×
Ad

ನೂರು ಪ್ರವಾಸಿ ತಾಣಗಳಲ್ಲಿ ವೈ-ಫೈ ಸೇವೆ ಒದಗಿಸಲಿರುವ ಬಿಎಸ್ಸೆನ್ನೆಲ್, ಎಂಟಿಎನ್ನೆಲ್

Update: 2016-10-01 00:19 IST

ಹೊಸದಿಲ್ಲಿ, ಸೆ.30: ದೇಶದಾದ್ಯಂತ ನೂರು ಪ್ರವಾಸಿ ತಾಣಗಳಲ್ಲಿ ವೈ-ಫೈ ಸೇವೆ ಒದಗಿಸಲು ಬಿಎಸ್ಸೆನ್ನೆಲ್ ಮತ್ತು ಎಂಟಿಎನ್ನೆಲ್ ಸಜ್ಜಾಗಿದ್ದು ಈ ನಿಟ್ಟಿನಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಈ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

 
 ವಿಶ್ವ ಪಾರಂಪರಿಕ ಕೇಂದ್ರಗಳು ಸೇರಿದಂತೆ ಒಟ್ಟು 100 ಪ್ರವಾಸಿ ಸ್ಥಳಗಳನ್ನು ಗುರುತಿಸಲಾಗಿದ್ದು ಇಲ್ಲಿ ಮುಂದಿನ ಆರು ತಿಂಗಳ ಒಳಗೆ ವೈ-ಫೈ ಸೇವೆ ಒದಗಿಸಲಾಗುವುದು. ಏಳು ವರ್ಷ ಈ ಸೇವೆ ಒದಗಿಸಲಿದ್ದು ಪ್ರಥಮ ಮೂರು ವರ್ಷ ಕಾರ್ಯಾಚರಣೆಯ ವೆಚ್ಚವನ್ನು ಪ್ರವಾಸೋದ್ಯಮ ಸಚಿವಾಲಯ ನಿರ್ವಹಿಸಲಿದೆ ಎಂದು ಇಲಾಖೆಯ ಕಾರ್ಯದರ್ಶಿ ವಿನೋದ್ ಜುಟ್ಶಿ ತಿಳಿಸಿದ್ದಾರೆ. ಆಂಧ್ರಪ್ರದೇಶದ ತಿರುಪತಿ ದೇವಸ್ಥಾನ , ಬಿಹಾರದ ಬುದ್ದಗಯ, ಮದ್ಯಪ್ರದೇಶದ ಖಜುರಾಹೊ, ವಾರಣಾಸಿ . ಫತೇಪುರ ಸಿಕ್ರಿ ಮತ್ತು ತಾಜ್‌ಮಹಲ್ ಸೇರಿದಂತೆ ಒಟ್ಟು 30 ಸ್ಥಳಗಳಲ್ಲಿ ಈಗಾಗಲೇ ವೈ-ಫೈ ಸೇವೆ ನೀಡಲಾಗುತ್ತಿದೆ. ಮುಂದಿನ 6 ತಿಂಗಳೊಳಗೆ ಇನ್ನೂ 70 ಸ್ಥಳಗಳಲ್ಲಿ ಈ ಸೇವೆ ಲಭ್ಯವಾಗಲಿದೆ. ಇದರಿಂದ ಪ್ರವಾಸಿಗರಿಗೆ ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಮತ್ತು ವಿಡಿಯೋಗಳನ್ನು ಸುಲಭವಾಗಿ ಅಪ್‌ಲೋಡ್ ಮಾಡಬಹುದಾಗಿದೆ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News