ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನ: ಇಬ್ಬರ ಬಂಧನ
ತಿರೂರ್, ಸೆ.24: ಹತ್ತನೆ ಕ್ಲಾಸಿನ ವಿದ್ಯಾರ್ಥಿನಿಯನ್ನು ಶಾಲೆಗೆ ಹೋಗುತ್ತಿರುವಾಗ ಆಟೊರಿಕ್ಷಾದಲ್ಲಿ ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣದಲ್ಲಿ ಇಬ್ಬರು ಯುವಕರನ್ನುತಿರೂರು ಪೊಲೀಸರು ಬಂಧಿಸಿದ್ದಾರೆಎಂದು ವರದಿಯಾಗಿದೆ.
ಖಾಸಗಿ ಬಸ್ಸಿನ ಕ್ಲೀನರ್ ಅನಂತಾವೂರ್ ಮುಟ್ಟಿಕ್ಕಲ್ನ ವಳ್ಳಿಕಾಟ್ಟಿಲ್ ಮುಹಮ್ಮದ್ ಝಕೀರ್(23), ಅತನ ಗೆಳೆಯ ಆಟೊಚಾಲಕ ಅತವನಾಡ್ ಕುರುಂಬತೂರಿನ ಸಲೀಂ(29) ಎಂಬಿಬ್ಬರನ್ನುತಿರೂರು ಸಿಐ ಎಂ.ಕೆ.ಶಾಜಿ ಬಂಧಿಸಿದ್ದಾರೆ.
ಘಟನೆಯ ಕುರಿತು ಪೊಲೀಸರು ಹೀಗೆ ವಿವರಿಸಿದ್ದಾರೆ: ಗುರುವಾರ ಬೆಳಗ್ಗೆ ಪಟ್ಟರ್‌ನಡಕಾವಿನ ಮನೆಯಿಂದ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಆರೋಪಿಗಳು ಆಟೊರಿಕ್ಷಾಕ್ಕೆ ಹತ್ತಿಸಿ ಮಲಪ್ಪುರಂಗೆ ನಂತರ ಮಣ್ಣಾರ್ ಕಾಟ್‌ಗೂ ಕರೆದು ಕೊಂಡು ಹೋಗಿದ್ದಾರೆ. ಮಣ್ಣಾರ್ ಕಾಟಿನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಬಳಿಕ ಸಂಜೆ ಶಾಲೆ ಶಾಲೆಯ ಬಳಿ ಬಿಟ್ಟು ಹೋಗಿದ್ದಾರೆ ಎಂದು ದೂರು ದಾಖಲಿಸಿಕೊಳ್ಳಲಾಗಿದೆ. ವಿದ್ಯಾರ್ಥಿನಿ ಶಾಲೆಗೆ ತಲುಪದ್ದರಿಂದ ಅಧ್ಯಾಪಕರು ಮನೆಯವರಿಗೆ ಫೋನ್ ಮಾಡಿ ತಿಳಿಸಿದ್ದರು. ಮನೆಯವರು ತಿರೂರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಹುಡುಕಿದಾಗ ವಿದ್ಯಾರ್ಥಿನಿ ಪತ್ತೆಯಾಗಿದ್ದಳು.
ನಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಮುಹಮ್ಮದ್ ಝಾಕಿರ್ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದಾನೆ. ಸಲೀಂ ಆಟೊರಿಕ್ಷಾ ಚಲಾಯಿಸಿ ನೆರವಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಮ್ಯಾಜಿಸ್ಟ್ರೇಟರ ಮುಂದೆ ಹಾಜರು ಪಡಿಸಲಾಗಿದೆ ಎಂದು ವರದಿ ತಿಳಿಸಿದೆ.