ಪತಿಯನ್ನೇ ಹೊಡೆದು ಕೊಲೆಗೈದು ಬಾವಿಗೆಸೆದ ಪತ್ನಿ, ಪ್ರಿಯಕರ

Update: 2016-09-24 17:45 GMT

ಮೂಡುಬಿದಿರೆ,ಸೆ.13: ಶಿರ್ತಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡುಕೊಣಾಜೆ ಕುಕ್ಕುದಕಟ್ಟೆಯಲ್ಲಿ ವಿವಾಹಿತನನ್ನು ಸೆ.16ರಂದು ಕೊಲೆ ಮಾಡಿರುವ ಪ್ರಕರಣ ಶನಿವಾರ ಬೆಳಕಿಗೆ ಬಂದಿದೆ.

ಬಂಟ್ವಾಳ ತಾಲೂಕಿನ ಕೆದಿಲಾ ಗ್ರಾಮದ ಪೇರಮೊಗರ ಮನೆಯ ಕೃಷ್ಣಪ್ಪ ನಾಯ್ಕಾರ ಪುತ್ರ ಜಯರಾಜ್ ನಾಯ್ಕಾ(25) ಕೊಲೆಯಾದ ಯುವಕ. ಜಯರಾಜ್‌ಗೆ ಮೂಡುಕೊಣಾಜೆಯ ಶೀನ ನಾಯ್ಕಾ ಅವರ ಮಗಳು ಅಶ್ವಿನಿ ಜೊತೆ ಒಂದುವರೆ ವರ್ಷದ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಅಶ್ವಿನಿ ಹೆರಿಗೆಗೆಂದು, ತವರು ಮನೆಗೆ ಬಂದಿದ್ದು, ಒಂದುವರೆ ತಿಂಗಳ ಮಗುವಿದೆ.

ಸೆ.13ರಂದು ಜಯರಾಜ್ ತನ್ನ ತವರು ಮನೆಗೆ ಬರುವ ವಿಚಾರವನ್ನು ಅಶ್ವಿನಿ, ತನ್ನ ಪ್ರಿಯಕರ ಆನಂದ ಮೊಗೇರನಿಗೆ ಮಾಹಿತಿ ನೀಡಿದ್ದಳು ಎನ್ನಲಾಗಿದೆ. ಜಯರಾಜ್ ಮನೆಗೆ ಬಂದು ಹೆಂಡತಿ ಜೊತೆ ಮಾತನಾಡುತ್ತಿರುವಾಗ ಈ ಮೊದಲೇ ಅಡಗಿ ಕೂತಿದ್ದ ಆನಂದ ಕಬ್ಬಿಣದ ರಾಡ್ ಮೂಲಕ ಹಲ್ಲೆ ನಡೆಸಿ, ಕೊಲೆಗೈದಿದ್ದಾನೆ. ಬಳಿಕ ಶವವನ್ನು ಮನೆ ಪಕ್ಕದ ಪೊದೆಯಲ್ಲಿ ಅಡಗಿಸಿಟ್ಟಿದ್ದಾನೆ. ತಡರಾತ್ರಿ ಶವಕ್ಕೆ ಕಲ್ಲು ಕಟ್ಟಿ, ಗುರುವ ಎನ್ನುವವರಿಗೆ ಸೇರಿದ್ದ ಬಾವಿಯಲ್ಲಿ ಎಸೆಲಾಗಿದೆ. ಅ ಬಳಿಕ ಏನು ನಡೆದಿಲ್ಲವೆಂಬಂತೆ ಪರಿಸರಲ್ಲಿ ಸುತ್ತಾಡುತ್ತಿದ್ದ ಎಂದು ತಿಳಿದು ಬಂದಿದೆ. ಮೂಡುಬಿದಿರೆ ಠಾಣೆಯಲ್ಲಿ ಅಶ್ವಿನಿ ಗಂಡ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಳು.

ಸುಳಿವು ನೀಡಿದ ಮೊಬೈಲ್:

ಕೊಲೆ ಮಾಡಿದ ಬಳಿಕ ಜಯರಾಜ್‌ನ ಮೊಬೈಲಿನಲ್ಲಿದ್ದ ಸಿಮ್ ಅನ್ನು ಆರೋಪಿ ಆನಂದ ತೆಗೆದು ತನ್ನಲ್ಲಿಸಿಕೊಂಡಿದ್ದ. ಬಳಿಕ ಶ್ರೀಪತಿ ಎನ್ನುವವನ ಮೊಬೈಲ್‌ನಿಂದ ಅ ಸಿಮ್ ಅನ್ನು ಬಳಸಿ, ಜಯರಾಜ್‌ನ ತಾಯಿಗೆ ಕರೆ ಮಾಡಿದ್ದಾನೆ. ನಿಮ್ಮ ಮಗ ನನಗೆ ಸಾಲ ಮರುಪಾವತಿ ಮಾಡಲು ಬಾಕಿಯಿದ್ದು, ಕೆಲವು ದಿನ ಆತ ನನ್ನಲ್ಲಿ ಕೆಲಸ ಮಾಡುತ್ತಾನೆ ಎಂದು ತಿಳಿಸಿದ್ದಾನೆ. ಈ ಕುರಿತು ತಾಯಿ ಪೊಲೀಸರಿಗೆ ದೂರು ನೀಡಿದ್ದು, ಪೊಲಿಸರು ಮೊಬೈಲ್ ನೆಟ್‌ವರ್ಕ್ ಪರಿಶೀಲಿಸುವಾಗ ಸಿದ್ದಕಟ್ಟೆ ಸ್ಥಳವನ್ನು ಸೂಚಿಸುತ್ತಿತ್ತು. ಶ್ರೀಪತಿ ಎನ್ನುವವನ ಮೊಬೈಲ್ ಉಪಯೋಗಿಸಿರುವುದು ಪರಿಶೀಲನೆ ಸಂದರ್ಭ ತಿಳಿದುಬಂದಿದೆ. ಶ್ರೀಪತಿಯನ್ನು ವಿಚಾರಣೆಗೊಳಪಡಿಸಿದಾಗ ತನ್ನ ಮೊಬೈಲ್ ಆನಂದ ಉಪಯೋಗಿಸಿದ್ದ ಎಂದು ಮಾಹಿತಿ ನೀಡಿದ್ದಾನೆ. ಆನಂದನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಆನಂದ ಹಾಗೂ ಶ್ರೀಪತಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಎರಡನೇ ಶವ: ಜಯರಾಜ್‌ನನ್ನು ಕೊಲೆ ಮಾಡಿ ಬಿಸಾಡಿರುವ ಬಾವಿಯಲ್ಲಿ ಕಳೆದ ವರ್ಷವು ಗುರುವ ಎನ್ನುನನ್ನು ಬಾಬು ಎಂಬಾತ ಕೊಲೆ ಮಾಡಿ ಬಾವಿಗೆ ಎಸೆದಿದ್ದ. ಜೈಲಿನಲ್ಲಿದ್ದ ಆರೋಪಿ ಬಾಬು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾನೆ. ಮೊದಲ ಪ್ರಕರಣದಂತೆ ಈ ಪ್ರಕರಣದಲ್ಲೂ ಕೊಲೆ ಮಾಡಿ, ಬಾವಿಗೆ ಎಸೆಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News