ಆಮಿರ್ ಖಾನ್ ಬಗ್ಗೆ ಅಮಿತಾಭ್ ಹೇಳಿದ್ದೇನು ?

Update: 2016-10-02 14:08 GMT

ಮುಂಬೈ, ಅ.2: ತನ್ನ ‘ಥಗ್ ಆಫ್ ಹಿಂದೂಸ್ಥಾನ್’ನ ಸಹ ನಟ ಆಮಿರ್ ಖಾನ್‌ರನ್ನು ‘ಮಹಾನ್ ನಟ’ ಎಂದು ಕರೆಯಬಹುದೇ ಹೊರತು ತನ್ನನ್ನಲ್ಲವೆಂದು ಮೇರು ನಟ ಅಮಿತಾಭ್ ಬಚ್ಚನ್ ಹೇಳುತ್ತಾರೆ.

ಬಚ್ಚನ್ ಹಾಗೂ 51ರ ಹರೆಯದ ಆಮಿರ್, ಮೊದಲ ಬಾರಿಗೆ ಯಶ್ ರಾಜ್ ಫಿಲ್ಮ್ಸ್‌ನ ಯೋಜನೆಯಲ್ಲಿ ಒಟ್ಟಿಗೆ ಅಭಿನಯಿಸಲಿದ್ದಾರೆ.

ಆಮಿರ್‌ರನ್ನು ‘ಮಹಾನ್’ ಎನ್ನಬಹುದೇ ಹೊರತು ತನ್ನನ್ನಲ್ಲ. ತಾನು ಅವರ ಸಾಧನೆ ಹಾಗೂ ಚಿತ್ರಗಳನ್ನು ಆನಂದಿಸಿದ್ದೇನೆ. ಅವರು, ಜನಪ್ರಿಯ ನಟ ಹಾಗೂ ಮಹಾನ್ ತಾರೆಯಾಗಿದ್ದಾರೆಂದು, ಇಬ್ಬರು ಮಹಾನ್ ನಟರು ಜೊತೆಯಾಗಲಿರುವ ಕುರಿತಾದ ಪ್ರಶ್ನೆಯೊಂದಕ್ಕುತ್ತರವಾಗಿ ಪಿಟಿಐಗೆ ತಿಳಿಸಿದರು.

‘ಧೂಂ-3’ ಖ್ಯಾತಿಯ ವಿಜಯ ಕೃಷ್ಣ ಆಚಾರ್ಯ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News