ಸತಾರದ ಯುವತಿಯಿಂದ ಕಿಲಿಮಾಂಜರೊ ಆರೋಹಣ
Update: 2016-10-04 22:47 IST
ಮುಂಬೈ, ಅ.4: ಸತಾರದ ಯುವತಿಯೊಬ್ಬಳು ಆಫ್ರಿಕ ಉಪಖಂಡದ ಅತ್ಯುನ್ನತ ಕಿಲಿಮಾಂಜರೊ ಶಿಖರವನ್ನು ಸೆ.29ರಂದು ಯಶಸ್ವಿಯಾಗಿ ಏರಿದ್ದಾರೆ. ಎರಡು ವರ್ಷಗಳ ಹಿಂದೆ ಪ್ರಪಂಚದ ಅತ್ಯುನ್ನತ ಶಿಖರ ವೌಂಟ್ ಎವರೆಸ್ಟನ್ನು ಏರಿದ್ದ 23ರ ಹರೆಯದ ಪ್ರಿಯಾಂಕಾ ಮೋಹಿತೆ ಎಂಬ ಯುವತಿ ಆಫ್ರಿಕ ಉಪಖಂಡದ ಅತ್ಯುನ್ನತ ಶಿಖರವನ್ನು ಆರೋಹಿಸಲು ನಿರ್ಧರಿಸಿದ್ದರು.
ಟ್ರೆಕಿಂಗ್‌ನಲ್ಲಿ ಆಸಕ್ತಿಯಿರುವ ಪ್ರಿಯಾಂಕಾ, ಕೆಲವು ವರ್ಷಗಳಿಂದ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿರುವ ಸ್ಥಳೀಯ ಕೋಟೆಗಳನ್ನೇರಿ ಅಭ್ಯಾಸ ನಡೆಸುತ್ತಿದ್ದರು. ಸಾಮಾನ್ಯ ಕುಟುಂಬದ ಆಕೆಗೆ ಅಭ್ಯಾಸ ಮತ್ತು ಪ್ರಯಾಣ ವೆಚ್ಚಕ್ಕಾಗಿ ಹಲವು ಖಾಸಗಿ ಗುಂಪುಗಳು ಆರ್ಥಿಕ ಸಹಾಯ ಒದಗಿಸಿವೆ.