×
Ad

ಭಾರತದ ಅತಿದೊಡ್ಡ ಚಿತ್ರ ನಿರ್ಮಾಪಕರ ಸಂಘದಿಂದ ಪಾಕ್ ಕಲಾವಿದರಿಗೆ ನಿಷೇಧ

Update: 2016-09-30 09:15 IST

ಮುಂಬೈ, ಸೆ.30: ಭಾರತ ಗಡಿ ನಿಯಂತ್ರಣ ರೇಖೆ ದಾಟಿ ಉಗ್ರರ ದಮನ ಕಾರ್ಯಾಚರಣೆ ನಡೆಸಿದ ಬೆನ್ನಲ್ಲೇ, ಭಾರತದ ಅತ್ಯಂತ ಹಳೆಯ ಹಾಗೂ ಅತಿದೊಡ್ಡ ಚಿತ್ರ ನಿರ್ಮಾಪಕರ ಸಂಘವಾದ ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘ(ಐಎಂಪಿಎ) ಗುರುವಾರ, ಪಾಕಿಸ್ತಾನಿ ಕಲಾವಿದರು ಮತ್ತು ಕಲಾವಿದರನ್ನು ನಿಷೇಧಿಸುವ ನಿರ್ಣಯ ಕೈಗೊಂಡಿದೆ.
ಐಎಂಪಿಪಿಎ 23 ಮಂದಿಯ ಸಮಿತಿ ಪಾಕಿಸ್ತಾನಿಯರನ್ನು ಭಾರತೀಯ ಚಿತ್ರರಂಗದಿಂದ ನಿಷೇಧಿಸುವ ನಿರ್ಧಾರವನ್ನು ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಲಾಯಿತು. "ನಮ್ಮ ದೇಶದಲ್ಲಿ ಕಾರ್ಯನಿರ್ವಹಿಸುವ ಯಾವ ಪಾಕಿಸ್ತಾನಿ ಕಲಾವಿದರು ಕೂಡಾ, ನಮ್ಮ ದೇಶದಿಂದ ಸಾಕಷ್ಟು ಗಳಿಸಿಕೊಂಡಿದ್ದರೂ, ಉರಿ ಘಟನೆ ನಡೆದಾಗ ಕನಿಷ್ಠ ಬೇಸರವನ್ನೂ ವ್ಯಕ್ತಪಡಿಸಲಿಲ್ಲ ಎಂಬ ಬಗ್ಗೆ ಸದಸ್ಯರು ಚರ್ಚೆಗೆ ಮುಂದಾದರು" ಎಂದು ಉಪಾಧ್ಯಕ್ಷ ಅಶೋಕ್ ಪಂಡಿತ್ ವಿವರಿಸಿದರು.
ಈಗಾಗಲೇ ಪಾಕಿಸ್ತಾನಿ ಕಲಾವಿದರನ್ನು ಬಳಸಿಕೊಂಡು ಚಿತ್ರೀಕರಣ ಮುಗಿಸಿರುವುದಕ್ಕೆ ಯಾವ ಆಕ್ಷೇಪವೂ ಇಲ್ಲ. ಆದರೆ ಇಂದಿನಿಂದಲೇ ಆರಂಭವಾಗುವಂತೆ ಯಾವ ಪಾಕ್ ಕಲಾವಿದರನ್ನೂ ಸೇರಿಸಿಕೊಳ್ಳುವಂತಿಲ್ಲ. ಇದು ದೇಶದ ಜತೆಗೆ ನಾವಿದ್ದೇವೆ ಎಂಬ ಸಂದೇಶ ಸಾರುವ ನಿರ್ಧಾರ. ಉಭಯ ದೇಶಗಳ ನಡುವಿನ ಸಂಬಂಧ ಉತ್ತಮವಾಗಿದೆ ಎಂದು ಸರ್ಕಾರ ಹೇಳುವವರೆಗೂ ಈ ನಿಷೇಧ ಮುಂದುವರಿಯಲಿದೆ" ಎಂದು ವಿವರಿಸಿದರು.
ಕಳೆದ ವಾರ ಉರಿ ದಾಳಿಯಲ್ಲಿ ಹತ್ಯೆಯಾದ 18 ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲು ಅಧ್ಯಕ್ಷ ಟಿ.ಪಿ.ಅಗರ್‌ವಾಲ್ ಮಾಡಿಕೊಂಡ ಮನವಿಗೆ ಗಾಯಕ ಹತ್ ಫತೇಹ್ ಅಲಿ ಖಾನ್ ಹಾಗೂ ನಟ ಫವಾದ್ ಖಾನ್ ನಿರಾಕರಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
"ಪೇಶಾವರದ ದಾಳಿಯಲ್ಲಿ ಮಕ್ಕಳು ಮೃತಪಟ್ಟಾಗ ನಾವು ಶ್ರದ್ಧಾಂಜಲಿ ಸಲ್ಲಿಸಿದ್ದೆವು. ಆದರೆ ನಮ್ಮ ಜನ ಸತ್ತಾಗ, ಅದರ ವಿರುದ್ಧ ಧ್ವನಿ ಎತ್ತಲು ಅವರು ಸಿದ್ಧರಿಲ್ಲ. ಆದ್ದರಿಂದ ನಮಗೆ ಪಾಕಿಸ್ತಾನಿ ಕಲಾವಿದರ ಅಗತ್ಯವೂ ಇಲ್ಲ" ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News