ಶಾರ್ಜಾ: ಮತ್ತೆ ಮನೆ ಸೇರಿದ ಬಾಲಕ

Update: 2016-09-24 16:01 GMT

ಶಾರ್ಜಾ, ಸೆ.24: ಕುಟುಂಬದವರಿಂದ ತಪ್ಪಿಸಿಕೊಂಡು ಶಾರ್ಜಾ ಪೊಲೀಸರ ಕೈಗೆ ಸಿಕ್ಕಿದ್ದ ನಾಲ್ಕರ ಹರೆಯದ ಬಾಲಕ ಕೊನೆಗೂ ತನ್ನ ಮನೆ ಸೇರಿದ್ದಾನೆ.
ಇಲ್ಲಿನ ಅಲ್ ನುಖೈಲತ್ ಪ್ರದೇಶದಲ್ಲಿ ಶನಿವಾರ ಮಧ್ಯಾಹ್ನ ಪೊಲೀಸ್ ಅಧಿಕಾರಿಗಳ ಕಣ್ಣಿಗೆ ಬಿದ್ದ ಈ ಬಾಲಕನನ್ನು ಸಮೀಪದ ಪೊಲೀಸ್ ಠಾಣೆಗೆ ಸುಪರ್ದಿಗೆ ಒಪ್ಪಿಸಲಾಗಿತ್ತು. ಬಳಿಕ ತಕ್ಷಣ ಪೊಲೀಸರು ಆತನ ಮನೆಯವರನ್ನು ಪತ್ತೆಹಚ್ಚುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಆದರೆ ಆತನ ತಂದೆ ತನ್ನ ಪುತ್ರ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸದೇ ಇರುವುದರಿಂದ ಕುಟುಂಬವನ್ನು ಪತ್ತೆ ಹಚ್ಚುವುದು ಕಷ್ಟಕರವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಬಾಲಕನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಆತನ ಕುಟುಂಬವನ್ನು ಪತ್ತೆ ಹಚ್ಚಲು ನೆರವಾಗುವಂತೆ ಕೋರಿದ್ದರು.
ಇದೀಗ ಬಾಲಕನ ಮನೆಯವರನ್ನು ಪತ್ತೆಹಚ್ಚಲಾಗಿದ್ದು, ಆತನನ್ನು ಮನೆಯವರೊಂದಿಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News