ಸಲ್ಮಾನ್‌ಗೆ ಕುಟುಕಿದ ಶಿವಸೇನೆ
ಹೊಸದಿಲ್ಲಿ,ಅಕ್ಟೋಬರ್ 1: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್‌ಖಾನ್ ಪಾಕಿಸ್ತಾನಿ ಕಲಾಕಾರರ ಪರಮಾತಾಡಿದ್ದಕ್ಕಾಗಿ ಶಿವಸೇನೆ ಕುಟುಕಿದೆ"ಅರೆ ಪಾಕಿಸ್ತಾನಿಕಲಾಕಾರರೊಂದಿಗೆ ಅಷ್ಟೊಂದು ಪ್ರೀತಿಯಿದ್ದರೆ ಅವರೇ ಯಾಕೆ ಪಾಕಿಸ್ತಾನಕ್ಕೆ ಪಲಾಯನ ಮಾಡಬಾರದು" ಎಂದು ಶಿವಸೇನೆಯ ಮನೀಶಾ ಕಾಯಂದೆ ಹೇಳಿದ್ದಾರೆಂದು ವರದಿಯಾಗಿದೆ.
ತಂದೆಯನ್ನು ಕೇಳಿ ನೋಡಲಿ;
ಶಿವಸೇನೆ ನಾಯಕ ಸುಭಾಶ್‌ದೇಸಾಯಿ ಸಲ್ಮಾನ್ ಹೀಗೆಲ್ಲ ಹೇಳುವುದಕ್ಕಿಂತ ಮೊದಲು ತನ್ನ ತಂದೆಯನ್ನು ಕೇಳಬೇಕು ಎಂದು ಹೇಳಿದ್ದಾರೆ. ಶಿವಸೇನೆ ಸಂಸದ ಅರವಿಂದ್ ರಾವತ್ ನಮ್ಮ ದೇಶದಲ್ಲಿ ಕಲಾಕಾರರ ಕೊರತೆ ಯಿಲ್ಲದಿರುವಾಗ ಪಾಕಿಸ್ತಾನದಿಂದ ಯಾಕೆ ಅವರನ್ನು ತರಿಸಿಕೊಳ್ಳಬೇಕೆಂದು ಪ್ರಶ್ನಿಸಿದ್ದಾರೆ.
ಸಲ್ಮಾನ್ ಏನು ಹೇಳಿದ್ದರು:
ಭಾರತದಲ್ಲಿ ಕೆಲಸ ಮಾಡುತ್ತಿರುವ ಕಲಾಕಾರರನ್ನು ವಿರೋಧಿಸುವ ಅಭಿಯಾನ ಜಾರಿಯಲ್ಲಿರುವಂತೆಯೇ ಸಲ್ಮಾನ್ ಪ್ರತಿಕ್ರಿಯಿಸಿ ನೆರೆಯ ದೇಶದ ಕಲಾವಿದರು ಭಯೋತ್ಪಾದಕರಲ್ಲ ಎಂದು ಸಮರ್ಥಿಸಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಶಿವಸೇನೆ ಗರಂ ಆಗಿದೆ. "ಅವರು ಕಲಾಕಾರರು ಮಾತ್ರ. ನೀವು ಏನುಯೋಚಿಸುತ್ತಿದ್ದೀರಿ. ಕಲಾಕಾರರು ಭಯೋತ್ಪಾದಕರು ಆಗಿದ್ದಾರೆಯೇ?’ ಎಂದು ಸಲ್ಮಾನ್ ಹೇಳಿದ್ದರೆಂದು ವರದಿತಿಳಿಸಿದೆ.