ಮೇನಕಾ ಗಾಂಧಿಗೆ ಅಂಚೆಯಲ್ಲಿ ಬೀದಿನಾಯಿ ಕಳಿಸಿದರು !

Update: 2016-09-27 09:51 GMT

ಕೋಟ್ಟಯಂ, ಸೆಪ್ಟಂಬರ್, 27: ಕೇಂದ್ರಸಚಿವೆ ಮೇನಕಾ ಗಾಂಧಿಗೆ ತಮ್ಮ ವಿರೋಧವನ್ನು ತಿಳಿಸಲಿಕ್ಕಾಗಿ ಇಲ್ಲಿನ ಯೂತ್‌ಫ್ರಂಟ್(ಎಂ) ನಾಯಿಗಳನ್ನು ಕೊಂದು ಕೋಲಿಗೆ ಕಟ್ಟಿ ಮೆರವಣಿಗೆ ನಡೆಸಿದ್ದು, ನಂತರ ಪ್ರತಿಭಟನಾಕಾರರು ಮೇನಕಾರ ಫೋಟೊಕ್ಕೆ ಚಪ್ಪಲಿ ಹಾರ ಹಾಕಿದ್ದಾರೆ. ಕೊಳೆತ ಮೊಟ್ಟೆಯನ್ನು ಎಸೆದಿದ್ದಾರೆ ಎಂದು ವರದಿಯಾಗಿದೆ.

 ನಾಯಿಗಳ ಶವಗಳೊಂದಿಗೆ ಪ್ರತಿಭಟನೆ ನಡೆಸಿದ ಬಳಿಕ ಅದನ್ನು ಮೇನಕಾರಿಗೆ ಕಳುಹಿಸಿಕೊಡುವುದಕ್ಕಾಗಿ ಕೋಟ್ಟಯಂ ಹೆಡ್‌ಪೋಸ್ಟ್ ಆಫೀಸಿನ ಮೆಟ್ಟಿಲ ಬಳಿ ಇರಿಸಿ ಪ್ರತಿಭಟನಾಕಾರರು ಹೋಗಿದ್ದಾರೆ. ನಂತರ ನಗರಸಭೆಯ ಅಧಿಕಾರಿಗಳು ನಾಯಿಗಳ ಶವವನ್ನು ಹೂಳುವ ವ್ಯವಸ್ಥೆಯನ್ನು ಮಾಡಿದ್ದಾರೆ.

ಘಟನೆಯ ಕುರಿತು ಕೋಟ್ಟಯಂ ವೆಸ್ಟ್ ಪೊಲೀಸರು ಕೇಸು ದಾಖಲಿಸಿದ್ದಾರೆ. ನಾಯಿಗಳೊಂದಿಗೆ ಕ್ರೂರವಾಗಿ ವರ್ತಿಸಿದ್ದಾರೆಂದು ಕೇಸುದಾಖಲಾಗಿದೆ. ಮಂಗಳವಾರ ನಾಯಿಗಳ ಶವವನ್ನು ಮೇಲೆತ್ತಿ ಪೋಸ್ಟ್‌ಮಾರ್ಟಂ ನಡೆಸಲಾಗುವುದು ಎನ್ನಲಾಗಿದೆ. ಪ್ರತಿಭಟನಾಕಾರರು ಮೇನಕಾರ ಫೋಟೊಕ್ಕೆ ಚಪ್ಪಲಿ ಹಾರ ಹಾಕಿದರು. ಕೊಳೆತ ಮೊಟ್ಟೆಯನ್ನು ಎಸೆದಿದ್ದಾರೆ. ಬೀದಿನಾಯಿಗಳನ್ನು ಸಂರಕ್ಷಣೆ ಮಾಡಬೇಕೆಂಬ ಕೇಂದ್ರಸಚಿವೆ ಮೇನಕಾಗಾಂಧಿಯ ನಿಲುವಿನ ವಿರುದ್ಧ ಯೂತ್‌ಫ್ರಂಟ್ ಪ್ರತಿ ಭಟನೆ ಹಮ್ಮಿಕೊಂಡಿತ್ತು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News