ಬುಗ್ತಿ ಗಡಿಪಾರು ಕೋರಿ ಇಂಟರ್‌ಪೋಲ್‌ಗೆ ಪತ್ರ: ಪಾಕ್
Update: 2016-09-24 19:51 IST
ಇಸ್ಲಾಮಾಬಾದ್, ಸೆ. 24: ಬಲೂಚ್ ಪ್ರತ್ಯೇಕತಾವಾದಿ ನಾಯಕ ಬ್ರಹಂಡಾಗ್ ಬುಗ್ತಿಯನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡುವಂತೆ ಕೋರಿ ಇಂಟರ್‌ಪೋಲ್‌ಗೆ ಪತ್ರ ಬರೆಯಲು ಇಸ್ಲಾಮಾಬಾದ್ ನಿರ್ಧರಿಸಿದೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ಚೌಧರಿ ನಿಸಾರ್ ಅಲಿ ಖಾನ್ ಹೇಳಿದ್ದಾರೆ.
ಬುಗ್ತಿ ಈಗ ಸ್ವಿಝರ್‌ಲ್ಯಾಂಡ್‌ನಲ್ಲಿ ಆಶ್ರಯ ಪಡೆದಿದ್ದಾರೆ. ಆಶ್ರಯವನ್ನು ಮುಂದುವರಿಸಬೇಕೆನ್ನುವ ಅವರ ಕೋರಿಕೆಯನ್ನು ಸ್ವಿಝರ್‌ಲ್ಯಾಂಡ್ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ, ಭಾರತದಲ್ಲಿ ಆಶ್ರಯ ಕೋರಿ ಅವರು ಅರ್ಜಿ ಸಲ್ಲಿಸಿದ್ದಾರೆ.
‘‘ಬ್ರಹಂಡಾಗ್ ಬುಗ್ತಿಯ ಗಡಿಪಾರು ಕೋರಿ ಫೆಡರಲ್ ತನಿಖಾ ಸಂಸ್ಥೆಯು ಕೆಲವೇ ದಿನಗಳಲ್ಲಿ ಇಂಟರ್‌ಪೋಲ್‌ಗೆ ಔಪಚಾರಿಕ ಪತ್ರವನ್ನು ಕಳುಹಿಸುವುದು’’ ಎಂದು ಖಾನ್ ಹೇಳಿರುವುದಾಗಿ ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.
ಭಾರತದಲ್ಲಿ ಆಶ್ರಯ ಕೋರಿ ಬುಗ್ತಿ ಸಲ್ಲಿಸಿರುವ ಅರ್ಜಿಯನ್ನು ಭಾರತೀಯ ಗೃಹ ಸಚಿವಾಲಯ ಸ್ವೀಕರಿಸಿದ್ದು, ಪರಿಶೀಲನೆ ನಡೆಸುತ್ತಿದೆ.