×
Ad

ದಿಲ್ಲಿ ವಿಶ್ವದಲ್ಲೇ ಅತೀ ಹೆಚ್ಚು ವಾಯುಮಾಲಿನ್ಯ ಮಹಾನಗರ: ಡಬ್ಲುಎಚ್‌ಒ

Update: 2016-10-04 22:42 IST

ಹೊಸದಿಲ್ಲಿ, ಅ.4: ದಿಲ್ಲಿಯು ಪ್ರಪಂಚದಲ್ಲೇ ಅತಿ ಹೆಚ್ಚು ವಾಯು ಮಾಲಿನ್ಯವಿರುವ ನಗರವೆಂಬ ಕುಖ್ಯಾತಿ ಮುಂದುವರಿದಿದೆ. ಇದನ್ನು ವಿಶ್ವ ಆರೋಗ್ಯ ಸಂಘಟನೆಯು(ಡಬ್ಲುಎಚ್‌ಒ) ಇತ್ತೀಚೆಗೆ ಖಚಿತಪಡಿಸಿದೆ.

2016ರ ಸೆ.22ರಿಂದ 28ರ ವರೆಗಿನ 7 ದಿನಗಳಲ್ಲಿ ವಾಯು ಗುಣಮಟ್ಟ ಸೆನ್ಸರ್‌ನಲ್ಲಿ ಅಳೆದಾಗ ಸರಾಸರಿ ದಿನದ ಸುರಕ್ಷಿತ ಮಟ್ಟಕ್ಕಿಂತ ಸುಮಾರು 4 ಪಟ್ಟು ಹೆಚ್ಚು ಮಾಲಿನ್ಯಕಾರಕ ಕಣಗಳೂ(ಪಿಎಂ 2.5) ಪತ್ತೆಯಾಗಿದ್ದವು.
ಸುದೀರ್ಘ ಸಮಯದ ತೆರೆದಿಡುವಿಕೆಗೆ, ಇವುಗಳ 24 ತಾಸುಗಳ ಮಟ್ಟವು ಡಬ್ಲುಎಚ್‌ಒ ಆರೋಗ್ಯ ಮಾನದಂಡಕ್ಕಿಂತ ಸುಮಾರು 11 ಪಟ್ಟುಗಳಷ್ಟಿವೆ.
ಮಳೆಗಾಲದಲ್ಲಿ ಮಳೆ ಹಾಗೂ ಗಾಳಿ ಮಾಲಿನ್ಯಕಾರಕಗಳ ಪರಿಣಾಮವನ್ನು ಕಡಿಮೆ ಮಾಡಿದ್ದುದರಿಂದ ದಿಲ್ಲಿಯ ಗಾಳಿ ಸಾಪೇಕ್ಷವಾಗಿ ಹೆಚ್ಚು ಶುದ್ಧವಿತ್ತು. ಆದರೆ, ಋತು ಬದಲಾವಣೆಯಾದಂತೆ ರಾಷ್ಟ್ರ ರಾಜಧಾನಿ ವಲಯದಲ್ಲಿರುವ 5ರಲ್ಲಿ 3 ಸೆನ್ಸರ್‌ಗಳು ಸೆ.22ರಿಂದ 28ರ ವರೆಗೆ ‘ಕೆಟ್ಟ’ ಹಾಗೂ ‘ಅತಿ ಕೆಟ್ಟ’ ವಾಯು ಗುಣಮಟ್ಟವನ್ನು ದಾಖಲಿಸಿವೆ. ಅಂದರೆ, ಅದರ ದೀರ್ಘ ಕಾಲದ ಉಸಿರಾಟದಿಂದ ಆರೋಗ್ಯವಂತರ ಮೇಲೆ ದುಷ್ಪರಿಣಾಮವಾಗಬಹುದು ಹಾಗೂ ಕಾಯಿಲೆಯಿರುವವರ ಮೇಲೆ ‘ಗಂಭೀರ ಪರಿಣಾಮ’ ಬೀರಬಹುದೆಂದು ಇಂಡಿಯಾ ಸ್ಪೆಂಡ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News