ಬೈಗುಳ ದಾಳಿ!
Update: 2016-10-02 08:57 IST
ಚಂಡೀಗಢ, ಅ.2: ಭಾರತದ ವಿರುದ್ಧ ಬೈಗುಳದ ಬಲೂನ್ ದಾಳಿ ನಡೆದಿದೆ. ಉರ್ದು ಭಾಷೆಯಲ್ಲಿ ಭಾರತವನ್ನು ನಿಂದಿಸುವ ಕನಿಷ್ಠ ಮೂರು ಡಜನ್ ಬಲೂನ್‌ಗಳು, ಪಂಜಾಬ್‌ನ ಗಡಿಭಾಗದ ವಿವಿಧ ಹೊರಠಾಣೆಗಳಲ್ಲಿ ಕಾರ್ಯ ನಿರ್ವಹಿಸುವ ಭಾರತದ ಗಡಿಭದ್ರತಾ ಪಡೆ ಸಿಬ್ಬಂದಿಯ ಕೈಗೆ ಸಿಕ್ಕಿದೆ.
ಫಿರೋಜಾಪುರ, ಪಠಾಣ್‌ಕೋಟ್ ಹಾಗೂ ಅಮೃತಸರದಲ್ಲಿ ಇಂಥ ಸಾಕಷ್ಟು ಬಲೂನ್‌ಗಳು ಸಿಕ್ಕಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಹುತೇಕ ಬಲೂನ್‌ಗಳಲ್ಲಿ ಭಾರತೀಯ ಮಹಿಳೆಯರು ಹಾಗೂ ಭದ್ರತಾ ಪಡೆಯ ಬಗೆಗೆ ಅಶ್ಲೀಲ ಬೈಗುಳಗಳಿವೆ. ಕೆಲವು ಪ್ರಧಾನಿ ಮೋದಿಯವರನ್ನು ನಿಂದಿಸುವಂಥದ್ದು. ಪಾಕಿಸ್ತಾನದ ಸಶಸ್ತ್ರಪಡೆಗಳ ಬಲವನ್ನು ಪರೀಕ್ಷಿಸಲು ನಿಮಗೆಷ್ಟು ಧೈರ್ಯ ಎಂದು ಪ್ರಶ್ನಿಸಲಾಗಿದೆ.
"ಮೋದಿ ಸುನ್ ಲೇ, ಅಯೂಬಿ ಕಿ ತಲ್ವಾರ್ ಅಭಿ ಹಮಾರಾ ಪಾಸ್ ಹೈ" ಎಂದು ಒಂದು ಬರಹವಿದೆ.