×
Ad

ಭಾರತ-ಪಾಕ್ ಅಣು ಯುದ್ಧವಾದರೆ ಜಗತ್ತು ತೆರಬೇಕಾದ ಬೆಲೆ ಏನು ಗೊತ್ತೇ ?

Update: 2016-09-30 23:31 IST

ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವೆ ಅಣು ಯುದ್ಧವೇನಾ ದರೂ ಸಂಭವಿಸಿದರೆ ಏನೇನೆಲ್ಲಾ ಅನಾಹುತ ಗಳಾಗಬಹುದೆಂದು ಯಾವತ್ತಾದರೂ ಯೋಚಿಸಿದ್ದೀರಾ? ಫಸ್ಟ್ ಪೋಸ್ಟ್ ನಲ್ಲಿ ಪ್ರಕಟವಾದ ಈ ವರದಿ ನಿಮಗೆ ಇಂತಹ ಒಂದು ಯುದ್ಧದಿಂದ ಉಂಟಾಗಬಹುದಾದ ಘೋರ ಪರಿಣಾಮಗಳ ಚಿತ್ರಣ ನೀಡುತ್ತದೆ.

ಒಂದು ವೇಳೆ ಭಾರತ ಹಾಗೂ ಪಾಕಿಸ್ತಾನ 100 ಅಣ್ವಸ್ತ್ರಗಳನ್ನು (ಎರಡೂ ದೇಶಗಳು ಹೊಂದಿರುವ ಒಟ್ಟು ಅಣ್ವಸ್ತ್ರಗಳ ಅರ್ಧ ದಷ್ಟು) ಪ್ರಯೋಗಿಸಿದಲ್ಲಿ ಅದು ಹಿರೋಶಿಮಾ ಬಾಂಬಿನ 15 ಕಿಲೋಟನ್ ಅಧಿಕ ಸಾಮರ್ಥ್ಯ ಹೊಂದಿರುತ್ತದೆ ಯಲ್ಲದೆ ಅದರಿಂದ ನೇರವಾಗಿ 2.1 ಕೋಟಿ ಜನರನ್ನು ಕೊಲ್ಲಬಹುದಾಗಿದೆ. ಅಷ್ಟೇ ಅಲ್ಲ, ವಿಶ್ವದ ಅರ್ಧದಷ್ಟು ಓಝೋನ್ ಪದರವನ್ನೂ ಅದು ನಾಶಗೊಳಿ ಸುವುದು. ಈ ‘ನ್ಯೂಕ್ಲಿಯರ್ ವಿಂಟರ್’ನಿಂದಾಗಿ ವಿಶ್ವದೆಲ್ಲೆಡೆ ಮಳೆಗಾಲ ಹಾಗೂ ಕೃಷಿ ಕ್ಷೇತ್ರಗಳು ಬಾಧಿತವಾಗುವವೆಂದು 2007ರಲ್ಲಿ ಅಮೆರಿಕದ ರುಟ್ಗೆರ್ಸ್ ವಿಶ್ವವಿದ್ಯಾನಿಲಯ, ಕೊಲಾರಡೊ- ಬೋಲ್ಡರ್ ವಿವಿ ಹಾಗೂ ಕ್ಯಾಲಿಫೋರ್ನಿಯಾ ವಿವಿ, ಲಾಸ್ ಏಂಜಲಿಸ್ ಇವುಗಳ ಅಧ್ಯಯನಕಾರರು ನಡೆಸಿರುವ ಅಧ್ಯಯನವೊಂದರಿಂದ ತಿಳಿದು ಬಂದಿದೆ.

ಪಾಕಿಸ್ತಾನವು ಭಾರತದ ಮೇಲೆ ಅಣು ದಾಳಿ ನಡೆಸಿದಲ್ಲಿ ಒಂದು ಕೋಟಿ ಭಾರತೀಯರು ಸಾಯಬಹುದೆಂದು ಆದರೆ ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸಿದರೆ ಇಡೀ ಪಾಕಿಸ್ತಾನ ಇಲ್ಲವಾಗಬಹುದು ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿ ಕೆಲ ದಿನಗಳ ಹಿಂದೆ ಹೇಳಿದ್ದರು.

ಆದರೆ ಇಂತಹ ಒಂದು ಯುದ್ಧ ನಡೆದರೆ ಅದರ ಪರಿಣಾಮ ಭಾರತ ಹಾಗೂ ಪಾಕಿಸ್ತಾನದಲ್ಲಿ ಮಾತ್ರವಲ್ಲದೆ ಎರಡನೇ ವಿಶ್ವಯುದ್ಧದಲ್ಲಿ ಮಡಿದವರ ಸಂಖ್ಯೆಯ ಅರ್ಧದಷ್ಟು ಮಂದಿ ಮೊದಲ ವಾರದಲ್ಲೇ ವಿಕಿರಣ, ಸುಟ್ಟ ಗಾಯಗಳಿಂದ ಸಾವನ್ನಪ್ಪಬಹುದೆಂದು ಅಧ್ಯಯನ ತಂಡ ಕಂಡುಕೊಂಡಿದೆ. ಈ ಸಾವಿನ ಪ್ರಮಾಣ ಕಳೆದ ಒಂಬತ್ತು ವರ್ಷಗಳಲ್ಲಿ ಉಗ್ರ ದಾಳಿಗಳಲ್ಲಿ ಭಾರತದಲ್ಲಿ ಸಾವನ್ನಪ್ಪಿದ ಭದ್ರತಾ ಸಿಬ್ಬಂದಿ ಹಾಗೂ ನಾಗರಿಕರ ಸಂಖ್ಯೆಗಿಂತ 2,221 ಪಟ್ಟು ಹೆಚ್ಚು ಜನರು ಸಾವನ್ನಪ್ಪಬಹುದೆಂದು ಇಂಡಿಯ ಸ್ಪೆಂಡ್ ವಿಶ್ಲೇಷಣೆಯೊಂದು ಹೇಳಿದೆ.

 ಇಷ್ಟೇ ಅಲ್ಲದೆ ವಿಶ್ವದಾದ್ಯಂತ ಎರಡು ಬಿಲಿಯನ್ ಜನರು ವಾತಾ ವರಣದ ಮೇಲುಂಟಾಗಬಹುದಾದ ವ್ಯತಿರಿಕ್ತ ಪರಿಣಾಮಗಳಿಂದಾಗಿ ಹಸಿವಿನಿಂದ ನರಳಬಹುದೆಂದು ಇಂಟರ್ ನ್ಯಾಷನಲ್ ಫಿಸಿಶಿಯನ್ಸ್ ಫಾರ್ ದಿ ಪ್ರಿವೆನ್ಶನ್ ಆಫ್ ನ್ಯೂಕ್ಲಿಯರ್ ವಾರ್ ತಿಳಿಸಿದೆ.

ಪಾಕಿಸ್ತಾನದ ಬಳಿ 110 ರಿಂದ 130 ಅಣ್ವಸ್ತ್ರಗಳಿವೆಯಾದರೆ ಭಾರತದ ಬಳಿ 110 ರಿಂದ 120 ಅಣ್ವಸ್ತ್ರಗಳಿವೆ.

ಭಾರತದ ಕಾಶ್ಮೀರದಲ್ಲಿ ನಡೆದ ಉರಿ ಉಗ್ರ ದಾಳಿಯಲ್ಲಿ 18 ಯೋಧರು ಹತರಾದ ನಂತರ ಭಾರತ-ಪಾಕ್ ನಡುವೆ ಯುದ್ಧ ನಡೆಯಬಹುದೆನ್ನುವಂತಹ ವರದಿಗಳು ಬರಲಾರಂಭಿಸಿದ್ದವು.

  ಪಾಕಿಸ್ತಾನದ ಬಳಿಯಿರುವ ಶೇ 66 ರಷ್ಟು ಅಣ್ವಸ್ತ್ರಗಳು ಭೂಮಿಯ ಮೇಲಿಂದ ಪ್ರಯೋಗಿಸಲಾಗುವ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೇಲಿರಿಸಿ ಪ್ರಯೋಗಿ ಸುವಂತಹದ್ದು, ಎಂದು ಅಟಾಮಿಕ್ ಸೈಂಟಿಸ್ಟ್ಸ್ ಇದರ ಬುಲೆಟಿನ್ ಒಂದರಲ್ಲಿ ತಿಳಿಸಲಾಗಿದೆ. ಪಾಕಿಸ್ತಾನದ ಹಟ್ಫ್ (ಪ್ರವಾದಿ ಮುಹಮ್ಮದ್ ಅವರ ಕತ್ತಿಯ ಹೆಸರು) ಎಂಬ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಸರಣಿ ಭಾರತವನ್ನೇ ಗಮನದಲ್ಲಿರಿಸಿ ಅಭಿವೃದ್ಧಿ ಪಡಿಸಲಾಗುತ್ತಿದೆ.

 ಪಾಕಿಸ್ತಾನದ ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪ್ರಯೋಗವೇನಾ ದರೂ ನಡೆದರೆ ಅವುಗಳು ಭಾರತದ ನಾಲ್ಕು ಪ್ರಮುಖ ನಗರಗಳಾದ ಹೊಸದಿಲ್ಲಿ, ಮುಂಬೈ, ಬೆಂಗಳೂರು ಹಾಗೂ ಚೆನ್ನೈಯನ್ನು ಗುರಿಯಾಗಿಸಬಹುದೆಂದು ರಾಷ್ಟ್ರೀಯ ಸುರಕ್ಷತಾ ವಿಚಾರಗಳ ತಜ್ಞ ಸಮೀರ್ ಪಾಟೀಲ್ ಹೇಳುತ್ತಾರೆ.

ಪಾಕ್ ತನ್ನ ಹಲವಾರು ಅಣ್ವಸ್ತ್ರಗಳನ್ನು ಘೌರಿ, ಶಹೀನ್, ನಸ್ರ್ ಭೂ ಕ್ಷಿಪಣಿ ಮೇಲಿರಿಸಿ ಪ್ರಯೋಗಿಸುವ ಸಾಧ್ಯತೆಯಿದ್ದರೆ ಇನ್ನು ಕೆಲವು ನೌಕಾ ಕ್ಷಿಪಣಿ ಹಾಗೂ ಸುಮಾರು 36 ಅಣ್ವಸ್ತ್ರಗಳನ್ನು ಯುದ್ಧ ವಿಮಾನಗಳ ಮೂಲಕ ಪ್ರಯೋಗಿಸಬಹುದಾಗಿದೆ.

  ಅಂತೆಯೇ ಬುಲೆಟಿನ್ ಆಫ್ ಅಟಾಮಿಕ್ ಸೈಂಟಿಸ್ಟ್ಸ್ ಪ್ರಕಾರ ಭಾರತದ ಬಳಿ 56 ಪೃಥ್ವಿ ಹಾಗೂ ಅಗ್ನಿ ಸರಣಿಯ ಕ್ಷಿಪಣಿಗಳಿದ್ದು ಇವುಗಳ ಮೂಲಕ ಭಾರತದಲ್ಲಿರುವ ಅಣ್ವಸ್ತ್ರಗಳ ಪೈಕಿ ಶೇ 53ರಷ್ಟು ಅಣ್ವಸ್ತ್ರಗಳನ್ನು ಪ್ರಯೋಗಿಸಬಹುದಾಗಿದೆ.

ಭಾರತದ ಬಳಿಯಿರುವ ಧನುಶ್ ಎಸ್ ಆರ್‌ಬಿಎಂ ಯುದ್ಧ ನೌಕೆ ಕೂಡ ಅಣ್ವಸ್ತ್ರಗಳನ್ನು ಪ್ರಯೋಗಿಸುವ ಸಾಮರ್ಥ್ಯ ಹೊಂದಿದೆ. ಅಂತೆಯೇ ಭಾರತೀಯ ವಾಯು ಪಡೆಯ ಫೈಟರ್ ಬಾಂಬರುಗಳು ಸುಮಾರು 16 ಅಣ್ವಸ್ತ್ರಗಳನ್ನು ಪ್ರಯೋಗಿಸುವ ಶಕ್ತಿ ಹೊಂದಿವೆ.

  ಒಂದು ವೇಳೆ ಭಾರತ ಹಾಗೂ ಪಾಕಿಸ್ತಾನ 100 ಅಣ್ವಸ್ತ್ರಗಳನ್ನು (ಎರಡೂ ದೇಶಗಳು ಹೊಂದಿರುವ ಒಟ್ಟು ಅಣ್ವಸ್ತ್ರಗಳ ಅರ್ಧದಷ್ಟು) ಪ್ರಯೋಗಿಸಿದಲ್ಲಿ ಅದು ಹಿರೋಶಿಮಾ ಬಾಂಬಿನ 15 ಕಿಲೋಟನ್ ಅಧಿಕ ಸಾಮರ್ಥ್ಯ ಹೊಂದಿರುತ್ತದೆಯಲ್ಲದೆ ಅದರಿಂದ ನೇರವಾಗಿ 2.1 ಕೋಟಿ ಜನರನ್ನು ಕೊಲ್ಲಬಹುದಾಗಿದೆ. ಅಷ್ಟೇ ಅಲ್ಲ, ವಿಶ್ವದ ಅರ್ಧದಷ್ಟು ಓಝೋನ್ ಪದರವನ್ನೂ ಅದು ನಾಶಗೊಳಿಸುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News