×
Ad

ಪಾಕ್‌ನಲ್ಲಿ ಭೂಕಂಪ

Update: 2016-10-01 18:04 IST

ಇಸ್ಲಾಮಾಬಾದ್,ಅ.1: ರಾಜಧಾನಿ ಇಸ್ಲಾಮಾಬಾದ್ ಸೇರಿದಂತೆ ಪಾಕಿಸ್ತಾನದ ವಿವಿಧೆಡೆ ಶನಿವಾರ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 5.5 ತೀವ್ರತೆಯನ್ನು ದಾಖಲಿಸಿರುವ ಈ ಭೂಕಂಪದಲ್ಲಿ ಯಾವುದೇ ಸಾವುನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.
ಭೂಕಂಪದಿಂದಾಗಿ ಇಸ್ಲಾಮಾಬಾದ್, ವಾಯವ್ಯ ಪ್ರಾಂತವಾದ ಖೈಬರ್-ಪಖ್ತೂನ್‌ಖಾವಾ ಹಾಗೂ ಪಂಜಾಬ್‌ನ ಉತ್ತರಭಾಗದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.
ಭೂಕಂಪದ ಕೇಂದ್ರಬಿಂದು ಸ್ವಾತ್‌ಕಣಿವೆಯ ನಗರ ಮಿಂಗೊರಾದಿಂದ 117 ಕಿ.ಮೀ.ಪೂರ್ವದಲ್ಲಿ, ಭೂಗರ್ಭದಿಂದ 43.4 ಕಿ.ಮೀ. ಆಳದಲ್ಲಿತ್ತೆಂದು ಅಮೆರಿಕದ ಜಿಯೋಲಾಜಿಕಲ್ ಸರ್ವೆ ಸಂಸ್ಥೆ ವರದಿ ಮಾಡಿದೆ.
ಪಾಕಿಸ್ತಾನವು ಇತ್ತೀಚಿನ ವರ್ಷಗಳಲ್ಲಿ ನಿಯಮಿತವಾಗಿ ಹಲವು ಭೂಕಂಪನಗಳನ್ನು ಕಂಡಿದೆಯಾದರೂ, ಅವುಗಳಲ್ಲಿ ಹೆಚ್ಚಿನವು ಅಪಾಯಕಾರಿಯಾಗಿರಲಿಲ್ಲ. ಆದಾಗ್ಯೂ 2005ರಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ 80 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News