×
Ad

ಕಪ್ಪುಹಣ: ಕಳೆದ ಆರು ತಿಂಗಳಲ್ಲಿ ಕೇರಳದಲ್ಲಿ 1200 ಕೋಟಿ ರೂ. ವಶ

Update: 2016-09-23 16:46 IST

ಕೊಚ್ಚಿ,ಸೆ.23: ಆದಾಯ ತೆರಿಗೆ ಇಲಾಖೆ ಕೇರಳದಲ್ಲಿ 1200ಕೋಟಿ ರೂ. ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ. 2016ರ ಮೊದಲ ಆರು ತಿಂಗಳಲ್ಲಿ 29 ಸ್ಥಳಗಳಲ್ಲಿ ನಡೆಸಲಾದ ದಾಳಿಯಲ್ಲಿ ಇಷ್ಟು ಮೊತ್ತದ ಅನಧಿಕೃತ ಸೊತ್ತುಗಳನ್ನು ಆದಾಯ ತೆರಿಗೆ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. 15.2 ಕೋಟಿ ರೂಪಾಯಿ ನಗದು ಮತ್ತು 16ಕೋಟಿರೂಪಾಯಿ ಮೊತ್ತದ ಚಿನ್ನ ವಶಪಡಿಸಿಕೊಳ್ಳಲಾಗಿದೆ.

ಅನಧಿಕೃತವಾಗಿ ಸಂಪಾದಿಸಿದ ವಸ್ತುಗಳು, ಸಹಕಾರಿ ಮತ್ತು ಬ್ಯಾಂಕೇತರ ಹಣಕಾಸುಸಂಸ್ಥೆಗಳಲ್ಲಿರುವ ಠೇವಣಿಗಳು ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದುಆದಾಯ ತೆರಿಗೆ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News