ಮುಂಬೈ ಬೀದಿ ಬದಿ ವ್ಯಾಪಾರಿಗಳು ಘೋಷಿಸಿದ ಆದಾಯ ಎಷ್ಟು ಗೊತ್ತೇ ?

Update: 2016-10-01 05:42 GMT

ಮುಂಬೈ, ಅ.1: ಮುಂಬೈ ನಗರದ ಬೀದಿ ಬದಿಯ ವ್ಯಾಪಾರಿಗಳು 50 ಕೋಟಿ ರೂ. ನಗದು ಮತ್ತು ಆಸ್ತಿಯನ್ನು ಹೊಂದಿರುವುದು ಬೆಳಕಿಗೆ ಬಂದಿದೆ.
ಸ್ವತ: ಸರಕಾರದ  ಆದಾಯ ಘೋಷಣೆ ಯೋಜನೆಯಲ್ಲಿ (ಐಡಿಎಸ್)ವ್ಯಾಪಾರಿಗಳು  ತಮ್ಮಲ್ಲಿರುವ ಆಸ್ತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಆದಾಯ ತೆರಿಗೆ ಅಧಿಕಾರಿಗಳು ದೇಶಾದ್ಯಂತ ದಾಳಿ ಕೈಗೊಂಡ ಬೆನ್ನಲ್ಲೆ ಮುಂಬೈನ ಬೀದಿ ವ್ಯಾಪಾರಿಗಳ ಆದಾಯ ವಿವರ ಪ್ರಕಟಿಸಿದ್ದಾರೆ.
ಬೀದಿ ಬದಿಯಲ್ಲಿ ತಿನಿಸುಗಳನ್ನು ಮಾರುವ ವ್ಯಾಪಾರಿಗಳು ಇದೀಗ  22.5ಕೋಟಿ ರೂ. ತೆರಿಗೆ ಪಾವತಿಸಬೇಕಾಗಿದೆ. ಕಳೆದ ಎರಡು ವಾರಗಳ ಅವಧಿಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಇನ್ನೂರು ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ. ಘಾಟ್ಕೋಪರ್ ಜ್ಯೂಸ್‌ ಅಂಗಡಿ ಮಾಲಿಕನೊಬ್ಬರು 5ಕೋಟಿ ಆದಾಯ ಹೊಂದಿರುವುದಾಗಿ ಘೋಷಿಸಿದ್ದಾರೆ. ಕೆಲವು ವ್ಯಾಪಾರಿಗಳ ಆದಾಯ25ಲಕ್ಷ ರೂ.ಗಳಿಂದ 2 ಕೋಟಿ ರೂ. ತನಕ ಇರುವುದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News