×
Ad

ಉರಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ ಆರೋಪಿಗಳನ್ನು ಶಿಕ್ಷಿಸಲಾಗುವುದು: ಮೋದಿ

Update: 2016-09-25 12:31 IST

ಹೊಸದಿಲ್ಲಿ, ಸೆ.25: ಉರಿ ಸೇನಾ ಕ್ಯಾಂಪ್‌ನ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಸುಮ್ಮನೆ ಬಿಡುವುದಿಲ್ಲ. ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು  ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದರು.
’ಮನ್‌ ಕೀ ಬಾತ್‌ ’ 24ನೆ ಆವೃತ್ತಿಯ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು. 
ಮೋದಿ ಭಾಷಣದ ಹೈಲೈಟ್ಸ್‌
*ನಮಗೆ ನಮ್ಮ ಯೋಧರ ಮೇಲೆ ನಂಬಿಕೆ ಇದೆ. ಶಾಂತಿ ಮತ್ತು ಒಗ್ಗಟ್ಟು ಅಭಿವೃದ್ಧಿ ಮಾರ್ಗವಾಗಿದೆ.  ಕಾಶ್ಮೀರದಲ್ಲಿ ಸುರಕ್ಷತೆ ಸರಕಾರದ ಹೊಣೆಯಾಗಿದೆ.
*ಕಾಶ್ಮೀರದ ಜನರು ಶಾಂತಿ ನೆಮ್ಮದಿಯ ಜೀವನವನ್ನು ಬಯಸಿದ್ದಾರೆ. ಸರಕಾರ ಆ ನಿಟ್ಟಿನಲ್ಲಿ ಪ್ರಯತ್ನನಡೆಸುತ್ತಿದೆ.
*ಪ್ಯಾರಾಲಿಂಪಿಕ್ಸ್‌ನಲ್ಲಿ ದೀಪಾ ಮಲಿಕ್  ಅವರ ಸಾಧನೆ ಅನನ್ಯ . 
*ಸ್ವಚ್ಛ ಭಾರತ್‌ ಆಂದೋಲನಕ್ಕೆ ಎರಡು ವರ್ಷ ಸಂದಿವೆ. ಗ್ರಾಮೀಣ ಪ್ರದೇಶಗಳಲ್ಲಿ 2.48 ಕೋಟಿ ಶೌಚಾಲಯವನ್ನು ನಿರ್ಮಿಸಲಾಗಿದೆ. ಮುಂದಿನ ವರ್ಷ 1.5 ಕೋಟಿ ಶೌಚಾಲಯವನ್ನು ನಿರ್ಮಿಸಲಾಗುವುದು.
*ದೀನ್‌ ದಯಾಳ್‌ ಉಪಾಧ್ಯಾಯ ಜನ್ಮಶತಮಾನೋತ್ಸವವನ್ನು ’ ಗರೀಬ್‌ ಕಲ್ಯಾಣ್‌ ವರ್ಷ ’ ಆಗಿ ಆಚರಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News