಲ್ಲಿಂದ ಕೆಲವು ಖಾಸಗಿ ಬಸ್‌ಗಳು ಮಾತ್ರ ಸಂಚರಿಸುತ್ತಿವೆ. ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ.

ಹೊಸೂರು, ಡಿಂಡಿಗಲ್, ಕೊಯಮತ್ತೂರು ಪ್ರದೇಶಗಳಲ್ಲಿ ಒಂದು ವಾರದಿಂದೀಚೆಗೆ ಹಲವು ದಾಳಿಗಳು ನಡೆದಿವೆ ಎಂದು ವರದಿ ವಿವರಿಸಿವೆ. ಕೆಲವುದಿನಗಳ ಹಿಂದೆ ದಿಂಡಿಗಲ್ ಮತ್ತು ಹೊಸೂರುಗಳಲ್ಲಿ ಹಿಂದೂಮುನ್ನಣಿ ಕಾರ್ಯಕರ್ತರನ್ನು ಗಾಯಗೊಳಿಸಿದ ಘಟನೆ ನಡೆದಿತ್ತು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News