×
Ad

17ರ ಬಾಲಕಿಗೆ ಚಾಕುವಿನಿಂದ ಇರಿದ ಭಗ್ನ ಪ್ರೇಮಿ

Update: 2016-09-24 17:55 IST

ಹೊಸದಿಲ್ಲಿ,ಸೆಪ್ಟಂಬರ್ 24: ದೇಶದ ರಾಜಧಾನಿ ದಿಲ್ಲಿಯಲ್ಲಿ ಹದಿನೇಳುವರ್ಷದ ಬಾಲಕಿಯೊಬ್ಬಳಿಗೆ ಕಳೆದ ದಿವಸ ಭಗ್ನಪ್ರೇಮಿಯೊಬ್ಬ ಚಾಕುಪ್ರಹಾರ ನಡೆಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ.

ದಿಲ್ಲಿಯ ಮಂಗಲ್‌ಪುರಿಯಲ್ಲಿ ಮನೆಯ ಸಮೀಪ ಬಂದ ದುಷ್ಕರ್ಮಿ ಬಾಲಕಿಯ ಕೊರಳಿಗೆ ಚಾಕುವಿನಿಂದ ತಿವಿದಿದ್ದು, ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿದ್ದರೂ ಬಾಲಕಿಯ ಆರೋಗ್ಯಸ್ಥಿತಿ ಗಂಭೀರವಾಗಿದೆ.

ಘಟನೆ ಸಂಬಂಧಿಸಿ ರಾಹುಲ್ ಕುಮಾರ್ ಎಂಬ ಇಪ್ಪತ್ತನಾಲ್ಕುವರ್ಷವಯಸ್ಸಿನ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಅತನ ವಿರುದ್ಧ ಕೊಲೆಯತ್ನ ಆರೋಪ ಹೊರಿಸಿ ಕೇಸು ದಾಖಲಿಸಲಾಗಿದೆ.ಆರೋಪಿಯು ಪೊಲೀಸ್‌ಕಾನ್ಸ್‌ಟೇಬಲ್‌ವೋರ್ವರ ಪುತ್ರನಾಗಿದ್ದಾನೆ. ಬಾಲಕಿಯನ್ನು ಕಳೆದ ಒಂದೂವರೆ ವರ್ಷದಿಂದ ತಾನು ಪ್ರೀತಿಸುತ್ತಿದ್ದೇನೆ. ಆಕೆ ತನ್ನ ವಿವಾಹ ಕೋರಿಕೆಯನ್ನು ನಿರಾಕರಿಸಿದ್ದಕ್ಕಾಗಿ ಪ್ರತಿಕಾರವೆಸಗಿದೆ ಎಂಧು ಪೊಲೀಸರಿಗೆ ಆರೋಪಿ ತಿಳಿಸಿದ್ದಾನೆ. ಮನೆಯ ಸಮೀಪ ರಕ್ತಸುರಿಯುತ್ತಿದ್ದ ಬಾಲಕಿಯನ್ನು ನೆರೆಯವ ವ್ಯಕ್ತಿ ನೋಡಿದ್ದು ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತು. ಹೋಲಿಯಂದು ಆರೋಪಿ ಬಾಲಕಿಗೆ ಫೋನ್ ಮಾಡಿ ಅಪಮಾನಿಸಿದ್ದಾನೆ ಎಂದು ಕುಟುಂಬ ತಿಳೀಸಿದೆ. ದಿಲ್ಲಿಯಲ್ಲಿ ಒಂದು ವಾರದಲ್ಲಿನಡೆದ ನಡೆದಿರುವ ನಾಲ್ಕನೆ ಘಟನೆ ಇದು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News