×
Ad

ಕೇಜ್ರಿವಾಲ್‌ಗೆ ಮಸಿ ಎರಚಿದ ಮಹಿಳೆ

Update: 2016-10-05 22:46 IST

 ಹೊಸದಿಲ್ಲಿ, ಅ.5: ದಿಲ್ಲಿಯ ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್‌ರ ಮೇಲೆ ಶಾಯಿ (ಮಸಿ) ಎರಚಿದ ಘಟನೆ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಅವರು ರಾಜಸ್ಥಾನದ ಬಿಕಾನೇರ್‌ನಲ್ಲಿ ಛತ್ರಸಾಲ್ ಸ್ಟೇಡಿಯಂನಲ್ಲಿ ಆಡ್-ಇವನ್ ನಿಯಮಗಳ ಸಫಲತೆಯ ಕುರಿತು ಭಾಷಣ ಮಾಡುತ್ತಿದ್ದರು. ಈ ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಭಾಷಣದ ವೇಳೆ ಶಾಯಿ ಎರಚಿದವರಿಗೆ ದೇವನು ಒಳಿತು ಮಾಡಲಿ ಎಂದು ಕೇಜ್ರಿವಾಲ್ ಪ್ರಾರ್ಥಿಸಿದ್ದಾರೆ.

ಇದಕ್ಕಿಂತ ಮೊದಲು ಆಟೊ ಚಾಲಕ ಕಪಾಳ ಮೋಕ್ಷ ಮಾಡಿದ್ದ

ಕೇಜ್ರಿವಾಲ್ ಭಾಷಣ ಮಾಡುತ್ತಿದ್ದಾಗ ಮಹಿಳೆಯೊಬ್ಬರು ಇಲ್ಲಿ ಶಾಯಿ ಎರಚಿದ್ದಾಳೆ. ಈ ಮಹಿಳೆಯ ಸಿಎನ್‌ಜಿ ಹಗರಣದ ಆರೋಪವನ್ನು ಹೊರಿಸಿ ಈ ಕೃತ್ಯವೆಸಗಿದ್ದಾಳೆ. ಕೇಜ್ರಿವಾಲ್‌ರನ್ನು ಅಪಮಾನಿಸುವ ಘಟನೆ ಇದಕ್ಕೂ ಮೊದಲು ನಡೆದಿವೆ. 2014ರಲ್ಲಿ ಚುನಾವಣಾ ಪ್ರಚಾರದ ವೇಳೆ ಆಟೊ ಚಾಲಕನೊಬ್ಬ ಕಪಾಳ ಮೋಕ್ಷವನ್ನು ಮಾಡಿದ್ದ. ದಿಲ್ಲಿಯ ಸುಲ್ತಾನ್‌ಪುರಿಯಲ್ಲಿ ರ್ಯಾಲಿ ವೇಳೆ ಈ ಘಟನೆ ನಡೆದಿತ್ತು. ಲೋಕಸಭಾ ಚುನಾವಣೆಯ ವೇಳೆಯೂ ಶಾಯಿ ಎರಚಲಾಗಿತ್ತು
ಲೋಕಸಭಾ ಚುನಾವಣೆಯ ವೇಳೆ ವಾರಣಾಸಿಯ ರ್ಯಾಲಿಯಲ್ಲಿ ಕೇಜ್ರಿವಾಲ್ ಮೇಲೆ ಶಾಯಿ ಎರಚಲಾಗಿತ್ತು. ದಿಲ್ಲಿಯ ವಿಧಾನಸಭಾ ಚುನಾವಣಾ ಕುರಿತು ಪತ್ರಿಕಾಗೋಷ್ಠಿ ನಡೆಸುತ್ತಿದ್ದಾಗ ಬಿಜೆಪಿ ಕಾರ್ಯಕರ್ತನೆನ್ನಲಾದ ಯುವಕನೊಬ್ಬ ಅವರ ಮೇಲೆ ಶಾಯಿ ಎರಚಿದ್ದ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News