×
Ad

ಕರಾಚಿ ವಾಯು ಪ್ರದೇಶದಲ್ಲಿ ತಗ್ಗಿನಲ್ಲಿ ವಿಮಾನ ಹಾರಾಟ ನಿಷೇಧಿಸಿದ ಪಾಕ್

Update: 2016-09-27 22:11 IST

ಹೊಸದಿಲ್ಲಿ, ಸೆ. 27: ಭಾರತದೊಂದಿಗಿನ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ, ಕರಾಚಿ ವಾಯುಪ್ರದೇಶದಲ್ಲಿ ತಗ್ಗಿನಲ್ಲಿ ವಿಮಾನ ಹಾರಾಟವನ್ನು ಸೋಮವಾರದವರೆಗೆ ಪಾಕಿಸ್ತಾನ ನಿಷೇಧಿಸಿದೆ.
ಕರಾಚಿಯು ಗುಜರಾತ್ ಮತ್ತು ರಾಜಸ್ಥಾನಗಳಲ್ಲಿರುವ ಅಂತಾರಾಷ್ಟ್ರೀಯ ಗಡಿಯಿಂದ ಕೂಗಳತೆಯ ದೂರದಲ್ಲಿದೆ.
ಕರಾಚಿ ಹಾರಾಟ ಮಾಹಿತಿ ವಲಯದ ವ್ಯಾಪ್ತಿಯಲ್ಲಿ ಬರುವ ಕೆಲವು ಅಂತಾರಾಷ್ಟ್ರೀಯ ವಾಯು ಸಂಚಾರ ಸೇವೆಗಳ ಮಾರ್ಗಗಳು ಅನಿವಾರ್ಯ ಕಾರಣಗಳಿಗಾಗಿ ನೆಲದಿಂದ 33,000 ಅಡಿ ಎತ್ತರವರೆಗಿನ ಪ್ರದೇಶದಲ್ಲಿ ಲಭ್ಯವಿರುವುದಿಲ್ಲ ಎಂದು ಪಾಕಿಸ್ತಾನ ಸೋಮವಾರ ರಾತ್ರಿ ಸೂಚನೆ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News