ಭಾರತದ ಮಹಿಳಾ ತಂಡ ಆಯ್ಕೆ, ವಂದನಾ ನಾಯಕಿ

Update: 2016-10-04 18:23 GMT

 ಹೊಸದಿಲ್ಲಿ, ಅ.4: ಮುಂಬರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿಗೆ 18 ಸದಸ್ಯೆಯರನ್ನು ಒಳಗೊಂಡ ಭಾರತೀಯ ಮಹಿಳಾ ತಂಡವನ್ನು ಆಯ್ಕೆ ಮಾಡಲಾಗಿದ್ದು, ಫಾರ್ವರ್ಡ್ ಆಟಗಾರ್ತಿ ವಂದನಾ ಕಟಾರಿಯಾ ನಾಯಕಿಯಾಗಿ ನೇಮಕಗೊಂಡಿದ್ದಾರೆ. ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಅಕ್ಟೋಬರ್ 29 ರಿಂದ ಸಿಂಗಾಪುರದಲ್ಲಿ ನಡೆಯಲಿದೆ.

ಡಿಫೆಂಡರ್ ಸುನೀತಾ ಲಾಕ್ರಾ ಉಪ ನಾಯಕಿಯಾಗಿ ನೇಮಕಗೊಂಡಿದ್ದು, ರಿಯೋ ಒಲಿಂಪಿಕ್ಸ್‌ನಲ್ಲಿ ತಂಡವನ್ನು ನಾಯಕಿಯಾಗಿ ಮುನ್ನಡೆಸಿದ್ದ ಸುಶೀಲಾ ಚಾನು ತಂಡದಿಂದ ಕೈಬಿಡಲಾಗಿದೆ.

ಭಾರತೀಯ ತಂಡದಲ್ಲಿ ಇಬ್ಬರು ಗೋಲ್‌ಕೀಪರ್‌ಗಳು, ಐವರು ಫಾರ್ವರ್ಡ್‌ಗಳು, ಆರು ಮಿಡ್ ಫೀಲ್ಡರ್‌ಗಳು ಹಾಗೂ ಐವರು ಡಿಫೆಂಡರ್‌ಗಳಿದ್ದಾರೆ.

ಟೂರ್ನಮೆಂಟ್‌ನಲ್ಲಿ ಭಾರತವಲ್ಲದೆ ಹಾಲಿ ಚಾಂಪಿಯನ್ ಜಪಾನ್, ಚೀನಾ, ಕೊರಿಯಾ ಹಾಗೂ ಮಲೇಷ್ಯಾ ತಂಡಗಳಿವೆ. ಒಲಿಂಪಿಕ್ಸ್‌ನಲ್ಲಿ ಆಡಿರುವ ನಮ್ಮ ತಂಡದ ಸದಸ್ಯೆಯರು ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ. ಮುಂಬರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. ನಮ್ಮ ತಂಡ ಬೋಪಾಲ್‌ನ ಸಾಯ್ ತರಬೇತಿ ಕೇಂದ್ರದಲ್ಲಿ ತರಬೇತಿಯನ್ನು ನಡೆಸಿದೆ ಎಂದು ವಂದನಾ ಹೇಳಿದ್ದಾರೆ.

ಭಾರತದ ಮಹಿಳಾ ಹಾಕಿ ತಂಡ:

ಗೋಲ್‌ಕೀಪರ್‌ಗಳು: ಸವಿತಾ ಹಾಗೂ ರಜನಿ.

ಡಿಫೆಂಡರ್‌ಗಳು: ದೀಪ್ ಗ್ರೆಸ್ ಎಕ್ಕಾ, ರೇಣುಕಾ ಯಾದವ್, ಸುನೀತಾ ಲಾಕ್ರ, ಎಚ್‌ಎಲ್ ರಾವುಟ್ ಫೆಲಿ ಹಾಗೂ ನಮಿತಾ ಟೊಪ್ಪೊ.

ಮಿಡ್ ಫೀಲ್ಡರ್‌ಗಳು: ನಿಕ್ಕಿ ಪ್ರಧಾನ್, ನವಜೋತ್ ಕೌರ್, ಮೋನಿಕಾ, ರಾಣಿ, ದೀಪಿಕಾ ಹಾಗೂ ನವ್‌ದೀಪ್ ಕೌರ್.

ಫಾರ್ವರ್ಡ್‌ಗಳು: ಪೂನಮ್ ರಾಣಿ, ಅನುರಾಧಾ ದೇವಿ, ವಂದನಾ ಕಟಾರಿಯಾ, ಪ್ರೀತಿ ದುಬೆ ಹಾಗೂ ಪೂನಂ ಬಾರ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News