ಕ್ಯೂ ನಿಂತು ರಿಲಯನ್ಸ್ ಜಿಯೋ ಖರೀದಿಸುವ ಮುನ್ನ ತಿಳಿದಿರಲಿ..

Update: 2016-09-27 09:00 GMT

ಮುಖೇಶ್ ಅಂಬಾನಿ ರಿಲಯನ್ಸ್ ಜಿಯೋ ಸೇವೆಗಳನ್ನು ಈ ತಿಂಗಳ ಆರಂಭದಲ್ಲಿ ಬಿಡುಗಡೆ ಮಾಡಿದಂದಿನಿಂದ ಸುದ್ದಿಗೆ ಗ್ರಾಸವಾಗಿದೆ. ಅಗ್ಗದ ದರದಲ್ಲಿ 4ಜಿ ಕೊಡುತ್ತಿರುವುದು ಮತ್ತು ಬಳಕೆದಾರರಿಗೆ ಉಚಿತ ಧ್ವನಿ ಕರೆಗಳನ್ನು ಕೊಡುತ್ತಿರುವುದೇ ಅದಕ್ಕೆ ಕಾರಣವಾಗಿದೆ. ಆದರೆ ವ್ಯವಸ್ಥಿತ ಸೇವೆಯ ಕೊರತೆಯಿಂದಾಗಿ ಗ್ರಾಹಕರು ಜಿಯೋ ಮಳಿಗೆಗಳಲ್ಲಿ ಉದ್ದನೆಯ ಸರತಿಯಲ್ಲಿ ನಿಂತು ಸಿಮ್ ಕಾರ್ಡ್‌ಗಳನ್ನು ತೆಗೆದುಕೊಳ್ಳುವಂತಾಗಿದೆ. ಆದರೆ ರಿಲಯನ್ಸ್ ಜಿಯೋನಲ್ಲಿ ದೋಷಗಳೇ ಇಲ್ಲವೆಂದೇನೂ ಅಲ್ಲ. ಹೆಸರು ಹೇಳದ ಜನಪ್ರಿಯ ಹ್ಯಾಕರ್ ಗ್ರೂಪ್ ಪ್ರಕಾರ ಜಿಯೋ ಈಗಲೂ ಬಳಕೆದಾರರ ಕರೆ ಮಾಹಿತಿಯನ್ನು ವಿದೇಶಗಳಿಗೆ ಹಂಚುತ್ತಿದೆ. ಕಳೆದ ವಾರ ಅಪರಿಚಿತ ಪೋಸ್ಟ್ ಒಂದು ತನ್ನ ಟಂಬ್ಲರ್ ಖಾತೆಗೆ ಅಪ್‌ಲೋಡ್ ಮಾಡಿದ ವಿವರಗಳ ಪ್ರಕಾರ, ರಿಲಯನ್ಸ್ ಜಿಯೋ ಈಗಲೂ ತನ್ನ ಕರೆ ಮಾಹಿತಿಯನ್ನು ವಿದೇಶಗಳಿಗೆ ಹಂಚುತ್ತಿದೆ. ಒಂದು ವರ್ಷವಾದರೂ ಏನೂ ಬದಲಾಗಿಲ್ಲ!

ಬಳಕೆದಾರರ ಸ್ಥಳವನ್ನು ಚೀನಾ ಜೊತೆಗೆ ಜಿಯೋ ಹೇಗೆ ಹಂಚಿಕೊಳ್ಳುತ್ತಿದೆ ಎಂದು ಒಂದು ಪೋಸ್ಟ್ ವರ್ಷಗಳ ಹಿಂದೆಯೇ ಉಲ್ಲೇಖಿಸಿತ್ತು. ಅದನ್ನೇ ಸೂಚಿಸಿ ಈಗಲೂ ಜಿಯೋ ಅದೇ ಕೆಲಸ ಮಾಡುತ್ತಿದೆ ಎಂದು ಅಪರಿಚಿತ ಖಾತೆ ಹೇಳಿದೆ. ಅಲ್ಲದೆ, ಈಗ ಜಿಯೋ ಬಳಕೆದಾರರ ಕರೆ ವಿವರಗಳನ್ನು ಅಮೆರಿಕ ಮತ್ತು ಸಿಂಗಾಪುರದ ಜೊತೆಗೆ ಹಂಚಿಕೊಳ್ಳುತ್ತಿದೆ ಎಂದು ಹೇಳಿದೆ.

ಹ್ಯಾಕರ್ ಗ್ರೂಪ್ ಒಂದು ವೀಡಿಯೊ ಲಿಂಕ್ ಅನ್ನೂ ಪೋಸ್ಟ್ ಮಾಡಿದೆ. ಅದರಲ್ಲಿ ಸೂಕ್ತ ಜ್ಞಾನವಿರುವವರು ಮೈಜಿಯೋ ಮತ್ತು ಜಿಯೋಡಯಲರ್ ಆಪ್‌ಗಳನ್ನು ಡೌನ್ಲೋಡ್ ಮಾಡುವುದು ಮತ್ತು ಬಳಸುವುದನ್ನು ನಕಲಿ ಮಾಡಬಹುದು ಎಂದು ವಿವರಿಸಿದೆ. ರಿಲಯನ್ಸ್ ಈ ಆರೋಪಗಳಿಗೆ ಇನ್ನೂ ಉತ್ತರಿಸಿಲ್ಲ. ಇತ್ತೀಚೆಗೆ ರಿಲಯನ್ಸ್ ತನ್ನ ಜಿಯೋ ಗಿಗಾಫೈಬರ್ ಪ್ಲಾನ್ ಅನ್ನು ಸಾರ್ವಜನಿಕ ಪರೀಕ್ಷೆಗೆ ಇಟ್ಟಿದೆ. ಕಂಪೆನಿಯ ದರ ಯೋಜನೆಗಳ ವಿವರಗಳು ಕೂಡ ಹೊರಬಂದಿವೆ. ಫೈಬರ್‌ಯೋಜನೆಗಳು ಸಿಲ್ವರ್, ಗೋಲ್ಡ್ ಮತ್ತು ಪ್ಲಾಟಿನಂ ಹಂತಗಳಲ್ಲಿ ಲಭ್ಯವಿದ್ದು, ಮೂಲ ಬೆಲೆ ರೂ. 500ರಿಂದ ಆರಂಭವಾಗುತ್ತದೆ. ಯೋಜನೆಯನ್ನು ಡಾಟಾ ಗಾತ್ರ ಮತ್ತು ವೇಗಗಳಿಗೆ ಅನುಸಾರ ಹಂಚಲಾಗುತ್ತಿದೆ. ಮೂಲ ಬೆಲೆಯು 90 ದಿನಗಳಿಗೆ 100ಜಿಬಿ ಉಚಿತ ಡಾಟಾದೊಂದಿಗೆ ಬರುತ್ತಿದೆ. ಜೊತೆಗೆಯೇ ಜಿಯೋ ಆಪ್‌ಗಳಾದ ಜಿಯೋ ಟಿವಿ, ಜಿಯೋ ಸಿನೆಮಾ ಮತ್ತು ಜಿಯೋ ಬೀಟ್ಸ್ ಬಳಸಬಹುದು.

ಕೃಪೆ:www.gadgetsnow.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News