ಜೋರ್ಡಾನ್ ಕ್ರಿಶ್ಚಿಯನ್ ಬರಹಗಾರ ನಹೇದ್ ಹತ್ತಾರ್ ಕೊಲೆ
Update: 2016-09-25 14:27 IST
ಅಮ್ಮಾನ್,ಸೆ.25: ಜೋರ್ಡಾನ್ ಕ್ರಿಶ್ಚಿಯನ್ ಬರಹಗಾರ ನಹೇದ್ ಹತ್ತಾರ್ ಅವರನ್ನು ಅಪರಿಚಿತ ಬಂಧೂಕುಧಾರಿಯೊಬ್ಬ ಇಂದು ಗುಂಡಿಟ್ಟು ಕೊಲೆ ಮಾಡಿದ್ದಾನೆ.
ನಹೇದ್ ಹತ್ತಾರ್ ಅವರು ಧರ್ಮ ನಿಂದನೆಯ ಆರೋಪ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಲು ಆಗಮಿಸಿದ್ದರು. ನ್ಯಾಯಾಲಯದ ಮುಂದೆ ಅವರನ್ನು ಗುಂಡಿಟ್ಟು ಕೊಲೆ ಮಾಡಲಾಗಿದೆ.
ದೇವರು ಹಾಗೂ ಇಸ್ಲಾಂ ವಿರುದ್ಧ ಅವಹೇಳನಕಾರಿ ವ್ಯಂಗ್ಯ ಚಿತ್ರವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿ ಹಲವರ ವಿರೋಧ ಕಟ್ಟುಕೊಂಡಿದ್ದರು.