ಎಚ್‌ಐವಿಯಿಂದ ವ್ಯಕ್ತಿ ಗುಣಮುಖ

Update: 2016-10-04 10:52 GMT

ಲಂಡನ್,ಅ.4 : 44 ವರ್ಷದ ಬ್ರಿಟಿಷ್ ಪ್ರಜೆಯೊಬ್ಬರು ಮಾರಕ ಎಚ್ ಐ ವಿ ರೋಗದಿಂದ ಗುಣಮುಖರಾದ ವಿಶ್ವದ ಪ್ರಪ್ರಥಮ ವ್ಯಕಿಯಾಗಿದ್ದಾರೆಂದು ವಿಜ್ಞಾನಿಗಳು ಹೇಳಿಕೊಂಡಿದ್ದಾರೆ. ಪ್ರಸಕ್ತ ಎಚ್ ಐ ವಿ ವೈರಸ್ ಆ ವ್ಯಕ್ತಿಯ ರಕ್ತದಿಂದ ಸಂಪೂರ್ಣವಾಗಿ ನಿರ್ನಾಮವಾಗಿದ್ದು ಇದು ಹೀಗೆಯೇ ಮುಂದುವರಿದರೆ ಈ ವ್ಯಕ್ತಿ ಎಚ್ ಐ ವಿಯಿಂದ ಸಂಪೂರ್ಣವಾಗಿ ಗುಣಮುಖರಾದ ಪ್ರಥಮ ವ್ಯಕ್ತಿ ಎಂದು ಪರಿಗಣಿಸಲ್ಪಡುತ್ತಾರೆ.

ಪ್ರಸಕ್ತ ಇಂಗ್ಲೆಂಡಿನ ಐದು ವಿಶ್ವವಿದ್ಯಾಲಯಗಳತಂಡವೊಂದು 50 ಮಂದಿಯ ಮೇಲೆ ಪ್ರಯೋಗಗಳನ್ನು ನಡೆಸುತ್ತಿದ್ದು ಎಚ್ ಐ ವಿ ರೋಗವನ್ನು ಸಂಪೂರ್ಣ ಗುಣಪಡಿಸುವ ನಿಟ್ಟಿನಲ್ಲಿ ತಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತಿದ್ದಾರೆ. ಆದರೆ ಈ ಪ್ರಯೋಗ ಇನ್ನೂ ಆರಂಭಿಕ ಹಂತದಲ್ಲಿದೆ, ಎಂದು ನ್ಯಾಷನಲ್ ಇನ್ ಸ್ಟಿಟ್ಯೂಟ್ ಫಾರ್ ಹೆಲ್ತ್ ರಿಸರ್ಚ್ ಆಫೀಸ್ ಫಾರ್ ಕ್ಲಿನಿಕಲ್ ರಿಸರ್ಚ್ ಇನ್ಫ್ರಾಸ್ಟ್ರಕ್ಚರ್ ಇದರ ಆಡಳಿತ ನಿರ್ದೇಶಕ ಮಾರ್ಕ್ ಸ್ಯಾಮುವೆಲ್ಸ್ ಹೇಳಿದ್ದಾರೆ.

ಪ್ರಸಕ್ತ ಲಭ್ಯವಿರುವ ಆ್ಯಂಟಿ-ರಿಟ್ರೋವೈರಲ್ ಥೆರಪಿಯನ್ವಯ ಎಚ್ ಐ ವಿ ವೈರಾಣುಗಳುಸಕ್ರಿಯ ಟಿ-ಕಣಗಳನ್ನು ಗುರಿಯಾಗಿಸಬಹುದೇ ವಿನಹಸಕ್ರಿಯವಾಗಿಲ್ಲದ ಟಿ-ಸೆಲ್ ಗಳನ್ನುಗುರಿಯಾಗಿಸುವುದಿಲ್ಲ. ಇದರರ್ಥ ಚಿಕಿತ್ಸೆಯ ಹೊರತಾಗಿಯೂ ರೋಗಿಯ ದೇಹದಲ್ಲಿಆ ಮಾರಕ ವೈರಾಣು ಬೆಳೆಯುತ್ತಲೇ ಹೋಗುತ್ತಿರುತ್ತದೆ.

ಇದೀಗ ವಿಜ್ಞಾನಿಗಳು ಕಂಡು ಹಿಡಿಯಲು ಪ್ರಯತ್ನಿಸುತ್ತಿರುವ ಹೊಸ ಚಿಕಿತ್ಸಾವಿಧಾನದಲ್ಲಿ ಎರಡು ಹಂತಗಳಿದ್ದು, ಮೊದಲನೇ ಹಂತದಲ್ಲಿ ದೇವು ಎಚ್ ಐ ವಿ ವೈರಾಣುಗಳನ್ನು ಗುರುತಿಸಲು ಸಹಾಯಕವಾಗುವಂತಹ ಲಸಿಕೆಯೊಂದನ್ನು ನೀಡಲಾಗಿ ಆ ವೈರಾಣುಗಳನ್ನು ಹೊಡೆೋಡಿಸಲು ಸಹಾಯ ಮಾಡುತ್ತದೆ.ಎರಡನೆಯದಾಗಿವೊರಿನೊಸ್ಟೇಟ್ ಎಂಬ ಹೊಸ ಔಷಧ ಸಕ್ರಿಯವಾಗಿಲ್ಲದ ಟಿ-ಸೆಲ್ ಗಳನ್ನು ಸಕ್ರಿಯಗೊಳಿಸಿ ದೇಹದ ರೋಗನಿರೋಧಕ ವ್ಯವಸ್ಥೆ ಅವುಗಳನ್ನು ಗುರುತಿಸುವಂತೆ ಮಾಡುತ್ತದೆ.

ಈ ಔಷಧ ಬಗ್ಗೆ ವಿಜ್ಞಾನಗಳುಮುಂದಿನ ಐದು ವರ್ಷಗಳ ತನಕ ತಮ್ಮ ಪ್ರಯೋಗ ಮುಂದುವರಿಸಲಿದೆಯೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News