ಭೂಮಿ ಕುದಿಯುತ್ತಿದೆ!
ಭೂಮಿಯು ಇನ್ನೊಂದು ದಶಕದಲ್ಲಿ 1.5ಸೆ. ಜಾಗತಿಕ ಗಂಭೀರ ತಾಪಮಾನದ ಹೊಸ್ತಿಲಿಗೆ ತಲುಪಲಿದ್ದು ಈಗಾಗಲೇ ಈ ಎಚ್ಚರಿಕೆಯ ಮಿತಿಯತ್ತ ಮೂರನೆ ಎರಡರಷ್ಟು ಸಮೀಪ ತಲುಪಿದೆ ಎಂದು ಇತ್ತೀಚೆಗೆ ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲೆಂಡ್‌ನ ಹವಾಮಾನ ಸಂಶೋಧಕ ರಿಚರ್ಡ್ ಬೆಟ್ಸ್ ಅವರ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಹಸಿರುಮನೆ ಅನಿಲ ಹೊರಸೂಸುವಿಕೆ ಪ್ರಕ್ರಿಯೆಯು 1.5ಸೆ. ತಾಪಮಾನ ಗುರಿಯನ್ನು ತಲುಪುವುದನ್ನು ತಡೆಯುವಷ್ಟು ಮಟ್ಟಿಗೆ ನಿಧಾನವಾಗುವ ಯಾವುದೇ ಸಾಧ್ಯತೆಗಳು ಇಲ್ಲ ಎಂದು ಹೇಳಿಕೊಂಡಿದ್ದಾರೆ.
ಕಳೆದ ವರ್ಷ 195 ದೇಶಗಳು ಭಾಗಿಯಾಗಿದ್ದ ಪ್ಯಾರೀಸ್ ಒಪ್ಪಂದದಲ್ಲಿ ಜಾಗತಿಕ ತಾಪಮಾನವನ್ನು 1.5ಸೆ. ಗೆ ತಡೆಯುವ ಗುರಿಗೆ ಸಮ್ಮತಿ ಸೂಚಿಸಲಾಗಿತ್ತು. ಆದರೆ ಭೂಮಿಯ ತಾಪಮಾನ ತಿಂಗಳಿನಿಂದ ತಿಂಗಳಿಗೆ ಹೆಚ್ಚಾಗುತ್ತಲೇ ಸಾಗುತ್ತಿದ್ದು 2016 ಇಲ್ಲಿಯವರೆಗಿನ ಅತ್ಯಂತ ಹೆಚ್ಚು ತಾಪಮಾನ ಹೊಂದಿರುವ ವರ್ಷವೆಂದು ಹೇಳಲಾಗುತ್ತಿದೆ. ವಿಜ್ಞಾನಿಗಳ ಪ್ರಕಾರ ಭೂಮಿಯು ಕನಿಷ್ಠ 2.7ಸೆ. ಜಾಗತಿಕ ತಾಪಮಾನ ಹೊಂದುವ ಪಥದಲ್ಲಿ ಸಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಸ್ಕಾಟ್‌ಲ್ಯಾಂಡ್‌ನ ಅಬೆರ್ಡೀನ್ ವಿಶ್ವವಿದ್ಯಾನಿಲಯದಲ್ಲಿ ಸಸ್ಯ ಮತ್ತು ಮಣ್ಣಿನ ವಿಜ್ಞಾನಿಯಾಗಿರುವ ಪೀಟ್ ಸ್ಮಿತ್ ಹೇಳುವಂತೆ ತಾಪಮಾನ ಏರಿಕೆಯ ವಿರುದ್ಧ ಹೋರಾಡಲು ಬೃಹತ್ ಮಟ್ಟದಲ್ಲಿ ಜೀವನಶೈಲಿಯನ್ನು ಬದಲಿಸುವ ಅಗತ್ಯವಿದೆ, ಉದಾಹರಣೆಗೆ ಹೆಚ್ಚು ಪುಷ್ಟಿಕರ ಪಥ್ಯ, ಆಹಾರ ಪೋಲು ಮಾಡುವುದನ್ನು ಕಡಿಮೆಗೊಳಿಸುವುದು ಮತ್ತು ಕೆಂಪು ಮಾಂಸದ ಕಡಿಮೆ ಸೇವನೆ ಮತ್ತು ಹಸಿರುಮನೆ ಅನಿಲದಿಂದ ತುಂಬಿರುವ ತರಕಾರಿಗಳನ್ನು ಕಡಿಮೆ ಆಮದು ಮಾಡಿಕೊಳ್ಳುವುದು. ‘‘ನಡವಳಿಕೆಯಲ್ಲಿ ಬಹಳಷ್ಟು ಬದಲಾವಣೆ ಗಳನ್ನು ತರುವ ಅಗತ್ಯವಿದೆ, ಕೇವಲ ಸರಕಾರ ದಿಂದ ಮಾತ್ರವಲ್ಲ ನಮ್ಮಲ್ಲೂ ಕೂಡಾ’’ ಎಂದವರು ಹೇಳುತ್ತಾರೆ. ‘‘ಸೂರ್ಯನ ಬೆಳಕನ್ನು ತಡೆಯುವಂತಹ ವಿವಾದಾತ್ಮಕ ಜಿಯೋಎಂಜಿನಿಯರಿಂಗ್ ತಂತ್ರಗಳು ಕೆಲವು ದೇಶಗಳಲ್ಲಿ ರೂಢಿಯಾಗಲಿವೆ’’ ಎಂದವರು ಎಚ್ಚರಿಸುತ್ತಾರೆ. ಎಚ್ಚರಿಕೆಯು, ಅಂತಾರಾಷ್ಟ್ರೀಯ ತೈಲ ಬದಲಾವಣೆ ಸಂಸ್ಥೆಯು ಬಿಡುಗಡೆ ಮಾಡಿರುವ ವರದಿಯಲ್ಲಿ ಇನ್ನು ಪಳೆಯುಳಿಕೆ ಇಂಧನವನ್ನು ಪಡೆಯಲು ಕೇವಲ 17 ವರ್ಷಗಳಷ್ಟೇ ಉಳಿದಿದ್ದು ಇಲ್ಲವಾದಲ್ಲಿ ಹಿಂದೆಂದೂ ಕಂಡಿಲ್ಲದ ಸರಿಪಡಿಸಲಾಗದ ಹವಾಮಾನ ದುರಂತವನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿರುವ ದಿನವೇ ಬಂದಿದೆ.
ಆದರೆ ಇದಕ್ಕಿಂತಲೂ ಹೆಚ್ಚು ಕೆಟ್ಟ ಸುದ್ದಿ ಮೊನ್ನೆ ಗುರುವಾರದಂದು ಹೊರಬಿದ್ದಿದ್ದು ಜರ್ನಲ್ ಸೈನ್ಸ್‌ನಲ್ಲಿ ಪ್ರಕಟವಾಗಿರುವ ಹೊಸ ಅಧ್ಯಯನದಲ್ಲಿ ಭೂಮಿಯು ಇಂಗಾಲವನ್ನು ಹಿಂದೆ ಅಂದಾಜಿಸಿದಕ್ಕಿಂತ ಕಡಿಮೆ ವೇಗದಲ್ಲಿ ಹೀರಿಕೊಳ್ಳುತ್ತಿದೆ ಎಂಬುದು ಕಂಡುಬಂದಿದ್ದು ಇದರರ್ಥ ಪಾರಿಸಾರಿಕ ಪ್ರಯತ್ನಗಳಿಗೆ ಬಹುದೊಡ್ಡ ಹೊಡೆತ ಬೀಳಲಿದೆ. ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿರುವಂತೆ ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದಲ್ಲಿ ಮಣ್ಣನ್ನು ಪ್ರಮುಖ ಅಸ್ತ್ರ ಎಂದು ಭಾವಿಸಲಾಗಿತ್ತು. ಯಾಕೆಂದರೆ ಮಣ್ಣು ಇಂಗಾಲವನ್ನು ಹಿಡಿದಿಡುವ ಗುಣವನ್ನು ಹೊಂದಿದ್ದು ನಿಧಾನವಾಗಿ ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ. ಆದರೆ ವಿಜ್ಞಾನಿಗಳು ಈ ಹಿಂದೆ ಭಾವಿಸಿದ್ದಂತಲ್ಲದೆ ಮಣ್ಣು ಇಂಗಾಲವನ್ನು ಹೀರಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಿದ್ದು ಇದರರ್ಥ ಈ ಶತಮಾನದಲ್ಲಿ ಇಂಗಾಲವನ್ನು ಹೀರುವ ಮಣ್ಣಿನ ಸಾಮರ್ಥ್ಯ ವಿಜ್ಞಾನಿಗಳು ಈ ಹಿಂದೆ ಅಂದಾಜಿಸಿದ ಪ್ರಮಾಣದ ಕೇವಲ ಅರ್ಧವಾಗಿದೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಪರಿಸರ ಬದಲಾವಣೆ ಸಂಸ್ಥೆಯ ನಿರ್ದೇಶಕ ಜಿಮ್ ಹಾಲ್ ಹೇಳುವಂತೆ, ಆಶ್ಚರ್ಯವೊಂದಕ್ಕೆ ನಾವು ಈಗಾಗಲೇ ಸಿದ್ಧ್ದಗೊಳ್ಳಬೇಕಿದೆ.
ಕೃಪೆ: countercurrents.org
ಆದರೆ ಭೂಮಿಯ ತಾಪಮಾನ ತಿಂಗಳಿನಿಂದ ತಿಂಗಳಿಗೆ ಹೆಚ್ಚಾಗುತ್ತಲೇ ಸಾಗುತ್ತಿದ್ದು 2016 ಇಲ್ಲಿಯವರೆಗಿನ ಅತ್ಯಂತ ಹೆಚ್ಚು ತಾಪಮಾನ ಹೊಂದಿರುವ ವರ್ಷವೆಂದು ಹೇಳಲಾಗುತ್ತಿದೆ. ವಿಜ್ಞಾನಿಗಳ ಪ್ರಕಾರ ಭೂಮಿಯು ಕನಿಷ್ಠ 2.7ಸೆ ಜಾಗತಿಕ ತಾಪಮಾನ ಹೊಂದುವ ಪಥದಲ್ಲಿ ಸಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.