ಇದ್ದಕ್ಕಿದ್ದಂತೆ ನಿಮಗೆ ಮುಸ್ಲಿಮರ ನೆನಪಾಗಿದ್ದು ಹೇಗೆ?: ಮೋದಿಗೆ ಶಿವಸೇನೆ ಪ್ರಶ್ನೆ

Update: 2016-09-29 06:07 GMT

ಮುಂಬೈ, ಸೆ.29: ಕೇರಳದ ಕೊಝಿಕ್ಕೋಡ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಸ್ಲಿಮರ ವಿಚಾರವಾಗಿ ನೀಡಿದ ಹೇಳಿಕೆಗೆ ಸಂಬಂದಿಸಿ ಪ್ರತಿಕ್ರಿಯಿಸಿರುವ ಬಿಜೆಪಿಯ ಮೈತ್ರಿ ಪಕ್ಷ ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ, ‘‘ಇಂದು ಮೋದಿಗೆ ಇದ್ದಕ್ಕಿದ್ದಂತೆ ಮುಸ್ಲಿಮರ ನೆನಪಾಗಿದ್ದು ಹೇಗೆ?’’ ಎಂದು ಪ್ರಶ್ನಿಸಿದ್ದಾರೆ.

‘‘ಮುಸ್ಲಿಮರನ್ನು ಕೇವಲ ಮತ ಬ್ಯಾಂಕ್ ಗಳೆಂದು ಪರಿಗಣಿಸದೆ ಅವರನ್ನು ನಮ್ಮವರೆಂದೇ ತಿಳಿದು ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುವುದು ಅಗತ್ಯವಾಗಿದೆ’’ ಎಂದು ಮೋದಿ ರವಿವಾರ ಕೇರಳದಲ್ಲಿಬಿಜೆಪಿ ಸಭೆಯೊಂದರಲ್ಲಿಹೇಳಿದ್ದರಲ್ಲದೆ ‘‘ಮುಸ್ಲಿಮರುದ್ವೇಷಕ್ಕೆ ಪಾತ್ರರಲ್ಲ’’ ಎಂದೂ ಉದ್ಘರಿಸಿದ್ದರು.
‘‘ಕೇಂದ್ರದಲ್ಲಿ ಹಿಂದಿನ ಕಾಂಗ್ರೆಸ್ ಸರಕಾರದ ಬದಲು ಈಗ ಬಿಜೆಪಿ ಸರಕಾರವಿದ್ದರೂ ಮುಸ್ಲಿಮರ ಓಲೈಕೆ ಮಾಡುವುದು ಮಾತ್ರ ನಿಂತಿಲ್ಲ’’ ಎಂದು ಉದ್ಧವ್ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.
’’ಮುಸ್ಲಿಮರನ್ನು ಜತೆಯಾಗಿಸಿ ರಾಜಕೀಯ ಮಾಡುವವರಿಗೆ ಈಗ ಹೊಸ ಬ್ಯಾಂಕ್ ಆಗಿದೆ’’ ಎಂದು ಹೇಳಿದ ಉದ್ಧವ್ ’’ಮುಸ್ಲಿಮರು ಈ ದೇಶದ ಸಾರ್ವಕಾಲಿಕ ವೈರಿಗಳಲ್ಲ. ಆದರೆ ಮುಸ್ಲಿಮರಿಂದಾಗಿಯೇ ಹಿಂದುಸ್ಥಾನದಲ್ಲಿಹಿಂದೂಗಳಿಗೆಗೌರವ ಹಾಗೂ ಅಧಿಕಾರ ಸಿಗುತ್ತಿಲ್ಲ’’ ಎಂದು ದೂರಿದ್ದಾರೆ.
‘‘ಮುಸ್ಲಿಮರು ವಂದೇ ಮಾತರಂ ಅನ್ನು ವಿರೋಧಿಸುವುದನ್ನು ಕೈಬಿಡಬೇಕು. ವಂದೇ ಮಾತರಂ ಎಂದು ಹೆೀಳುವ ಮುಸ್ಲಿಮರು ನಮ್ಮವರು’’ಎಂದು ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಬರೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News