×
Ad

ಮುಂದಿನ ವರ್ಷ ಪೋಪ್ ಭಾರತಕ್ಕೆ?

Update: 2016-10-04 22:44 IST

ಕೊಚ್ಚಿ, ಅ.4: 2017ರಲ್ಲಿ ಭಾರತ ಸಂದರ್ಶಿಸುವ ವಿಷಯ ತನ್ನ ಪರಿಗಣನೆಯಲ್ಲಿದೆ ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆಂದು ವರದಿಯಾಗಿದೆ. ಅಝರ್‌ಬೈಜಾನ್ ಸಂದರ್ಶಿಸಿ ಮರಳುವ ಹಾದಿಯಲ್ಲಿ ವಿಮಾನದಲ್ಲಿ ಪತ್ರಕರ್ತರೊಂದಿಗೆ ಮಾತಾಡುತ್ತಾ ಭಾರತ ಮತ್ತು ಬಾಂಗ್ಲಾದೇಶ ಸಂದರ್ಶನದ ಕುರಿತು ಸೂಚನೆ ನೀಡಿದ್ದಾರೆ.

ಮುಂದಿನ ವರ್ಷ ಪೋರ್ಚ್‌ಗಲ್‌ಗೆ ಭೇಟಿ ನೀಡುವುದು ದೃಢವಾಗಿದೆ. ಆಫ್ರಿಕನ್ ಸಂದರ್ಶನವನ್ನು ಆಲೋಚಿಸುತ್ತಿದ್ದೇನೆ ಎಂದು ಆವರು ಹೇಳಿದ್ದಾರೆ.
ವ್ಯಾಟಿಕನ್ ಮುಂದಿನ ವರ್ಷದ ಪೋಪ್‌ರ ಕಾರ್ಯಕ್ರಮವನ್ನು ಸುಮಾರಾಗಿ ತಯಾರಿಸಿಟ್ಟಿದೆ. ಇದರಲ್ಲಿ ಭಾರತ ಸೇರಿರಲಿಲ್ಲ. ಆದರೂ ಪೋಪ್ ಬಯಸುವುದಾದರೆ ಭಾರತ ಸಂದರ್ಶನವನ್ನು ಕೂಡಾ ಸಂದರ್ಶನದ ದೇಶಗಳ ಪಟ್ಟಿಗೆ ವ್ಯಾಟಿಕನ್ ಸೇರಿಸಲಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News