ನಮ್ಮ ಸೇವೆಗೆ ಜಗತ್ತಿನ ದೇಶಗಳು ಹಣ ನೀಡಬೇಕು: ಟ್ರಂಪ್
Update: 2016-09-27 22:06 IST
ದೀರ್ಘಕಾಲೀನ ಮಿತ್ರ ದೇಶಗಳ ಬದ್ಧತೆಯನ್ನು ಪ್ರಶ್ನಿಸುವ ತನ್ನ ಹೇಳಿಕೆಗಳನ್ನು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಸೋಮವಾರ ಸಮರ್ಥಿಸಿಕೊಂಡಿದ್ದಾರೆ ಹಾಗೂ ಜಪಾನ್‌ನಂಥ ದೇಶಗಳು ತಾವು ಪಡೆಯುವ ಸೇವೆಗಳಿಗಾಗಿ ಹಣ ನೀಡಬೇಕಾಗಿದೆ ಎಂದರು.
ಅಧ್ಯಕ್ಷೀಯ ಅಭ್ಯರ್ಥಿಗಳ ಚರ್ಚೆಯ ವೇಳೆ ಮಾತನಾಡಿದ ಅವರು, ‘‘ನಾವು ಜಗತ್ತಿನ ಪೊಲೀಸ್ ಆಗಲು ಸಾಧ್ಯವಿಲ್ಲ, ಜಗತ್ತಿನೆಲ್ಲೆಡೆ ಇರುವ ದೇಶಗಳನ್ನು ನಾವು ರಕ್ಷಿಸಲು ಸಾಧ್ಯವಿಲ್ಲ. ನಮ್ಮ ಸೇವೆಗೆ ಅವರು ಹಣ ಕೊಡಬೇಕು’’ ಎಂದು ಅವರು ನುಡಿದರು.