ಫೇಸ್‌ಬುಕ್, ಟ್ವಿಟರ್, ಕಂಪ್ಯೂಟರ್‌ಗಳಿಂದ ದೂರ ದೂರ ಈ ವಿಶ್ವವಿಖ್ಯಾತರು!

Update: 2016-10-02 05:50 GMT

ಹಾಲಿವುಡ್‌ನ ಬಹುತೇಕ ತಾರೆಯರು ಸಾಮಾಜಿಕ ತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಮುಂದಿಡುತ್ತಾರೆ. ಆದರೆ ಕೆಲವರು ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಅದನ್ನು ಬಳಸುತ್ತಿಲ್ಲ. ಹೀಗೆ ತಂತ್ರಜ್ಞಾನದ ಮೂಲಕ ಅಭಿಮಾನಿಗಳ ಹತ್ತಿರ ಬರುವುದರಲ್ಲಿ ನಂಬಿಕೆ ಇಲ್ಲದ ತಾರೆಯರ ಅಭಿಪ್ರಾಯಗಳನ್ನೊಮ್ಮೆ ಕೇಳಿ.

ಲ್ಯೂಯಿಸ್ ಸಿ ಕೆ

ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಲೂಯಿಸ್ ಕಳೆದ ಒಂದು ತಿಂಗಳಿನಿಂದ ಇಂಟರ್ನೆಟ್‌ನಿಂದ ದೂರವಾಗಿದ್ದಾರೆ. ಮರಳಿ ಬರುವ ಉದ್ದೇಶವೂ ಅವರಿಗಿಲ್ಲ. ಹಿರಿಯ ಹಾಸ್ಯ ಕಲಾವಿದ ನಿರಂತರವಾಗಿ ಫೋನ್ ಬಳಕೆ ವಿರುದ್ಧ ಇತ್ತೀಚೆಗೆ ಮಾತನಾಡಿದ್ದರು. ಇದರಿಂದ ಸಂವೇದನೆಗೆ ಪ್ರತಿಕ್ರಿಯಿಸುವ ಮತ್ತು ಭಾವಿಸುವ ಜನರ ಸಾಮರ್ಥ್ಯ ಕಳೆದುಹೋಗುತ್ತಿದೆ ಎನ್ನುವುದು ಅವರ ಅಭಿಪ್ರಾಯ.

ಕ್ರಿಸ್ಟೋಫರ್ ವಾಕನ್

ವಾಕನ್ ಪ್ರಕಾರ ಕಂಪ್ಯೂಟರ್ ಬಳಸದೆ ಇರುವುದು ಶಾಂತಿಯುತ. "ನನ್ನ ಪತ್ನಿಯ ಪ್ರಕಾರ ಕಂಪ್ಯೂಟರ್ ಇದ್ದರೆ ಯಾವಾಗಲೂ ಮೇಲಿನ ಸ್ತರದಲ್ಲಿರಬಹುದು ಮತ್ತು ಉತ್ತಮ ಕೆಲಸಗಳನ್ನು ಮಾಡಬಹುದು. ಆದರೆ ನನಗೆ ಆ ಒತ್ತಾಸೆ ಎಂದಿಗೂ ಇರಲಿಲ್ಲ" ಎನ್ನುತ್ತಾರೆ. ಸಿನೆಮಾ ಶೂಟಿಂಗ್ ಸಂದರ್ಭದಲ್ಲಿ ನಿರ್ದೇಶಕರೇ ಅವರಿಗೆ ಒಂದು ಫೋನ್ ಕೊಡುತ್ತಾರೆ. ಶೂಟಿಂಗ್ ಮುಗಿದ ಮೇಲೆ ಫೋನನ್ನು ಅವರು ವಾಪಸು ಮಾಡುತ್ತಾರೆ.

ವಿನೊನ ರೈಡರ್

ರೈಡರ್ ಎಂದೂ ಇಂಟರ್ನೆಟ್ ಬಳಸಿಲ್ಲ. "ನನ್ನ ಬ್ಲಾಕ್‌ಬೆರಿಯಲ್ಲಿ ಇಮೇಲ್ ಇದೆ. ಆದರೆ ಬ್ಲಾಗ್ ನಾನು ಎಂದೂ ಓದಿಲ್ಲ" ಎನ್ನುತ್ತಾರೆ ರೈಡರ್. ಆದರೆ ಈಗ ಬ್ಲಾಕ್‌ಬೆರಿ ಯಾರೂ ಬಳಸದೆ ಇರುವಾಗ ಜನರ ಜೊತೆಗೆ ಹೇಗೆ ವ್ಯವಹರಿಸುತ್ತಾರೆ ಎನ್ನುವುದೂ ಆಶ್ಚರ್ಯ.

ಏಂಜಲಿನಾ ಜೋಲಿ

2011ರಲ್ಲಿ ಏಂಜಲಿನಾ ಮೊದಲ ಬಾರಿಗೆ ಅಮೆಜಾನ್ ಡಾಟ್ ಕಾಮ್ ಬ್ರೌಸ್ ಮಾಡಿ ಬಹಳ ಖುಷಿಪಟ್ಟಿದ್ದಾಗಿ ಹೇಳಿದ್ದರು. "ನನ್ನ ಮೆದುಳೇ ಅಲ್ಲಾಡಿ ಹೋಯಿತು. ವೈರ್‌ಗಳು ವಿಭಿನ್ನ ದಿಕ್ಕಿಗೆ ಚಲಿಸಿದವು. ನಾನು ಕ್ಯಾಟಲಾಗ್ ನೋಡಿಯೇ ಬೇಸ್ತುಬಿದ್ದೆ" ಎಂದಿದ್ದರು. ಕೆಲ ವರ್ಷಗಳ ನಂತರ ಅವರು ಕಂಪ್ಯೂಟರ್ ತೆರೆಯುವುದೂ ಗೊತ್ತಿಲ್ಲ ಎಂದೂ ಒಪ್ಪಿಕೊಂಡಿದ್ದರು.

ಬ್ರಾಡ್ ಪಿಟ್

ಟ್ವಿಟರ್ ಬಳಸದ ಬ್ರಾಡ್‌ಪಿಟ್ ಕಂಪ್ಯೂಟರ್ ಹೇಗೆ ಕೆಲಸ ಮಾಡುತ್ತದೆ ಎನ್ನುವುದೂ ಗೊತ್ತಿಲ್ಲ ಎಂದಿದ್ದಾರೆ. ಹಾಗೆಯೇ ಈ ಪ್ರಚಾರದ ತಂತ್ರದಲ್ಲಿ ಭಾಗವಹಿಸುವ ಇಚ್ಛೆಯೂ ಅವರಿಗಿಲ್ಲ. ನಮ್ಮ ವೇರ್‌ಗಳನ್ನು ಪ್ರಚಾರ ಮಾಡಿ ಮಾರಾಟ ಮಾಡುವಂತೆ ಕೆಲಸ ನನಗೆ ಶಾಂತಿ ಕೊಡದು ಎನ್ನುತ್ತಾರೆ ಬ್ರಾಡ್‌ಪಿಟ್.

ಎಲ್ಟನ್ ಜಾನ್

ದಶಕದ ಹಿಂದೆ ಎಲ್ಟನ್ ಜಾನ್ ಐದು ವರ್ಷಗಳ ಕಾಲ ಇಡೀ ಇಂಟರ್ನೆಟ್ ಜಗತ್ತನ್ನೇ ಮುಚ್ಚಬೇಕು ಎಂದು ಘೋಷಿಸಿದ್ದರು. ಬ್ರಿಟಿಷ್ ಸಂಗೀತ ತಜ್ಞನ ಪ್ರಕಾರ ಆನ್‌ಲೈನ್ ಶೇರಿಂಗ್ ಮತ್ತು ಸಂಪರ್ಕದಿಂದ ಸಂಗೀತಕ್ಕೆ ಕೆಡುಕಾಗುತ್ತಿದೆ. "ಮನೆಯಲ್ಲಿ ಕುಳಿತು ಬ್ಲಾಗ್ ಬರೆಯುವ ಬದಲಿಗೆ ದಾರಿಗೆ ಇಳಿಯೋಣ, ಪ್ರತಿಭಟಿಸೋಣ" ಎಂದಿದ್ದರು ಜಾನ್.

ಜಾರ್ಜ್ ಕ್ಲೂನಿ

ಕ್ಲೂನಿ ಫೇಸ್‌ಬುಕ್ ಮತ್ತು ಟ್ವಿಟರ್‌ನ್ನು ತೀವ್ರ ವಿರೋಧಿಸಿದ್ದಾರೆ. ಲೈವ್ ಟಿವಿಯಲ್ಲಿ ಪರೀಕ್ಷೆ ಎದುರಿಸಲು ಸಿದ್ಧನೇ ವಿನಾ ಫೇಸ್‌ಬುಕ್ ಪುಟದಲ್ಲಿ ಅಲ್ಲ. ಜನಪ್ರಿಯವಾದ ವ್ಯಕ್ತಿ ಟ್ವಿಟರ್‌ನಲ್ಲಿದ್ದರೆ ಆತ ಪೆದ್ದನೇ ಎಂದೂ ಅವರು ಹೇಳಿದ್ದಾರೆ.

ರೇಚಲ್ ಮೆಕ್‌ಆಡಮ್ಸ್

ಈಗಲೂ ರೇಚಲ್ ರೇಡಿಯೋದಲ್ಲಿ ಸುದ್ದಿ ಕೇಳುತ್ತಾರೆ. ಟಿವಿ ಹೊಂದಿಲ್ಲ. ಇಮೇಲ್ ಕೂಡ ಬಳಸುವ ಮಾಹಿತಿ ಹೊಂದಿಲ್ಲ. ಇತ್ತೀಚೆಗೆ ಬಾಗಶಃ ನೆಟ್‌ಫ್ಲಿಕ್ಸ್ ಗಾಳಿ ಅವರಿಗೆ ಬೀಸಿದೆ.

ಎಮಿನೆಮ್

ಎಮಿನೆಮ್ ಪ್ರಕಾರ ಕಂಪ್ಯೂಟರ್ ಕಲಿತರೆ ಇಡೀ ದಿನ ಅದರ ಮುಂದೆ ಕುಳಿತು ಕಮೆಂಟ್ಸ್ ನೋಡಬೇಕು. ಅದು ನಿಜಕ್ಕೂ ಹುಚ್ಚನಂತಾಗಿಸಲಿದೆ. ಟ್ವಿಟರ್‌ನಲ್ಲಿ ಅವರ ಖಾತೆ ಇದ್ದರೂ ಏಳು ವರ್ಷದಲ್ಲಿ ಅವರು 615 ಟ್ವೀಟ್ ಅಷ್ಟೇ ಮಾಡಿದ್ದಾರೆ.

ಶೈಲೀನ್ ವೂಡ್ಲಿ

ಶೈಲೀನ್ ಅಪರೂಪಕ್ಕೆ ಇಂಟರ್ನೆಟ್ ಪರಿಶೀಲಿಸುತ್ತಾರೆ. ಫೋನ್ ಅವರ ಬಳಿ ಇಲ್ಲ. ನಿರ್ದೇಶನಗಳ ಅಗತ್ಯವಿದ್ದಾಗ ಜನರನ್ನೇ ಕೇಳುತ್ತಾರೆ. ತಾಂತ್ರಿಕ ಬಜ್‌ನಿಂದ ದೂರವಾದಷ್ಟು ಹೆಚ್ಚು ಸ್ವಾತಂತ್ರ್ಯ ಸಿಗುತ್ತದೆ ಎನ್ನುವುದು ಅವರ ಭಾವನೆ.

ಜೇಕ್ ಗಿಲೆನ್ಹಾಲ್

ಜೇಕ್ ಪ್ರಕಾರ ಫೋನಿನಲ್ಲೇ ಕಾಲ ಕಳೆದು ಪಕ್ಕದಲ್ಲಿರುವವರ ಬಗ್ಗೆ ಅನಾಸಕ್ತಿ ತೋರಿಸುವವರನ್ನು ಕಂಡರೆ ಸಿಟ್ಟು ಬರುತ್ತದೆ. ಈಗ ಎಲ್ಲರೂ ಕೆಳಗೆ ನೋಡುತ್ತಾರೆಯೇ ವಿನಾ ಮೇಲೆ ನೋಡುತ್ತಿಲ್ಲ ಎನ್ನುತ್ತಾರೆ. ಅಭಿಮಾನಿಗಳು ಸೆಲ್ಫೀ ಮತ್ತು ಫೋಟೋಗಳನ್ನು ಬಯಸಿದರೂ ಅಂತಹ ಪ್ರಚಾರದ ಬಗ್ಗೆ ಅವರಿಗೆ ಆಸಕ್ತಿಯಿಲ್ಲ.

ಜೆನ್ನಿಫರ್ ಲಾರೆನ್ಸ್

ಲಾರೆನ್ಸ್ ಪ್ರಕಾರ ಸಾಮಾಜಿಕ ತಾಣ ಮತ್ತು ತಂತ್ರಜ್ಞಾನ ಅವರಿಗಾಗದು. "ಫೋನ್ ಮತ್ತು ತಂತ್ರಜ್ಞಾನದಲ್ಲಿ ನಾನು ಸಮರ್ಥಳಲ್ಲ. ಇಮೇಲ್ ನೋಡಲು ಬರುವುದಿಲ್ಲ. ಟ್ವಿಟರ್ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲ" ಎನ್ನುತ್ತಾರೆ. ಎಂದಿಗೂ ಟ್ವಿಟರ್ ಖಾತೆ ತೆರೆಯುವುದಿಲ್ಲ ಎಂದೂ ಹೇಳಿದ್ದಾರೆ.

ಕೃಪೆ: www.businessinsider.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News