ದಿಲ್ಲಿಯಲ್ಲಿ ಸಂಪ್ರದಾಯ ಮುರಿದ ಸಿಂಗಾಪುರ ಪ್ರಧಾನಿ

Update: 2016-10-04 07:05 GMT

ಹೊಸದಿಲ್ಲಿ,ಅ.4 : ಹೊಸದಿಲ್ಲಿಗೆ ಕಳೆದ ರಾತ್ರಿ ಆಗಮಿಸಿದ ಸಿಂಗಾಪುರ ಪ್ರಧಾನಿ ಲೀ ಹ್ಸೀನ್ಲೂಂಗ್ ಸಂಪ್ರದಾಯ ಮುರಿದು ವಿಮಾನ ನಿಲ್ದಾಣದಿಂದ ಹೋಟೆಲಿಗೆತಮ್ಮ ಬೆಂಗಾವಲು ವಾಹನಗಳೊಂದಿಗೆ ಅಧಿಕೃತ ಕಾರಿನಲ್ಲಿ ಹೋಗುವ ಬದಲು ಚಾರ್ಟರ್ಡ್ ಬಸ್ಸಿನಲ್ಲಿ ಪ್ರಯಾಣಿಸಿದರು.

ಸಿಂಗಾಪುರ ಪ್ರಧಾನಿಯೊಂದಿಗೆ ಅವರ ಪತ್ನಿ ಹೋ ಚಿಂಗ್, ಪ್ರಮುಖ ಸಚಿವರು, ಸಂಸದರು ಹಾಗೂ ಹಿರಿಯ ಅಧಿಕಾರಿಗಳು ಭಾರತಕ್ಕೆ ಆಗಮಿಸಿದ್ದು ಅವರನ್ನೆಲ್ಲಾ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಕೇಂದ್ರ ಸಚಿವ ರಾವ್ ಇಂದರ್ ಜಿತ್ ಗೋಯಲ್ ಬರಮಾಡಿಕೊಂಡರು.

ಪ್ರಧಾನಿ ನರೇಂದ್ರ ಮೋದಿ ಇಂದು ಸಿಂಗಾಪುರದ ಪ್ರಧಾನಮಂತ್ರಿಗೆ ಭೋಜನ ಸತ್ಕಾರ ನೀಡಲಿದ್ದು ಎರಡೂ ದೇಶಗಳು ಸಹಕಾರ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಮೂರು ಒಪ್ಪಂದಗಳಿಗೆ ಸಹಿ ಹಾಕಲಿವೆ.

ಸಿಂಗಾಪುರದ ಪ್ರಧಾನಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರನ್ನೂ ಭೇಟಿ ಮಾಡಲಿದ್ದಾರೆ. ಭಾರತದಲ್ಲಿ ವಾಸಿಸುವ ಸಿಂಗಾಪುರದ ನಾಗರಿಕರು ತಮ್ಮ ದೇಶದ ಪ್ರಧಾನಿಗೆ ಸತ್ಕಾರ ಕೂಟವೊಂದನ್ನೂ ಇಂದು ಆಯೋಜಿಸಿದ್ದಾರೆ.

ಪ್ರಧಾನಿ ಲೂಂಗ್ ಅವರು ಅಕ್ಟೋಬರ್ 5 ಹಾಗೂ 6 ರಂದು ರಾಜಸ್ಥಾನದ ಉದಯಪುರಕ್ಕೆ ಭೇಟಿ ನೀಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News