ಜಗತ್ತಿನಲ್ಲಿ ಶೇ.90ರಷ್ಟು ಮಂದಿ ಮಲಿನ ಗಾಳಿಯನ್ನೇ ಉಸಿರಾಡುತ್ತಿದ್ದಾರೆ: ಡಬ್ಲ್ಯೂ ಎಚ್ ಒ

Update: 2016-09-27 10:38 GMT

ಜಿನೀವ, ಸೆಪ್ಟಂಬರ್ 27: ಜಗತ್ತಿನಲ್ಲಿ ಹತ್ತರಲ್ಲಿ ಒಂಬತ್ತು ಮಂದಿ ಮಲಿನವಾಯುವನ್ನು ಉಸಿರಾಡುತ್ತಿದ್ದಾರೆಂದು ವಿಶ್ವಾರೋಗ್ಯ ಸಂಘಟನೆ(ಡಬ್ಲ್ಯೂ ಎಚ್ ಒ) ಹೇಳಿದೆ ಎಂದು ವರದಿಯಾಗಿದೆ.

ಮಲೀನೀಕರಣದಿಂದಾಗಿ ಜಗತ್ತಿನಲ್ಲಿ ಪ್ರತಿವರ್ಷವೂ ಅರುವತ್ತು ಲಕ್ಷ ಮಂದಿ ಮೃತರಾಗುತ್ತಿದ್ದಾರೆ. ವಾಯುಮಲಿನವನ್ನು ತಡೆಯಲು ಬಲಿಷ್ಠಕ್ರಮಗಳಾಗಬೇಕೆಂದು ಅದು ಆಗ್ರಹಿಸಿದೆ.

ಸಾರ್ವಜನಿಕಾರೋಗ್ಯವನ್ನು ಗಂಭೀರವಾಗಿ ಬಾಧಿಸುವ ಮಲಿನೀಕರಣವನ್ನು ತಡೆಯಲು ತುರ್ತಾಗಿ ಕ್ರಮಗಳನ್ನು ಕೈಗೊಳ್ಳಬೇಕಿದೆ. ಅದಕ್ಕೆ ಇನ್ನೂ ಕಾದು ಕುಳಿತಿಕೊಳ್ಳಬಾರದು ಡಬ್ಲ್ಯು ಎಚ್‌ಒ ಪರಿಸರ ಸಾರ್ವಜನಿಕಾರೋಗ್ಯ ವಿಭಾಗದ ಮು ಖ್ಯಸ್ಢೆ ಮರಿಯಾ ನೆಯ್‌ರ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News