ಸರ್ಜಿಕಲ್ ಸ್ಟ್ರೈಕ್ ರಾಜಕೀಯ ದುರದ್ದೇಶದ್ದು: ಕ್ಯಾ.ಅಮರೇಂದ್ರ ಸಿಂಗ್
ಜಲಂಧರ್, ಅ.4: ಪಂಜಾಬ್ ಪ್ರದೇಶ ಕಾಂಗ್ರೆಸ್ ಕಮಿಟಿ ಮುಖ್ಯಸ್ಥ ಕ್ಯಾಪ್ಟನ್ ಅಮರೇಂದ್ರ ಸಿಂಗ್ ಸರ್ಜಿಕಲ್ ಸ್ಟ್ರೈಕ್‌ನ್ನು ಎನ್‌ಡಿಎ ಸರಕಾರದ ರಾಜಕೀಯ ತಂತ್ರ ಎಂದು ಬಣ್ಣಿಸಿದ್ದಾರೆಂದು ವರದಿಯಾಗಿದೆ. ಉತ್ತರಪ್ರದೇಶದ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಪಂಜಾಬ್‌ಗೆ ತಾಗಿಕೊಂಡಿರುವ ಸರಹದ್ದುಗಳಲ್ಲಿ ಅನಗ್ಯತ ಯುದ್ಧ ಸ್ಥಿತಿಯನ್ನು ಮತ್ತು ಸಂಕಷ್ಟವನ್ನು ಹುಟ್ಟು ಹಾಕಿದೆ. ಸರ್ಜಿಕಲ್ ಸ್ಟ್ರೈಕ್‌ಗೆ ರಾಜಕೀಯ ಬಣ್ಣ ಕೊಟ್ಟು ಪಂಜಾಬ್‌ಅಕಾಲಿ-ಬಿಜೆಪಿ ಸರಕಾರ ರಾಜಕೀಯ ಮಾಡುತ್ತಿದೆ. ಜನರನ್ನು ಭೀತಿಯ ವಾತಾವರಣದಲ್ಲಿಟ್ಟು ಉತ್ತರಪ್ರದೇಶದ ಚುನಾವಣೆಯಲ್ಲಿ ಲಾಭ ಪಡೆಯಲು ಹವಣಿಸುತ್ತಿದೆ ಎಂದು ಕ್ಯಾಪ್ಟನ್ ಅಮರೇಂದ್ರ ಸಿಂಗ್ ಹೇಳಿದ್ದಾರೆಂದು ವರದಿಯಾಗಿದೆ.
ಬುಡ್‌ಲಾಡ ಎಂಬಲ್ಲಿಗೆ ಜನರನ್ನು ಭೇಟಿಯಾಗಲು ಬಂದಿದ್ದ ಅಮರೇಂದ್ರ ಸಿಂಗ್ ಪಂಜಾಬ್ ಗಡಿಯಲ್ಲಿ ಯುದ್ಧ ಭೀತಿಯಿಂದ ಖಾಲಿ ಮಾಡಿಸಲಾದ ಗ್ರಾಮೀಣರನ್ನು ಮನೆಗೆ ಹೋಗಿ ಎಂದು ಆಗ್ರಹಿಸಿದ್ದಾರೆ.
ಯುದ್ಧ ನಡೆಯುವ ದೂರದ ಸಾಧ್ಯತೆಯೂ ಇಲ್ಲದಿರುವಾಗ ಯಾಕೆ ಬಡ ರೈತರ ಮನೆಗಳನ್ನು ಖಾಲಿ ಮಾಡಲಾಗಿದೆ. ಅದೂ ಕೂಡಾ ಅವರ ಫಸಲು ಕಟಾವ್ ನಡೆಸುವ ಸಮಯದಲ್ಲಿ ಎಂದು ಅವರು ಪ್ರಶ್ನಿಸಿದ್ದಾರೆ. ಮನೆಗಳನ್ನು ಖಾಲಿ ಮಾಡುವ ಆದೇಶ ದೇಶದ ರಕ್ಷಣಾ ಸಚಿವಾಲಯದಿಂದ ಬಂದಿಲ್ಲ. ಬದಲಾಗಿ ಗೃಹ ಸಚಿವಾಲಯದಿಂದ ಬಂದಿದೆ ಎಂದು ಅವರು ಹೇಳಿದ್ದಾರೆ. ಅಮರೇಂದ್ರ ಸಿಂಗ್ ಜೊತೆ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಕುಲವಂತ್ ರಾಯ್ ಸಿಂಘಾಲ್, ಜಿಲ್ಲಾ ಮುಖ್ಯಸ್ಥ ಬಿಕ್ರಮ್‌ಜಿತ್ ಸಿಂಗ್ ಮೋಪರ್, ಮನ್‌ಜಿತ್ ಸಿಂಗ್ ಝಲ್‌ಬೂಟಿ, ಕರಮ್ ಸಿಂಗ್ ಚೌಹಾನ್ ಮುಂತಾದವರು ಇದ್ದರೆಂದು ವರದಿ ತಿಳಿಸಿದೆ.