ತಮಿಳು ನಾಡಿನಲ್ಲಿ ರಸ್ತೆ ಅಪಘಾತ: 9 ಮಹಿಳೆಯರು ಸೇರಿ 11 ಮಂದಿ ಸಾವು
Update: 2016-09-26 14:12 IST
ತಿರುಚಿ, ಸೆ.26: ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವ್ಯಾನೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಮಹಿಳೆಯರು ಸೇರಿದಂತೆ 11 ಜನ ಮೃತಪಟ್ಟಿರುವ ಘಟನೆ ತಮಿಳು ನಾಡಿನ ಅರಿಯಲೂರು ಜಿಲ್ಲೆಯ ಜಯಂಕೊಂಡಮ್ ನಲ್ಲಿ ರವಿವಾರ ರಾತ್ರಿ ಸಂಭವಿಸಿದೆ.
ಗೋಡೆ ಕುಸಿತದಲ್ಲಿ ಇತ್ತೀಚೆಗೆ ಮೃತಪಟ್ಟ ವ್ಯಕ್ತಿಯ ಅಂತಿಮ ವಿಧಿ ವಿಧಾನಗಳನ್ನು ಮುಗಿಸಿಕೊಂಡು ತಮ್ಮ ಗ್ರಾಮಕ್ಕೆ ವಾಪಾಸಾಗುತ್ತಿದ್ದ 21 ಜನರನ್ನು ಹೊತ್ತಿದ್ದ ವ್ಯಾನ್ ಪುದುಕುಡಿಯಿಂದ ವಾಪಸಾಗುತ್ತಿತ್ತು. ಕಾಚಿಪೆರುಮಾಳ್ ನಲ್ಲಿ ಎದುರಿನಿಂದ ಬರುತ್ತಿದ್ದ ಸಿಮೆಂಟ್ ತುಂಬಿದ ಲಾರಿಗೆ ವ್ಯಾನ್ ಡಿಕ್ಕಿ ಹೊಡೆಯಿತು. ಪರಿಣಾಮವಾಗಿ ವ್ಯಾನ್ ನಲ್ಲಿದ್ದವರು ರಸ್ತೆ ಎಸೆಯಲ್ಪಟ್ಟರು. ಇವರಲ್ಲಿ ಐವರು ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟರು .ಗಾಯಗೊಂಡ ಇತರ 9 ಜನರನ್ನು ಜಯಂಕೊಂಡಮ್ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ.