ಡೆಸಿಬಲ್ ಮೀಟರ್ ಖರೀದಿ ವಿಳಂಬ: ಮಹಾರಾಷ್ಟ್ರ ಸರಕಾರಕ್ಕೆ ಹೈಕೋರ್ಟ್ ತರಾಟೆ
ಮುಂಬೈ, ಅ.4: ಮಹಾರಾಷ್ಟ್ರದಲ್ಲಿ ಡೆಸಿಬಲ್ ಮೀಟರ್‌ಗಳ ಖರೀದಿಯಲ್ಲಿ ವಿಳಂಬವನ್ನು ಬಾಂಬೆ ಹೈಕೋರ್ಟ್ ಇಂದು ಕಠಿಣವಾಗಿ ಆಕ್ಷೇಪಿಸಿದೆ. ನವರಾತ್ರಿ ಹಾಗೂ ದೀಪಾವಳಿ ಹಬ್ಬಗಳ ವೇಳೆ ಗದ್ದಲದ ಮಟ್ಟವನ್ನು ತಡೆಯದಂತೆ ರಾಜ್ಯಸರಕಾರವು ಉದ್ದೇಶಪೂರ್ವಕವಾಗಿ ಈ ಪ್ರಕ್ರಿಯೆಯನ್ನು ವಿಳಂಬಿಸುತ್ತಿದೆಯೆಂದು ಅದು ಹೇಳಿದೆ.
ನ್ಯಾಯಾಲಯದ ಆದೇಶ ಉಲ್ಲಂಘಿಸಿದುದಕ್ಕಾಗಿ ತಾನು ಗೃಹ ಖಾತೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಪಿ. ಬಕ್ಷಿ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುತ್ತೇನೆಂದು ಎಚ್ಚರಿಕೆ ನೀಡಿದ ಹೈಕೋರ್ಟ್, ಮುಂದಿನ ವಿಚಾರಣೆಯ ದಿನಾಂಕವಾದ ಅ.17ರಂದು ತನ್ನ ಮುಂದೆ ಹಾಜರಾಗುವಂತೆ ಅವರಿಗೆ ಆದೇಶ ನೀಡಿದೆ.
ಶಬ್ದ ಮಾಲಿನ್ಯ ನಿಯಮಗಳ ಅನುಸಾರ, 1,843 ಡೆಸಿ ಬಲ್ ಮೀಟರ್‌ಗಳನ್ನು ಖರೀದಿಸಿ, ಎಲ್ಲ ಪೊಲೀಸ್ ಠಾಣೆ ಗಳಿಗೆ ಅವುಗಳನ್ನು ಒದಗಿಸುವಂತೆ ರಾಜ್ಯದ ಗೃಹ ಇಲಾಖೆಗೆ ಬಾಂಬೆ ಹೈಕೋರ್ಟ್ ಜನವರಿಯಲ್ಲಿ ನಿರ್ದೇಶನ ನೀಡಿತ್ತು.
ಎರಡು ತಿಂಗಳೊಳಗಾಗಿ ಅವುಗಳನ್ನು ಖರೀದಿಸುವ ಭರವಸೆಯನ್ನು ನ್ಯಾಯಾಲಯಕ್ಕೆ ರಾಜ್ಯ ಸರಕಾರವು ನೀಡಿತ್ತು.