ಫವಾದ್ ಖಾನ್ 'ಭಾರತ ವಿರೋಧಿ ಹೇಳಿಕೆ'ಗಳ ಹಿಂದಿನ ಅಸಲಿಯತ್ತು ಇಲ್ಲಿದೆ

Update: 2016-10-04 16:23 GMT

ಪಾಕಿಸ್ತಾನಿ ಕಲಾವಿದರಿಗೆ ಭಾರತದಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ನೀಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆಯೇ ನೀವು, ನಟ ಫವಾದ್ ಖಾನ್ ಸುರಕ್ಷಿತವಾಗಿ ಪಾಕಿಸ್ತಾನ ಸೇರಿದ ಬಳಿಕ ಅವರು ನೀಡಿದ ಪ್ರತಿಕ್ರಿಯೆ ಸುದ್ದಿಯಿಂದ ತಪ್ಪಿಸಿಕೊಳ್ಳಲಾರಿರಿ. ಫವಾದ್ ಅವರು ಬಾಲಿವುಡ್ ಹಾಗೂ ಭಾರತದ ಬಗ್ಗೆ ನೀಡಿದ "ಕೃತಘ್ನ ಹೇಳಿಕೆ" ಫೇಸ್‌ಬುಕ್ ಪೋಸ್ಟ್, ರಿ ಟ್ವೀಟ್ ಅಥವಾ ನಿಮ್ಮ ಮೊಬೈಲ್‌ನ ವಾಟ್ಸ್ ಆಪ್ ಪಿಂಗ್ ಮೂಲಕ ನಿಮಗೆ ತಲುಪಿರಬೇಕು.


ನಿಮ್ಮಲ್ಲಿ ಬಹುತೇಕ ಮಂದಿ, ಆ ಸಂದೇಶವನ್ನು ನಿಮ್ಮ ಸ್ನೇಹಿತರು, ಸಂಬಂಧಿಕರೊಂದಿಗೆ ವಾಟ್ಸ್ ಅಪ್ ಗುಂಪನ ಮೂಲಕ ಹಂಚಿಕೊಂಡಿರುತ್ತೀರಿ ಅಥವಾ ಫಾರ್ವರ್ಡ್ ಮಾಡಿರುತ್ತೀರಿ. "ಕೃತಜ್ಞತೆ ಇಲ್ಲದ ಪಾಕಿಸ್ತಾನಿ"ಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುತ್ತೀರಿ.


ಪಾಕಿಸ್ತಾನಿ ನಟರಿಗೆ ತಕ್ಷಣ ಹೊರಹೋಗುವ ದಾರಿ ತೋರಿಸಬೇಕು ಎಂಬ ಅಭಿಪ್ರಾಯ ಹೊಂದಿದ ಹಲವರು, ಅದೇ ಅಭಿಪ್ರಾಯ ಹೊಂದಿರದ ಸ್ನೇಹಿತರು ಅಥವಾ ಸಹೋದ್ಯೋಗಿಗಳಿಗೆ ತಕ್ಷಣ ಅದನ್ನು ಕಳುಹಿಸಿರುತ್ತೀರಿ. ಅದು ಕೂಡಾ "ಹಾಗೆಂದು ನಿಮಗೆ ಮೊದಲೇ ಹೇಳಿದ್ದೆವು" ಎಂಬ ಕುಹಕದೊಂದಿಗೆ ಅದನ್ನು ಕಳುಹಿಸಿರುತ್ತೀರಿ.
ಆದ್ದರಿಂದ ನಿಜವಾಗಿ ಫವಾದ್ ಖಾನ್ ಅವರು ಭಾರತದ ಬಗ್ಗೆ ಹೇಳಿಕೆ ನೀಡಿದ್ದೆಲ್ಲಿ? ಅದನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಆ ಸುದ್ದಿಯನ್ನು ಪ್ರಕಟಿಸಿದ ವೆಬ್‌ಸೈಟ್‌ನಲ್ಲಿ ಜಾಲಾಡಿದೆ. Godofsmallthing.com ಎಂಬ ವೆಬ್‌ಸೈಟ್, "ಫವಾದ್ ಖಾನ್ ಸ್ಪೀಕ್ಸ್ ಅಪ್ ಅಬೌಟ್ ಇಂಡಿಯನ್ಸ್ ಆಫ್ಟರ್ ಲ್ಯಾಂಡಿಂಗ್ ಇನ್ ಪಾಕಿಸ್ತಾನ್ ಅಂಡ್ ಇಟ್ ವಿಲ್ ಬ್ರೇಕ್ ಹರ್ಟ್ಸ್ ಆಫ್ ಮೆನಿ" ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿತ್ತು. ಅದಕ್ಕೆ ಪೂರಕವಾಗಿ ನಟನ ಹೇಳಿಕೆಯನ್ನು ಉಲ್ಲೇಖಿಸಿತ್ತು. ಆ ಲೇಖನವನ್ನು 3.95 ಲಕ್ಷ ಮಂದಿ ನೋಡಿದ್ದರು. 13 ಸಾವಿರ ಮಂದಿ ಇದನ್ನು ಫೇಸ್‌ಬುಕ್‌ನಲ್ಲಿ ಷೇರ್ ಮಾಡಿದ್ದಾರೆ. "ನನ್ನ ಮೊದಲ ಆದ್ಯತೆ ಪಾಕಿಸ್ತಾನ. ಪಾಕಿಸ್ತಾನ ಮೊದಲು ಬರುತ್ತದೆ. ಭಾರತೀಯ ವ್ಯಕ್ತಿಗಳ ಹೃದಯ ತೀರಾ ಚಿಕ್ಕದು. ಆ ಮಂದಿಗೆ ಹಣವೇ ಮುಖ್ಯ. ದೇಶದ ಬಗ್ಗೆ ಪ್ರೀತಿ ಅಥವಾ ನಮ್ಮ ಸೈನಿಕರ ಬಗ್ಗೆ ಪ್ರೀತಿ ಇಲ್ಲ" ಎಂದು ಅವರು ಹೇಳಿಕೆ ನೀಡಿದ್ದನ್ನು ವೆಬ್‌ಸೈಟ್ ಉಲ್ಲೇಖಿಸಿತ್ತು.


ಫವಾದ್ ಅವರ ಹೇಳಿಕೆ ವಿರುದ್ಧ ಟೀಕಿಸಿ ಕೊನೆಗೆ, "ನಾವು ಸ್ವತಃ ಇದನ್ನು ದೃಢೀಕರಿಸುವುದಿಲ್ಲ. ಈ ಲೇಖನದ ಮೂಲ: ಇಂಟರ್‌ನೆಟ್ ಹಿಂದೂ ಹಾಗೂ Threemad.com ಎಂದು ಸ್ಪಷ್ಟಪಡಿಸಿತ್ತು.
Internethindu.org ವೆಬ್‌ಸೈಟ್‌ಗೆ ಭೇಟಿ ನಿಡಿದಾಗ, ವಾಯ್ಸ ಆಫ್ ಹಿಂದೂ ಎಂಬ ಟ್ಯಾಗ್‌ಲೈನ್ ಹೊಂದಿತ್ತು. ಇದರಲ್ಲಿ "ಫವಾದ್ ಖಾನ್ ಯೂಸಸ್ ಹಾರ್ಷ್ ವರ್ಡ್ಸ್ ಅಗನೆಸ್ಟ್ ಇಂಡಿಯಾ, ಆಫ್ಟರ್ ರೀಚಿಂಗ್ ಪಾಕಿಸ್ತಾನ್. ದೋಸ್ ಹೂ ಸಪೋರ್ಟೆಡ್ ಹಿಮ್ ಶುಡ್ ನೌ ಡೈ ಔಟ್ ಆಫ್ ಶೇಮ್" ಶೀರ್ಷಿಕೆಯ ಲೇಖನ ಇತ್ತು.

ತೀರಾ ಕಳಪೆಯಾಗಿ ಬರೆದಿದ್ದ ಈ ಲೇಖನದಲ್ಲಿ, ಫವಾದ್ ನೀಡಿದ್ದಾರೆ ಎನ್ನಲಾದ ಹೇಳಿಕೆಯನ್ನು ಪದೇ ಪದೇ ಉಲ್ಲೇಖಿಸಲಾಗಿತ್ತು. ಇದು ಭಾರತೀಯ ಬೆಂಬಲಿಗರ ಮುಖದ ಮೇಲೆ ಉಗಿದಂತಿದೆ. ಎಲ್ಲರೂ ಅವಮಾನದಿಂದ ಸಾಯಬೇಕು ಎಂದು ಪ್ರತಿಪಾದಿಸಿತ್ತು. ಈ ಲೇಖನದ ಕೊನೆಯೂ ಇದರ ಮೂಲ Threemad.com ಎಂದು ಹೇಳಿ ಕೈ ತೊಳೆದುಕೊಳ್ಳಲಾಗಿತ್ತು. Threemad.com ವೀಕ್ಷಿಸಿದಾಗ, ಅದೇ ವರದಿ ಸ್ವಲ್ಪ ಭಿನ್ನ ಶೀರ್ಷಿಕೆಯೊಂದಿಗೆ ಪ್ರಕಟವಾಗಿತ್ತು. ಆದರೆ ಆ ವೆಬ್‌ಸೈಟ್ ಕೂಡಾ ಫವಾದ್ ಹೇಳಿಕೆಯನ್ನು ಕೇಳಿರಲಿಲ್ಲ. ನೋಡಿರಲಿಲ್ಲ ಅಥವಾ ದಾಖಲಿಸಿಕೊಂಡಿರಲಿಲ್ಲ. ನಟ ಹೀಗೆ ಹೇಳಿದ್ದಾರೆ ಎನ್ನಲಾಗಿದೆ ಎಂದು ಲೇಖನ ವಿವರಿಸಿತ್ತು. ಅದರ ಧ್ವನಿ, ಲೇಖನದ ಮೂಲ ದೈನಿಕ್ ಭಾರತ್ ಎಂಬ ಅರ್ಥದಲ್ಲಿತ್ತು. ಆದರೆ ಈ ಲೇಖನವನ್ನು ಆಗಲೇ 3.09 ಲಕ್ಷ ಮಂದಿ ಫೇಸ್‌ಬುಕ್‌ನಲ್ಲಿ ಷೇರ್ ಮಾಡಿದ್ದರು.


ದೈನಿಕ್ ಭಾರತ್‌ನ ಫೇಸ್‌ಬುಕ್ ಪೇಜ್‌ನಲ್ಲಿ ನೊಡಿದಾಗ, ಅದರ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತದೆ. ಈ ವೆಬ್‌ಸೈಟ್ ಅಕ್ಟೋಬರ್ 2ರಂದು ಓದುಗರ ಸಮೀಕ್ಷೆ ನಡೆಸಿ, ಮಹಾತ್ಮ ಅಥವಾ ನಾಥೂರಾಂ ಗೋಡ್ಸೆ ಅಥವಾ ಗಾಂಧೀಜಿ ಯಾರು ವಾಸ್ತವ ಎಂದು ತಕ್ಷಣ ಮತ ಚಲಾಯಿಸಿ ವಿಶ್ವಕ್ಕೆ ತಿಳಿಸಿ ಎಂದು ಈ ವೆಬ್‌ಸೈಟ್ ಹೇಳಿತ್ತು.
ದೈನಿಕ್ ಭಾರತ್ ವರದಿಯ ಶೀರ್ಷಿಕೆ, "ಫವಾದ್ ಖಾನ್ ನೆ ಭಾರತ್ ಪರ್ ಹಿ ಅಬ್ ಹಮ್ಲಾ ಬೋಲ್ ದಿಯಾ, ಭಾರತೀಯೋಂ ಕೋ ಬತಾಯ "ಚೋಟೆ ಲೋಗ್" ಎಂದಾಗಿತ್ತು.


ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಟಿ.ಪಿ.ಅಗರ್‌ವಾಲ್ ಅವರು, "ಫವಾದ್ ಖಾನ್ ಭಾರತ ಬಿಟ್ಟ ಬಳಿಕ ಭಾರತವನ್ನೇ ಟೀಕಿಸಿದ್ದಾರೆ. ಎಲ್ಲಿ ಅವರು ಕೆಲಸ ಮಾಡಿ ಹಣ ಗಳಿಸಿದ್ದಾರೋ ಆ ದೇಶವನ್ನೇ ಟೀಕಿಸಿದ್ದಾರೆ" ಎಂದು ಹೇಳಿಕೆ ನೀಡಿದ್ದಾಗಿ ಹಿಂದಿ ವರದಿಯಲ್ಲಿ ವಿವರಿಸಲಾಗಿತ್ತು. ಫವಾದ್, ಪಾಕಿಸ್ತಾನಕ್ಕೆ ತೆರಳುವ ಮುನ್ನ ಸಿಟ್ಟಿನಿಂದ ಹೀಗೆ ಹೇಳಿದ್ದಾರೆ ಎಂದು ಅಗರ್‌ವಾಲ್ ಹೇಳಿಕೆಯನ್ನು ಉಲ್ಲೇಖಿಸಲಾಗಿತ್ತು.


"ಬಾಲಿವುಡ್ ಕಿಸಿ ಕೆ ಬಾಪ್ ಕಿ ಹೈ ಕ್ಯಾ ಜೋ ಹಮ್ ವಹನ್ ಕಾಮ್ ನಹಿ ಕರೇಂಗೆ, ಬಾಲಿವುಡ್ ಹಮಾರೆ ಲೋಗೋಂ ಕೆ ವಜಹ್ ಸಸೆ ಹಿ ಹೈ. ಜೋ ಲೋಗ್ ಹಮಾರಾ ವಿರೋಧ್ ಕರ್ ರಹೆ ಹೈ. ವಹ್ ಹೋತೆ ಕೌನ್ ಹೈ ವಿರೋಧ್ ಕರ್ನೆ ವಾಲೆ ಇನ್ ಚೋಟಿ ಲೋಗೋಂ ಕಿ ವಿರೋಧಿ ಕಿ ಹ್ಯೂಮ್ ಕ್ಯಾ ಪರ್ವಾಹ್"
ಆದ್ದರಿಂದ ಅವರ ಹೇಳಿಕೆ ವೆಬ್‌ಸೈಟ್‌ಗೆ ತಲುಪುವುವಾಗ ಸಂಪೂರ್ಣ ಭಿನ್ನ ಸ್ವರೂಪ ಪಡೆದಿತ್ತು. ಆದರೆ...


ಅಂತಿಮವಾಗಿ ಇದಕ್ಕೆ ರಕ್ತ, ಮಾಂಸ ಸೇರಿಸಿದ ವ್ಯಕ್ತಿ (ಟಿ.ಪಿ.ಅಗರ್‌ವಾಲ್)ಗೆ ನಾನು ಕರೆ ಮಾಡಿ, ಭಾರತೀಯರ ಖಂಡನೆಗೆ ಕಾರಣವಾದ ಹೇಳಿಕೆ ದೃಢಪಡಿಸುವಂತೆ ಕೇಳಿದೆ. ಆದರೆ ಅದನ್ನು ನಯವಾಗಿ ತಿರಸ್ಕರಿಸಿದ ಅವರು, "ಮೈನೆ ಮೀಟಿಂಗ್ ಮೇ ನುಸಾ ಥಾ ಕೋಯಿ ಬತಾ ರಹಾ ಥಾ" ಎಂದರು. ಮತ್ತೆ ನಾನು, "ಇದನ್ನು ಯಾರು ಹೇಳಿದರು" ಎಂದು ಕೇಳಿದಾಗ ಅಗರ್‌ವಾಲ್, ಹಾಗೆ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು. "ನಹಿ ಮುಜೆ ಯಾದ್ ನಹಿ ಹೈ"
ಇಲ್ಲಿಗೆ ಈ ಕಥೆ ಮುಗಿಯಿತು ಎಂದು ಬಹುತೇಕ ಮಂದಿ ಅಂದುಕೊಂಡಿರುತ್ತೀರಿ.


ವಾಸ್ತವಾಂಶವೆಂದರೆ, ಭಾರತದಲ್ಲಿ ಪಾಕಿಸ್ತಾನಿ ಕಲಾವಿದರನ್ನು ನಿಷೇಧಿಸುವ ಬಗ್ಗೆ ನೀವು ಯಾವ ಭಾವನೆ ಹೊಂದಿದ್ದರೂ ಪರವಾಗಿಲ್ಲ. ಆದರೆ ಕಾಲ್ಪನಿಕ ಹೇಳಿಕೆಯೊಂದರ ಆಧಾರದಲ್ಲಿ, ಯಾರನ್ನೂ ತೇಜೋವಧೆ ಮಾಡುವುದು ಸಲ್ಲದು. ಸಾಮಾಜಿಕ ಜಾಲತಾಣಗಳ ಮೂಲಕ ಅದನ್ನು ತಿರುಚಿ ಹಬ್ಬಿಸಿ, ಆತನನ್ನು ನಿಂದಿಸುವುದು, ಅವಮಾನಿಸುವುದು ಸಲ್ಲದು. ಇದು ಅವರ ಬಗ್ಗೆ ಮತ್ತಷ್ಟು ದ್ವೇಷಭಾವನೆಯನ್ನು ಹರಡುತ್ತದೆ. ಇದು ಅನೈತಿಕ; ಅಪರಾಧ ಹಾಗೂ ಶೋಚನೀಯ. ನಿಮ್ಮ ರಾಜಕೀಯಕ್ಕೆ ಅದು ಸೂಕ್ತವಾಗುತ್ತದೆ ಎಂಬ ಕಾರಣಕ್ಕೆ ದಯವಿಟ್ಟು ಇಂಥ ತಿರುಚಿದ ಅವತರಣಿಕೆಯನ್ನು ಷೇರ್ ಮಾಡಬೇಡಿ.


ಇಂಟರ್‌ನೆಟ್ ಪತ್ರಿಕೋದ್ಯಮದ ಯುಗದಲ್ಲಿ, ಸಾಮಾಜಿಕ ಜಾಲತಾಣ ನಿಮಗೆ ಪ್ರಬಲ ಶಕ್ತಿಯನ್ನು ನೀಡುತ್ತದೆ. ನೀವು ಷೇರ್ ಬಟನ್ ಕ್ಲಿಕ್ ಮಾಡುವ ಮುನ್ನ, ಅಂಕಲ್ ಬೆನ್ ಹೇಳಿರುವುದನ್ನು ನೆನಪಿಸಿಕೊಳ್ಳಿ: "ಅಧಿಕ ಶಕ್ತಿಯು ಜವಾಬ್ದಾರಿಯನ್ನೂ ತರುತ್ತದೆ"

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News