×
Ad

ಈ ಲಕ್ಷಣಗಳಿದ್ದರೆ ಖಂಡಿತ ಹೌದಂತೆ! ನೋಡಿ

Update: 2016-09-30 23:30 IST

ಚಿಕ್ಕಂದಿನಲ್ಲಿ ಹೆತ್ತವರು ನಿಮ್ಮ ಕೋಣೆಯನ್ನು ಸ್ವಚ್ಛ ಮಾಡಲು ಹೇಳುವಾಗ, ಬೇಗನೇ ನಿದ್ದೆ ಮಾಡಲು ಒತ್ತಾಯಿಸುವುದು ಮತ್ತು ಆಣೆ ಇಡುವಾಗ ಬೈದಿದ್ದು ಕಂಡು ಸಿಟ್ಟು ಬಂದಿತ್ತೆ? ಇಂತಹ ನಿಮ್ಮ ನಡವಳಿಕೆಗೆ ಏನೋ ಕಾರಣವಿದೆ.

ಬುದ್ಧಿವಂತರು ಹೆಚ್ಚು ದೇವರಾಣೆ ಹೇಳುತ್ತಾರೆ

ಆಣೆ ಇಡುತ್ತೇನೆ ಎಂದು ಹೇಳುವವರ ಬಳಿ ಅತೀ ಕಡಿಮೆ ಮಾತುಗಳು ಇರುತ್ತವೆ ಎನ್ನುಂತಹ ಸುಳ್ಳು ನಂಬಿಕೆಗಳ ಬಗ್ಗೆ ಒಂದು ಅಧ್ಯಯನ ನಡೆದಿದೆ. ನೀವು ಯೋಚಿಸಿ ನೋಡಿದರೆ ಆಣೆ ಇಡುವ ಮಾತನ್ನು ಆಡದೆ ಇರುವವರು ಯಥೋಚಿತವಾಗಿಯೇ ಕೆಲವೇ ಶಬ್ದಗಳನ್ನು ಬಳಸುತ್ತಾರೆ. ಅಧ್ಯಯನದಲ್ಲಿ ಕಂಡು ಬಂದಿರುವ ಪ್ರಕಾರ ನಿಮಿಷದೊಳಗೆ ಆಣೆ ಇಡಲು ಸಾಕಷ್ಟು ಶಬ್ದಗಳನ್ನು ಬಳಸುವವರು ಹೆಚ್ಚು ಉತ್ತಮ ಐಕ್ಯೂ ಹೊಂದಿರುತ್ತಾರೆ. ಆಣೆ ಇಡುವ ವಿಚಾರವಾಗಿ ಉತ್ತಮ ಗ್ರಂಥ ಭಂಡಾರ ಹೊಂದಿರುವುದು ಭಾಷಾ ವಾಗ್ಮಯದ ಸೂಚನೆ. ಬದಲಾಗಿ ಶಬ್ದಗಳ ಕೊರತೆಯನ್ನು ಅಡಗಿಸಿಡಲು ಅವರು ಪ್ರಯತ್ನಿಸುವುದಿಲ್ಲ.

ಬುದ್ಧಿವಂತರು ರಾತ್ರಿ ಗೂಬೆಗಳು

ರಾತ್ರಿ ತಡವಾಗಿ ಮಲಗುವ ಅಭ್ಯಾಸವಿದೆಯೆ? ಇದು ಬುದ್ಧಿವಂತಿಕೆಯ ಲಕ್ಷಣ. ಸಂಶೋಧನೆಯ ಪ್ರಕಾರ ರಾತ್ರಿ ಎದ್ದಿರುವವರಿಗೆ ಹೆಚ್ಚು ಐಕ್ಯೂ ಇರುತ್ತದೆ. ಅಮೆರಿಕ ಅಧ್ಯಕ್ಷ ಒಬಾಮ, ಚಾರ್ಲ್ಸ್ ಡಾರ್ವಿನ್, ವಿನ್ಸಂಟ್ ಚರ್ಚಿಲ್, ಕೀತ್ ರಿಚರ್ಡ್ಸ್ ಮತ್ತು ಎಲ್ವಿಸ್ ಪ್ರೆಸ್ಲೀ ಮೊದಲಾದವರು ಇಂತಹ ರಾತ್ರಿ ಕೆಲಸಕ್ಕೆ ಜನಪ್ರಿಯರು. ತಡವಾಗಿ ನಿದ್ದೆ ಹೋದರೆ ನಿಮಗೆ ದೊಡ್ಡ ಜ್ಞಾನಿಗಳ ಕಂಪೆನಿ ಇರುತ್ತದೆ!

ಹೆಚ್ಚು ನೀಟಾಗಿಡದ ಡೆಸ್ಕ್ ಬುದ್ಧಿವಂತಿಕೆಯ ಲಕ್ಷಣ

ನೀವು ಸಾಕಷ್ಟು ಆಣೆ ಇಡುತ್ತೀರಿ ಮತ್ತು ತಡರಾತ್ರಿಯವರೆಗೂ ಕೆಲಸವೂ ಮಾಡಿದ ಮೇಲೆ ನಿಮ್ಮ ಡೆಸ್ಕ್ ನೀಟಾಗಿ ಇಡದ ಅಭ್ಯಾಸವನ್ನೂ ಹೊಂದಿದ್ದೀರಾ. ಹಾಗಿದ್ದರೆ ನಿಮಗೆ ಶುಭಸುದ್ದಿಯಿದೆ. ಮಿನ್ನೆಸೊಟಾ ವಿಶ್ವವಿದ್ಯಾಲಯದ ಅಧ್ಯಯನ ಪ್ರಕಾರ ನೀಟಾಗಿ ಇಡದ ಡೆಸ್ಕ್ ಬುದ್ಧಿವಂತರ ಲಕ್ಷಣ. ನೀವು ಬಹಳ ಸಮಯವನ್ನು ಸ್ವಚ್ಛ ಮಾಡುವುದು ಮತ್ತು ವ್ಯವಸ್ಥಿತವಾಗಿ ಇಡುವುದರಲ್ಲೇ ಕಳೆಯದೆ ಇದ್ದಲ್ಲಿ, ನಿಮ್ಮ ತಲೆ ಇನ್ನೂ ಅನೇಕ ಬುದ್ಧಿವಂತ ವಿಷಯಗಳನ್ನು ಯೋಚಿಸುತ್ತಿದೆ ಎಂದರ್ಥ. ನೀಟಾಗಿಲ್ಲದ ಪರಿಸರದಲ್ಲಿ ಹೆಚ್ಚು ಸೃಜನಶೀಲ ಕೆಲಸವಾಗುತ್ತದೆ ಎಂದು ಅಧ್ಯಯನ ತೋರಿಸಿದೆ.

ಮನಶ್ಶಾಸ್ತ್ರ ವಿಜ್ಞಾನಿ ಕ್ಯಾತ್ಲೀನ್ ವೋಹಾಸ್ ಪ್ರಕಾರ ನೀಟಾಗಿಲ್ಲದ ಪರಿಸರವು ಪರಂಪರೆಗೆ ಹೊರತಾಗಿ ಯೋಚಿಸುವ ಲಕ್ಷಣ. ಅದು ತಾಜಾ ಒಳಸುಳಿಗಳನ್ನು ಕೊಡುತ್ತದೆ. ವ್ಯವಸ್ಥಿತವಾದ ಪರಿಸರ ಅದಕ್ಕೆ ವಿರುದ್ಧವಾಗಿ ಸಂಪ್ರದಾಯಬದ್ಧವಾಗಿದ್ದು ಸುರಕ್ಷಿತವಾಗಿ ಹೆಜ್ಜೆ ಇಡುವವರ ಲಕ್ಷಣ.

ಹೀಗಾಗಿ ಆಣೆ ಇಡಲು, ತಡರಾತ್ರಿ ಕೆಲಸ ಮಾಡಲು ಉತ್ತಮ ಸಮಯವಿದು.

ಕೃಪೆ: http://www.businessinsider.de/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News