ಬ್ರಿಟನ್: ಮುಸ್ಲಿಂ ಅಧ್ಯಾಪಕಿಯನ್ನು ಹೊರಗಟ್ಟಿದ ಶಾಲೆ

Update: 2016-09-27 10:06 GMT

ಬರ್ಮಿಂಗ್‌ಹ್ಯಾಮ್, ಸೆ. 27: ವಿದ್ಯಾರ್ಥಿಗಳಿಗೆ ವರ್ಲ್ಡ್ ಟ್ರೇಡ್ ಸೆಂಟರ್ ಧರಾಶಾಯಿಯಾದ ಸೆಪ್ಟಂಬರ್ ಹನ್ನೊಂದರ ಭಯೋತ್ಪಾದನಾ ದಾಳಿಯ ವೀಡಿಯೊ ದೃಶ್ಯಗಳನ್ನು ಮಕ್ಕಳಿಗೆ ತೋರಿಸದಂತೆ ತಡೆದಿದ್ದಕ್ಕೆ ಮುಸ್ಲಿಂ ಅಧ್ಯಾಪಕಿಯನ್ನು ಶಾಲೆಯ ಅಧಿಕಾರಿಗಳು ಕೆಲಸದಿಂದ ತೆಗೆದು ಹಾಕಿದ ಘಟನೆ ವರದಿಯಾಗಿದೆ.

  ಬರ್ಮಿಂಗ್‌ಹ್ಯಾಮ್ ಹರ್ಟ್‌ಲೆಂಡ್ಸ್ ಅಕಾಡಮಿಯ ಶಾಲೆಯಲ್ಲಿ ಅಧ್ಯಾಪಕಿಯಾದ ಸುರಿಯಾಬಿಯವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ,9/11ರ ವರ್ಲ್ಡ್‌ಟ್ರೇಡ್ ಸೆಂಟರ್ ದಾಳಿಯ ಗ್ರಾಫಿಕ್ ವೀಡಿಯೊ ಮಕ್ಕಳಿಗೆ ತೋರಿಸದಂತೆ ವಿರೋಧಿಸಿದ್ದು, ಸುರಿಯಾಬಿಯನ್ನು ಶಾಲಾಡಳಿತ ಮಂಡಳಿ ಕೆಲಸದಿಂದ ತೆಗೆದು ಹಾಕಲು ಕಾರಣವಾಗಿದೆ.

"ಹನ್ನೊಂದು ಮತ್ತು ಹನ್ನೆರಡು ವರ್ಷದ ಮಕ್ಕಳಲ್ಲಿ ಭೀತಿಹುಟ್ಟಿಸುವಂತೆ ವೀಡಿಯೊದಲ್ಲಿ ದೃಶ್ಯಗಳಿವೆ. ಅವಳಿಗೋಪುರದಿಂದ ಜನರು ಕೆಳಗೆ ಹಾರಿ ಆತ್ಮಹತ್ಯೆ ಮಾಡುತ್ತಿರುವ ದೃಶ್ಯಗಳು ಕೂಡಾ ವೀಡಿಯೊದಲ್ಲಿದೆ. ಇದು ಮಕ್ಕಳ ಮನಸ್ಸಿಗೆ ಆಘಾತ ನೀಡಬಹುದು. ಅದ್ದರಿಂದ ಆ ವೀಡಿಯೊವನ್ನು ತೋರಿಸಲು ಅಸಹಮತವನ್ನು ವ್ಯಕ್ತಪಡಿಸಿರುವೆ" ಎಂದು ಸರಿಯಾಬಿಯ ವಾದವಾಗಿದೆ.

ಇಂತಹ ವೀಡಿಯೊಗಳನ್ನು ತೋರಿಸುವ ಮೂಲಕ ಮಕ್ಕಳನ್ನು ಅಕ್ರಮಿಗಳನ್ನಾಗಿಸಲಷ್ಟೆ ಪ್ರಯೋಜನವಾಗಬಹುದು. ತಾನು ಕ್ಲಾಸಿಗೆ ಬರುವಾಗ ಮಕ್ಕಳಿಗೆ ಈ ವೀಡಿಯೊ ತೋರಿಸಲಾಗುತ್ತಿತ್ತು. ತಾನು ಅದನ್ನು ಕೂಡಲೇ ವಿರೋಧಿಸಿದೆ ಎಂದು ಸುರಿಯಾಬಿ ಹೇಳಿದ್ದಾರೆ. ಆಗ ರೆಫರಿ ವಿಝಿಲ್ ಹಾಕಿ ಹೊರಗೆ ಕಳುಹಿಸುವಂತೆ ತನ್ನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಸುರಿಯಾಬಿ ಆಕ್ಸಫರ್ಡ್ ಪದವೀಧರೆಯಾಗಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News