ಭಾರತದಲ್ಲಿ ರಕ್ತದಾನಿಗಳ ಮೂಲಕ ಇಷ್ಟು ಮಂದಿಗೆ ಬಂದಿದೆ ಏಡ್ಸ್!
ಕೊಚ್ಚಿ,ಅಕ್ಟೋಬರ್1: ರಕ್ತದಾನದ ಮೂಲಕ ಭಾರತದಲ್ಲಿ 2234 ಮಂದಿಗೆ ಏಡ್ಸ್ ರೋಗ ತಗಲಿದೆ ಎಂದು ಏಡ್ಸ್ ನಿಯಂತ್ರಣ ಸಂಘಟನೆ(ನಾಕೊ) ಬಹಿರಂಗಪಡಿಸಿದೆ. 2014 ಸೆಪ್ಟಂಬರ್‌ನಿಂದ 2016 ಮಾರ್ಚ್ ವರೆಗಿನ ಲೆಕ್ಕವಿದು ಎಂದು ಅದು ತಿಳಿಸಿದೆ.
ಉತ್ತರ ಪ್ರದೇಶದಲ್ಲಿ 361, ಗುಜರಾತ್‌ನಲ್ಲಿ 291ಮಂದಿ, ಕೇರಳದಲ್ಲಿ 89ಮಂದಿ, ಮಹಾರಾಷ್ಟ್ರದಲ್ಲಿ 276ಮಂದಿ, ದಿಲ್ಲಿಯಲ್ಲಿ 264 ಮಂದಿ, ಪಶ್ಚಿಮಬಂಗಾಳದಲ್ಲಿ 135 ಮಂದಿ, ಕರ್ನಾಟಕದಲ್ಲಿ 127 ಮಂದಿ, ಹರಿಯಾಣದಲ್ಲಿ 99 ಮಂದಿ, ಬಿಹಾರದಲ್ಲಿ 91ಮಂದಿ, ತಮಿಳ್ನಾಡಿನಲ್ಲಿ 89ಮಂದಿ, ಪಂಜಾಬ್‌ನಲ್ಲಿ 88ಮಂದಿ,ಚತ್ತೀಸ್‌ಗಡದಲ್ಲಿ 69 ಮಂದಿ, ಒಡಿಶಾದಲ್ಲಿ 55 ಮಂದಿ, ಆಂಧ್ರಪ್ರದೇಶದಲ್ಲಿ 43 ಮಂದಿ, ತೆಲಂಗಾಣದಲ್ಲಿ 43 ಮಂದಿಗೆ ಏಡ್ಸ್ ಬಾಧಿಸಿದೆ ಝಾರ್ಕಂಡ್ ಮಣಿಪ್ಪುರಗಳಲ್ಲಿ 17 ಮಂದಿಗೆ, ಉತ್ತರಾಖಂಡದಲ್ಲಿ 16 ಮಂದಿಗೆ ಜಮ್ಮುಕಾಶ್ಮೀರ-ಮಧ್ಯಪ್ರದೇಶದಲ್ಲಿ 14ಮಂದಿಗೆ ಅಸ್ಸಾಂನಲ್ಲಿ 8 ಮಂದಿ, ಮಿಝೋರಾಂ, ನಾಗಲೆಂಡ್‌ಗಳಲ್ಲಿ ನಾಲ್ಕು ಮಂದಿಗೆ ,ದಾಮನ್‌ನಲ್ಲಿ ಮೂರು ಮಂದಿಗೆ, ಗೋವಾದಲ್ಲಿ ಎರಡು ಮಂದಿಗೆ, ಪುದುಚೇರಿಯಲ್ಲಿ ಒಬ್ಬನಿಗೆ ಏಡ್ಸ್ ತಗಲಿದೆ.
ದೇಶದ ಅಂಗೀಕೃತ ರಕ್ತಬ್ಯಾಂಕುಗಳಿಂದ ಲಭಿಸಿದ ರಕ್ತಗಳಲ್ಲಿಯೇ ಏಡ್ಸ್ ರೋಗ ತಗಲಿದೆ. ಹಲವು ರಕ್ತಬ್ಯಾಂಕುಗಳು ಕಟ್ಟುನಿಟ್ಟಿನ ವ್ಯವಸ್ಥೆಯನ್ನು ಪಾಲಿಸದ್ದರಿಂದ ರಕ್ತದ ಮೂಲಕ ಏಡ್ಸ್ ತಗಲಲು ಕಾರಣವಾಗಿದೆ ಎಂದು ವರದಿ ತಿಳಿಸಿದೆ.