ಯೋಧರನ್ನು ಅವಮಾನಿಸಿದ ಆರೋಪ: ಓಂ ಪುರಿ ವಿರುದ್ಧ ದೂರು

Update: 2016-10-04 15:25 GMT

ಮುಂಬೈ,ಅ.4: ಟಿವಿ ಚರ್ಚೆಯೊಂದರಲ್ಲಿ ಸೇನಾ ಯೋಧರನ್ನು ಅವಮಾನಿಸಿದ ಆರೋಪದಲ್ಲಿ ಬಾಲಿವುಡ್ ನಟ ಓಂ ಪುರಿ ವಿರುದ್ಧ ಉಪನಗರಿ ಅಂಧೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಷ್ಟ್ರೀಯ ಸುದ್ದಿವಾಹಿನಿಯೊಂದರಲ್ಲಿ ಚರ್ಚೆಯಲ್ಲಿ ಭಾಗಿಯಾಗಿದ್ದ ಓಂ ಪುರಿ ಪಾಕಿಸ್ತಾನಿ ಕಲಾವಿದರನ್ನು ಬಲವಾಗಿ ಬೆಂಬಲಿಸಿದ್ದರು. ಅಲ್ಲದೆ ಅವರೊಂದಿಗೆ ಕೆಲಸ ಮಾಡುವುದನ್ನು ತಾನು ಮುಂದುವರಿಸುವುದಾಗಿ ಹೇಳಿದ್ದರು.

ಪಾಕಿಸ್ತಾನವು ನಡೆಸುತ್ತಿರುವ ಛಾಯಾಯುದ್ಧದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಕಾರ್ಯಕ್ರಮ ನಿರೂಪಕನ ಪ್ರಶ್ನೆಗೆ ತಿರುಗೇಟು ನೀಡಿದ ಓಂ ಪುರಿ,ಪಾಕ್ ಕಲಾವಿದರು ಭಾರತೀಯ ವೀಸಾಗಳ ಮೇಲೆ ಇಲ್ಲಿ ಬಂದಿದ್ದಾರೆ,ಅಕ್ರಮವಾಗಿ ಅಲ್ಲ. ಅವರ ವೀಸಾಗಳನ್ನು ರದ್ದುಗೊಳಿಸುವಂತೆ ಸರಕಾರವನ್ನು ಕೇಳಿ ಎಂದು ಹೇಳಿದ್ದರು. ಬಾರಾಮುಲ್ಲಾ ದಾಳಿಯಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾಗಿರುವ ಯೋಧನ ಕುರಿತು ಪ್ರಶ್ನಿಸಿದಾಗ,ಸೇನೆಗೆ ಸೇರುವಂತೆ ಆತನಿಗೆ ಯಾರು ಹೇಳಿದ್ದರು ಎಂದು ಮರುಪ್ರಶ್ನೆ ಕೇಳಿದ್ದರು.
ಪಾಕಿಸ್ತಾನಿ ಕಲಾವಿದರು ಭಯೋತ್ಪಾದಕರಲ್ಲ ಎಂಬ ನಟ ಸಲ್ಮಾನ್ ಖಾನ್ ಹೇಳಿಕೆಯನ್ನು ನೀವೇಕೆ ಬೆಂಬಲಿಸುತ್ತಿದ್ದೀರಿ ಎಂಬ ಪ್ರಶ್ನೆಗೆ, ಭಾರತ ಮತ್ತು ಪಾಕಿಸ್ತಾನಗಳು ಇಸ್ರೇಲ್ ಮತ್ತು ಫೆಲೆಸ್ತೀನ್‌ಗಳಂತಾಗಬೆಕು ಮತ್ತು ಶತಮಾನಗಳ ಕಾಲ ಕಾದಾಡು ತ್ತಿರಬೇಕು ಎಂದು ನೀವು ಬಯಸುತ್ತಿದ್ದೀರಿ ಎಂದು ಓ ಂ ಪುರಿ ಉತ್ತರಿಸಿದ್ದರು.


ಆಗಿದ್ದು ಕೇವಲ ದೇಶದ ವಿಭಜನೆಯಲ್ಲ,ಅದು ಕುಟುಂಬಗಳ ವಿಭಜನೆ. ನಮ್ಮ ದೇಶದಲ್ಲಿ 22 ಕೋಟಿ ಮುಸ್ಲಿಮರಿದ್ದಾರೆ ಮತ್ತು ಅವರ ಬಂಧುಗಳು ಪಕಿಸ್ತಾನದಲ್ಲಿದ್ದಾರೆ. ಹಾಗಯೇ ಪಾಕಿಸ್ತಾನಿಗಳ ಬಂಧುಗಳೂ ಭಾರತದಲ್ಲಿದ್ದಾರೆ. ಭಾರತವು ವಿಶ್ವದಲ್ಲಿ ಅತ್ಯಂತ ಹೆಚ್ಚಿನ ಮುಸ್ಲಿಮರನ್ನು ಹೊಂದಿರುವ ಎರಡನೇ ದೇಶವಾಗಿದೆ ಎಂದು ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News