ಪಿಎಫ್ಐ ವತಿಯಿಂದ "ದ್ವೇಷ ರಾಜಕೀಯ ನಿಲ್ಲಿಸಿ" ಅಭಿಯಾನ

Update: 2016-09-27 04:27 GMT

ಉಳ್ಳಾಲ, ಸೆ.27: ಕೇಂದ್ರ ಸರಕಾರವು ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತ ವರ್ಗಗಳ ಮೇಲೆ ನಿರಂತರ ದೌರ್ಜನ್ಯವಾಗುತ್ತಿದೆ ಎಂದು ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯ ಅಬೂಬಕರ್ ಆರೋಪಿಸಿದ್ದಾರೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರಾದ್ಯಂತ ಹಮ್ಮಿಕೊಂಡಿರುವ "ದ್ವೇಷ ರಾಜಕೀಯ ನಿಲ್ಲಿಸಿ" ಅಭಿಯಾನದ ಅಂಗವಾಗಿ ಉಳ್ಳಾಲ ವಲಯದ ವತಿಯಿಂದ ಇತ್ತೀಚಿಗೆ ಕುತ್ತಾರ್ ಜಂಕ್ಷನ್ ನಲ್ಲಿ ನಡೆದ ಕಾರ್ನರ್ ಮೀಟ್ ನಲ್ಲಿ ಮಾತನಾಡಿದರು.

ಜಾತಿ , ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ಕೋಮು ದ್ವೇಷ ಹುಟ್ಟುಹಾಕಿಕೊಂಡು ಗೋ ಮಾಂಸ, ಸೂರ್ಯ ನಮಸ್ಕಾರ, ವಂದೇಮಾತರಂ ಹೆಸರಿನಲ್ಲಿ ಜನರ ಮದ್ಯೆ ಕಚ್ಚಾಟವನ್ನು ಉಂಟುಮಾಡುವ ಪರಿಸ್ಥಿತಿಯನ್ನು ಕೇಂದ್ರ ಸರಕಾರ ಪ್ರೇರಿತ ಸಂಘಪರಿವಾರ ನಡೆಸಿಕೊಂಡು ಬರುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಭಾರತ ಗೋಮಾಂಸ ರಫ್ತಿನಲ್ಲಿ ಮೊದಲ ಸ್ಥಾನದಲ್ಲಿದೆ. ಗೋವಿನಲ್ಲಿ ನಿಜಕ್ಕೂ ಪ್ರೀತಿಯಿದ್ದರೆ ಅಧಿಕಾರಕ್ಕೇರಿದಾಗಲೇ ಗೋ ಮಾಂಸ ರಫ್ತು ಮಾಡುವುದನ್ನು ನಿಲ್ಲಿಸಬೇಕಿತ್ತು. ಅದು ಬಿಟ್ಟು ಅಮಾಯಕರ ಮೇಲೆ ಹಲ್ಲೆ , ಕೊಲೆ ಮಾಡುವ ಮೂಲಕ ರಾಜಕೀಯ ಲಾಭ ಪಡೆಯುತ್ತಿದೆ. ಇಲ್ಲಿ ಯಾರಾದರೂ ಅನ್ಯಾಯ , ಆಕ್ರಮದ ವಿರುದ್ದ ದ್ವನಿ ಎತ್ತಿದರೆ ಅಂತಹವರಿಗೆ ದೇಶದ್ರೋಹದ ಪಟ್ಟ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಅಭಿಯಾನದ ಉಳ್ಳಾಲ ವಲಯ ಉಸ್ತುವಾರಿ ಅಬ್ಬಾಸ್ ಕಿನ್ಯ, ಉಳ್ಳಾಲ ವಲಯ ಪ್ರ.ಕಾರ್ಯದರ್ಶಿ ಸಿದ್ಕೀಕ್ ಕುಂಪಲ, ದೇರಳಕಟ್ಟೆ ಏರಿಯಾ ಕಾರ್ಯದರ್ಶಿ ಶಹೀದ್ ಕಿನ್ಯ, ಲತೀಫ್ ವಿದ್ಯಾನಗರ, ಹಸೈನಾರ್ ಮಲಾರ್, ಸಿದ್ದೀಕ್ ಉಳ್ಳಾಲ, ಮುಸ್ತಫ ಮಲಾರ್, ಆಶ್ರಫ್ ಮಾಚಾರ್, ಜಮಾಲ್ ಜೋಕಟ್ಟೆ, ನಾಸೀರ್ ವಿಧ್ಯಾನಗರ, ನೌಫಲ್ ಪನೀರ್ ಮುತಾಂದವರು ಉಪಸ್ಥಿತರಿದ್ದರು.

ಅಲ್ಲದೇ ಇದೇ ಸಂದರ್ಭದಲ್ಲಿ ಮದಕ, ಪಾವೂರು, ಗ್ರಾಮಚಾವಡಿ, ಇನೋಳಿ, ಮಲಾರ್, ಪಜೀರ್, ಕಲ್ಕಟ್ಟ, ತೌಡುಗೋಳಿ ಕ್ರಾಸ್, ಮುಡಿಪು,ದೇರಳಕಟ್ಟೆ, ಕೆ ಸಿ ರೋಡ್, ಬೀರಿ, ತೊಕ್ಕೊಟ್ಟು ಜಂಕ್ಷನ್, ಉಳ್ಳಾಲ ಮುಂತಾದ ಕಡೆಗಳಲ್ಲಿ ಕಾರ್ನರ್ ಮೀಟ್ ಹಾಗು ಬೀದಿನಾಟಕಗಳು ನಡೆಯಿತು. ಝಾಹೀದ್ ಮಲಾರ್ ಸ್ವಾಗತಿಸಿದರು. ರಹೀಂ ಮಲಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News