ಬಿಹಾರಿಗಳ ಗಾಯಕ್ಕೆ ಉಪ್ಪು ಸವರಿದ ನ್ಯಾ. ಕಾಟ್ಜು

Update: 2016-09-26 16:00 GMT

ಹೊಸದಿಲ್ಲಿ, ಸೆ. 26 : " ಬಿಹಾರವನ್ನೂ ನೀವು ತೆಗೆದುಕೊಳ್ಳಬೇಕು. ಹಾಗಿದ್ದರೆ ಮಾತ್ರ ಕಾಶ್ಮೀರ ವನ್ನು ಕೊಡುತ್ತೇವೆ " ಎಂದು ವ್ಯಂಗ್ಯವಾಡಿರುವ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಮಾರ್ಕಂಡೇಯ ಕಾಟ್ಜು ಅವರ ಮೇಲೆ ಬಿಹಾರಿ ಬಾಬುಗಳು ಸಿಟ್ಟಾಗಿದ್ದಾರೆ !  ಈ ಬಗ್ಗೆ ಕಾಟ್ಜು ಅವರ ಫೇಸ್ ಬುಕ್ ಪೋಸ್ಟ್ ಇಲ್ಲಿದೆ: 


Full View

ಊರಿ ಆತ್ಮಹತ್ಯಾ ದಾಳಿಯಲ್ಲಿ ಬಲಿಯಾದ ಸೈನಿಕರಲ್ಲಿ ಮೂವರು ಬಿಹಾರಿಗಳೂ ಇದ್ದಾರೆ. ಇದೇ ಸಂದರ್ಭದಲ್ಲಿ ಕಾಟ್ಜು ಈ ರೀತಿ ಒಂದು ರಾಜ್ಯವನ್ನು ಗೇಲಿ ಮಾಡಿರುವುದು ಬಹಳ ಜನರಿಗೆ ಇಷ್ಟವಾಗಿಲ್ಲ. ಅದಕ್ಕೆ ಕಾಟ್ಜು ವಿರುದ್ಧ ಬಿಹಾರಿಗಳು ಸಾಮಾಜಿಕ ಜಾಲತಾಣದಲ್ಲಿ ಸೇಡು ತೀರಿಸಿಕೊಂಡ ಕೆಲವು ಸ್ಯಾಂಪಲ್ ಗಳು ಇಲ್ಲಿವೆ : 


Full ViewFull ViewFull ViewFull ViewFull ViewFull ViewFull ViewFull Viewಆದರೆ ಕಾಟ್ಜು ಹಾಗೆ ಸಣ್ಣ ಪೆಟ್ಟಿಗೆ ಬಗ್ಗುವವರಲ್ಲ. ಅವರು ಬಿಹಾರಿಗಳ ಸಿಟ್ಟು ನೋಡಿ ಸುಮ್ಮನಾಗುವ ಬದಲು ಅವರ ಗಾಯಕ್ಕೆ ಬರೆ ಎಳೆದಿದ್ದಾರೆ. ಅವರ ಜೋಕಿನಿಂದ ಸಿಟ್ಟಾದವರಿಗೆ ಪುಕ್ಕಟೆ ಸಲಹೆ ನೀಡಿದ್ದಾರೆ. " ನೀವು ಬಿಹಾರಿ ಜೋಕುಗಳನ್ನು ನಿಷೇಧಿಸುವಂತೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿ. ಈಗಾಗಲೇ ಸರ್ದಾರ್ಜಿ ಜೋಕುಗಳ ನಿಷೇಧ ಕೋರಿದ ಅರ್ಜಿ ಅಲ್ಲಿ ಬಾಕಿ ಇದೆ. ಇಂತಹ ವಿಷಯಗಳಿಗೆ ಸುಪ್ರೀಂ ಕೋರ್ಟ್ ಬಳಿ ಬೇಕಾದಷ್ಟು ಸಮಯವಿದೆ. ಗಂಭೀರ ವಿಷಯಗಳಿಗೆ ಅದರ ಬಳಿ ಸಮಯವಿಲ್ಲ. ಕೋರ್ಟು ಕೊಠಡಿಯಲ್ಲಿ ಸರ್ದಾರ್ಜಿಗಳು ಹಾಗು ಬಿಹಾರಿಗಳು ಒಟ್ಟಿಗೆ ಸೇರಿದ್ದನ್ನು ನೋಡಲು ಖುಷಿಯಾಗುತ್ತದೆ. ಒಟ್ಟಾರೆ ಎಲ್ಲ ಜೋಕುಗಳನ್ನು ನಿಷೇಧಿಸಲು ಹೇಳಿ. ಜೋಕು ಹೇಳಿದವರಿಗೆ ಜೈಲಿಗೆ ಹಾಕಲು ಹೇಳಿ . ಆಗ ಸಮಸ್ಯೆಯೇ ಇರುವುದಿಲ್ಲ " ಎಂದು ಬಿಹಾರಿಗಳಿಗೂ , ಸುಪ್ರೀಂ ಕೋರ್ಟ್ ಗೂ ಒಟ್ಟಿಗೆ ಕುಟುಕಿದ್ದಾರೆ ಮಾಜಿ ನ್ಯಾಯಾಧೀಶ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News