×
Ad

ಅಲ್ಪಸಂಖ್ಯಾತರ ಸ್ಕಾಲರ್‌ಶಿಪ್‌ಗೆ ಆನ್‌ಲೈನ್ ಅರ್ಜಿ: ಕೇಂದ್ರದಿಂದ ವಿವರಣೆ ಕೇಳಿದ ಹೈಕೋರ್ಟು

Update: 2016-09-30 11:46 IST

ಹೊಸದಿಲ್ಲಿ, ಸೆಪ್ಟಂಬರ್ 30: ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಪಡೆಯಲು ಆನ್‌ಲೈನ್ ಅರ್ಜಿ ಕಡ್ಡಾಯ ಗೊಳಿಸಿದ ಕೇಂದ್ರಸರಕಾರದ ತೀರ್ಮಾನವನ್ನು ದಿಲ್ಲಿ ಹೈಕೋರ್ಟು ಪ್ರಶ್ನಿಸಿದೆ ಎಂದು ವರದಿಯಾಗಿದೆ. ಈವಿಷಯದಲ್ಲಿ ಇಂತಹ ಒಂದು ನಿಬಂಧನೆಯನ್ನು ಯಾಕೆ ಜಾರಿಗೊಳಿಸಲಾಗಿದೆ ಎಂದು ಕೋರ್ಟು ವಿವರಣೆಯನ್ನು ಬಯಸಿದೆ. ಪಶ್ಚಿಮ ಬಂಗಾಳದ ನಾಸಿಮುದ್ದೀನ್ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆತ್ತಿಕೊಂಡಿರುವ ಜಸ್ಟಿಸ್, ಜಿ.ರೋಹಿಣಿ,ಸಂಗೀತಾ ಧಿಂಗ್ರ ಸೈಗಾಲ್‌ರು ಕೇಂದ್ರಸರಕಾರದಿಂದ ವಿವರಣೆಯನ್ನು ಕೇಳಿದ್ದಾರೆ.

ಅರ್ಜಿಯ ಜೊತೆ ಆಧಾರ ಕಾರ್ಡ್ ವಿವರಗಳನ್ನು ಕಡ್ಡಾಯಗೊಳಿಸಿರುವುದನ್ನು ಕೂಡಾ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಆದರೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸುವುದರ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ಕೇಸು ಇರುವುದರಿಂದ ಆವಿಚಾರದಲ್ಲಿ ಮಧ್ಯಪ್ರವೇಶಿಸಲು ಹೈಕೋರ್ಟು ನಿರಾಕರಿಸಿದೆ.. ಆದರೆ ಆನ್‌ಲೈನ್ ಅರ್ಜಿ ಕಡ್ಡಾಯಗೊಳಿಸಿದ್ದರಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅರ್ಜಿಸಲ್ಲಿಸಲು ಸಾಧ್ಯವಾಗಿಲ್ಲ ಎಂದು ದೂರುದಾರರ ಪರ ಹಾಜರಾದ ಅಡ್ವೊಕೇಟ್ ಪ್ರಣವ್ ಸಚ್‌ದೇವ್ ಕೋರ್ಟಿನ ಗಮನ ಸೆಳೆದರು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News