×
Ad

ವಿಮಾನದಲ್ಲಿ ಅಸ್ವಸ್ಥಗೊಂಡ ವ್ಯಕ್ತಿಯನ್ನು ಈ ವೈದ್ಯ ಕಾಪಾಡಿದ್ದು ಹೇಗೆ ಗೊತ್ತೇ?!

Update: 2016-10-01 16:00 IST

ಬೀಜಿಂಗ್, ಅ.1: ಇತ್ತೀಚೆಗೆ ಏರ್‌ಚೀನಾ ವಿಮಾನವೊಂದರಲ್ಲಿ ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿದ್ದ ಪ್ರಯಾಣಿಕರೊಬ್ಬರು ಬಾಯಿಯಲ್ಲಿ ನೊರೆ ಕಾರಿ ಕುಸಿದಾಗ ವಿಮಾನದಲ್ಲಿದ್ದ ವೈದ್ಯರೊಬ್ಬರು ಪ್ರಯಾಣಿಕನ ರಕ್ಷಣೆ ಧಾವಿಸಿ ಆತನ ಪ್ರಾಣ ಉಳಿಸಿದ್ದಾರೆ.

ಶಾಂಘಾಯ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಟಿಯಾನ್ ಯು ಎಂಬವವೇ ವಿಭಿನ್ನ ವಿಧಾನದ ಮೂಲಕ ಪ್ರಯಾಣಿಕನ ಪ್ರಾಣ ರಕ್ಷಿಸಿದ ವೈದ್ಯರು. ವಿಮಾನದಲ್ಲಿದ್ದ ರೋಗಿಯೊಬ್ಬರು ಅಪಸ್ಮಾರ ಕಾಯಿಲೆಯಿಂದ ಕುಸಿದುಬಿದ್ದಾಗ, ವಿಮಾನ ಪರಿಚಾರಕರಿಗೆ ಚಮಚ ಹಾಗೂ ಟೂತ್‌ಪಿಕ್ ತರಲು ಹೇಳಿದರು. ಮೊದಲು ಚಮಚವನ್ನು ಉಪಯೋಗಿಸಿ ಪ್ರಯಾಣಿಕನ ನಾಲಗೆಯನ್ನು ಗಟ್ಟಿಯಾಗಿ ಒತ್ತಿ ಹಿಡಿದು ನಂತರ ಆತನ ತಲೆಯಲ್ಲಿರುವ ಪ್ರೆಶರ್ ಪಾಯಿಂಟ್‌ಗಳನ್ನು ಒತ್ತಿದಾಗ ಆತ ಕೆಲವೇ ನಿಮಿಷಗಳಲ್ಲಿ ಮೊದಲಿನಂತಾಗಿ ಕುಳಿತುಕೊಂಡು ನೀರು ಬೇಕೆಂದು ಕೇಳಿದ್ದರು.

ರೋಗಿಯ ಮೆದುಳನ್ನು ಸಕ್ರಿಯಗೊಳಿಸಲು ಡಾ.ಟಿಯಾನ್ ಆತನ ತಲೆಯಲ್ಲಿನ ಪ್ರೆಶರ್ ಪಾಯಿಂಟ್‌ಗಳನ್ನು ಒತ್ತಿದ ವಿಧಾನ ಜನಪ್ರಿಯ ಚೀನೀ ಚಿಕಿತ್ಸಾ ವಿಧಾನವಾಗಿದೆಯಾದರೂ ವೈದ್ಯರು ಇಂತಹ ವಿಧಾನವನ್ನು ಯಾವತ್ತೂ ಎಮರ್ಜನ್ಸಿ ವಾರ್ಡಿನಲ್ಲಿ ಉಪಯೋಗಿಸಿರಲಿಕ್ಕಿಲ್ಲವೆನ್ನಲಾಗಿದೆ.
ವೈದ್ಯರ ಪ್ರಸಂಗಾವಧಾನತೆಯಿಂದ ವಿಮಾನ ಸಿಬ್ಬಂದಿ ಹಾಗೂ ಪ್ರಯಾಣಿಕರು ನಿಶ್ಚಿಂತರಾಗಿ ಕಾಶಗರ್‌ನಿಂದ ಉರುಂಖಿಗೆ ತಮ್ಮ ಪ್ರಯಾಣ ಮುಂದುವರಿಸಿದರು.

ವಿಮಾನದಲ್ಲಿ ವಾಯು ಒತ್ತಡ ಹಾಗೂ ಆಮ್ಲಜನಕ ಪ್ರಮಾಣದಲ್ಲಿನ ಬದಲಾವಣೆಗಳಿಂದಾಗಿ ಅಪಸ್ಮಾರ ರೋಗಿಗಳು ಬಾಧಿತರಾಗುವ ಸಾಧ್ಯತೆಯಿದೆ ಯೆಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News