ಮಾವೋವಾದಿಗಳು, ಪೊಲೀಸರ ನಡುವೆ ಘರ್ಷಣೆ

Update: 2016-09-27 09:03 GMT

ನಿಲಂಬೂರ್, ಸೆ.27: ಕರುಳಾಯಿ ಅರಣ್ಯದೊಳಗಿರುವ ಮುಂಡಕ್ಕಡವ್ ಕಾಲನಿಯಲ್ಲಿ ಮಾವೋವಾದಿಗಳು ಮತ್ತು ಪೊಲೀಸರ ನಡುವೆ ಗುಂಡುಹಾರಾಟ ಸೋಮವಾರ ರಾತ್ರಿ ಎಂಟೂವರೆ ಗಂಟೆಯ ವೇಳೆಗೆ ನಡೆದಿದೆ ಎಂದು ವರದಿಯಾಗಿದೆ.

  ನೆಡುಂಕಯದಿಂದ ಐದು ಕಿ.ಮೀ. ಅರಣ್ಯದ ಒಳಪ್ರದೇಶದಲ್ಲಿ ಮುಂಡಕ್ಕಡವ್ ಕಾಲನಿ ಇದೆ. ಸಂಜೆ ಆರೂವರೆಗಂಟೆ ಮತ್ತು ಏಳು ಗಂಟೆಗಳ ನಡುವೆ ಮಹಿಳೆ ಸಹಿತ ಆರು ಮಂದಿಮಾವೋವಾದಿಗಳು ಕಾಲನಿಗೆ ಬಂದು ಆದಿವಾಸಿಗಳಿಗೆ ತರಗತಿ ನಡೆಸುತ್ತಿದ್ದಾರೆಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈಹಿನ್ನೆಲೆಯಲ್ಲಿ ನಿಲಂಬೂರು ಸರ್ಕಲ್ ಇನ್ಸ್‌ಪೆಕ್ಟರ್ ದೇವಸ್ಯರ ನೇತೃತ್ವದ ಪೊಲೀಸರ ತಂಡವೊಂದು ಅಲ್ಲಿಗೆ ತೆರಳಿತ್ತು.

ಆಗ ಕಾಲನಿಯಿಂದ ಕಾಡಿಗೆ ಬಂದ ಮಾವೋವಾದಿಗಳು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ ಎನ್ನಲಾಗುತ್ತಿದೆ. ಕಾಡಿನಿಂದ ಗುಂಡುಹಾರಾಟದ ಸದ್ದು ಕೇಳಿಸಿವೆ ಎಂದು ಕೆಲವು ಸ್ಥಳೀಯರು ಮತ್ತು ಅರಣ್ಯಪಾಲಕರು ಹೇಳಿದ್ದಾರೆ. ನಂತರ ವಿಷಯವರಿತ ಜಿಲ್ಲಾಪೊಲೀಸ್ ಮುಖ್ಯಸ್ಥ ದೇಬಶ್ ಕುಮಾರ್‌ಬೆಹ್ರ ನೇತೃತ್ವದಲ್ಲಿ ಭಾರೀಪೊಲೀಸರ ಸನ್ನಾಹವೇ ಕಾಲನಿಗೆ ತೆರಳಿದೆ. ತಡರಾತ್ರಿಯವರೆಗೂ ಪೊಲೀಸರು ಅಲ್ಲಿದ್ದರು. ಗುಂಡುಹಾರಾಟದಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News