ಮೋದಿ ದೊಡ್ಡ ದೊಡ್ಡ ಭರವಸೆ ನೀಡುತ್ತಾರೆ. ಆದರೆ ಏನೂ ಮಾಡುವುದಿಲ್ಲ: ರಾಹುಲ್ ಗಾಂಧಿ
ಮಥುರಾ, ಅಕ್ಟೋಬರ್ 1: ಉತ್ತರಪ್ರದೇಶದ ಚುನಾವಣೆಯನ್ನು ಗಮನದಲ್ಲಿರಿಸಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂದಿ ಜನರ ನಡುವೆ ಭರವಸೆಯ ಮಾತಾಡುತ್ತಾ ಇದ್ದಾರೆ. ಜೊತೆಗೆ ವಿಪಕ್ಷಗಳ ವಿರುದ್ಧ ಟೀಕೆಹರಿಸುವುದರಲ್ಲಿಯೂ ಮುಂದಿದ್ದಾರೆ. ಮಥುರಾದಲ್ಲಿ ಅವರು ಪ್ರಧಾನಿಯನ್ನು ಉದ್ಧರಿಸಿ " ಮೋದಿ ದೊಡ್ಡದೊಡ್ಡ ಮಾತಾಡುತ್ತಾರೆ ಆದರೆ ಏನೂ ಮಾಡಲು ಅವರಿಂದಾಗುವುದಿಲ್ಲ" ಎಂದು ಟೀಕಿಸಿದ್ದಾರೆಂದು ವರದಿಯಾಗಿದೆ.
15ಲಕ್ಷ ರೂಪಾಯಿ ಕೊಡುವುದು ಏನಾಯಿತು?
’ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಹದಿನೈದು ಲಕ್ಷ ಕೊಡುವುದು ಮತ್ತು ಎಲ್ಲರಿಗೂ ಉದ್ಯೋಗ ದೊರಕಿಸಿಕೊಡುವ ಮೋದಿಯ ಭರವಸೆ ಈಗ ಏನಾಯಿತು?. ಆದರೆ ಮೋದಿ ಹದಿನೈದು ಮಂದಿಗೆ ಒಂದು ಲಕ್ಷ ಹತ್ತು ಸಾವಿರ ಕೋಟಿ ರೂಪಾಯಿ ನೀಡಿದರು" ಎಂದು ಟೀಕಿಸಿದ್ದಾರೆ. ಅವರ ಬಳಿ ಇನ್ನೂ ಹತ್ತು ಲಕ್ಷ ರೂಪಾಯಿ ಉಳಿದಿರಬೇಕಲ್ಲ ಅದನ್ನು ಸೇನೆಯ ಜವಾನರು, ರೈತರು, ಅಂಗಡಿದಾರರು ಮತ್ತು ಸಣ್ಣಪುಟ್ಟ ಕೆಲಸ ಮಾಡಿಕೊಂಡಿರುವವರಿಗೆ ಕೊಡಲಿ" ಎಂದು ಸವಾಲು ಹಾಕಿದ್ದಾರೆ.
ಏಳನೆ ವೇತನ ಆಯೋಗದಲ್ಲಿ ಜವಾನರಿಗೆ ಏನೇನು ಕೊಟ್ಟಿದ್ದಾರೆ. ಇದನ್ನು ಸೇನೆಯ ಮೂವರು ಅಧ್ಯಕ್ಷರು, ಸಿಆರ್‌ಪಿಎಫ್, ಬಿಎಸ್‌ಎಫ್‌ಗೆ ತಿಳಿಸಲಿ. ರೈತರೂ ಜೀವ ಕಳಕೊಳ್ಳುತ್ತಿದ್ದಾರೆ. ಜವಾನರು ಜೀವ ಕಳಕೊಳ್ಳುತ್ತಿದ್ದಾರೆ. ಆದರೆ ಅವರಿಬ್ಬರು ದೇಶದ ಬೆನ್ನೆಲುಬು ಆಗಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ. ನಂತರ ಇಲ್ಲಿನ ಇಸ್ಲಾಮಿಯ ಇಂಟರ್ ಕಾಲೇಜಿನಲ್ಲಿ ಸಭೆನಡೆಸಿ ನಂತರ ರೋಡ್‌ಶೋಗೆ ತೆರಳಿದ್ದಾರೆ.
ಯುಪಿಯ ರೈತ ಕಳ್ಳರುಮತ್ತು ಮಲ್ಯ ಡಿಫಾಲ್ಟರ್:
ಕಾಟ್ ಸಭಾ ನಡೆಸಿದ ವೇಳೆ ಕೆಲವು ರೈತರು ಕಾಟ್‌ನ್ನು ತೆಗೆದುಕೊಂಡು ಹೋದರು. ಆ ಸಮಯದಲ್ಲಿ ಬಿಜೆಪಿ ವತಿಯಿಂದ ಉತ್ತರಪ್ರದೇಶದ ರೈತರು ಕಳ್ಳರು ಎಂದು ಸುದ್ದಿ ಬಂತು. ಒಂದುವೇಳೆ ಉತ್ತರಪ್ರದೇಶದ ರೈತರು ಕಳ್ಳರೆಂದಾದರೆ ಮಲ್ಯ ಮತ್ತೇನು? ಮಲ್ಯ ಹತ್ತುಸಾವಿರ ಕೋಟಿ ತೆಗೆದುಕೊಂಡು ಹೋದಾಗ ಬಿಜೆಪಿ ಅವರನ್ನು ಡಿಫಾಲ್ಟರ್ ಎಂದು ಕರೆಯಿತು ಎಂದು ಬಿಜೆಪಿಯನ್ನು ಕಟುವಾಗಿ ರಾಹುಲ್ ಟೀಕಿಸಿದ್ದಾರೆ.