ಅ.20-21: ರಾಷ್ಟ್ರಮಟ್ಟದ ಕಂಪ್ಯೂಟರ್ ನೆಟ್‌ವರ್ಕಿಂಗ್ ಕಾರ್ಯಾಗಾರ

Update: 2016-10-03 13:49 GMT

ಉಡುಪಿ, ಅ.3: ಕುಂದಾಪುರ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗ ಮತ್ತು ಹೈದರಬಾದಿನ ಐಐಟಿಯ ಸಹಯೋಗ ದೊಂದಿಗೆ ರಾಷ್ಟ್ರಮಟ್ಟದ ಕಂಪ್ಯೂಟರ್ ನೆಟ್‌ವರ್ಕಿಂಗ್ ಕಾರ್ಯಾಗಾರವನ್ನು ಅ.20 ಮತ್ತು 21ರಂದು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಚಾಂಪಿಯನ್‌ಶಿಪ್‌ನ್ನು ಏರ್ಪಡಿಸ ಲಾಗಿದ್ದು, ಮೂವರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ದೆಹಲಿ ಐಐಟಿ ಯಲ್ಲಿ ನಡೆಯುವ ಫೈನಲ್ ಹಂತಕ್ಕೆ ಕಳುಹಿಸಿಕೊಡಲಾಗುವುದು ಎಂದು ಕಾಲೇಜು ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೊ.ಮೆಲ್ವಿನ್ ಡಿಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಕಾರ್ಯಾಗಾರದಲ್ಲಿ ಭಾಗವಹಿಸಲು ಇಂಜಿನಿಯರಿಂಗ್, ಎಂಎಸ್‌ಸಿ, ಎಂಸಿಎ ಹಾಗೂ ಡಿಪ್ಲೋಮಾ 60 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಕಾರ್ಯಾಗಾರವು ಸಂಪೂರ್ಣವಾಗಿ ಪ್ರಾಯೋಗಿಕವಾಗಿದೆ. ಕಾರ್ಯಾಗಾರಕ್ಕೆ ಹೆಸರು ನೊಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಪ್ರೊ.ಶೈಲೇಶ್ ಬಿ.ಸಿ.(9964000846) ಅವರನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರೊ.ಶೈಲೇಶ್ ಬಿ.ಸಿ., ಪ್ರೊ.ಮುರಳೀಧರ ಬಿ.ಕೆ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News