×
Ad

ಭಾರತವನ್ನು ಏಕಾಂಗಿಯಾಗಿಸಬೇಕು: ಎಹ್ಸಾನ್ ಮಾನಿ ಆಗ್ರಹ

Update: 2016-10-05 23:59 IST

ಕರಾಚಿ, ಅ.5: ಪಾಕಿಸ್ತಾನದ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿರುವ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್‌ರನ್ನು ಟೀಕಿಸಿರುವ ಐಸಿಸಿ ಮಾಜಿ ಅಧ್ಯಕ್ಷ ಎಹ್ಸಾನ್ ಮಾನಿ, ಭಾರತದ ವಿರುದ್ಧ ಐಸಿಸಿ ಟೂರ್ನಿಗಳಲ್ಲಿ ಆಡದೇ ಇರುವ ಮೂಲಕ ಏಕಾಂಗಿಯಾಗಿಸಬೇಕು ಎಂದು ಪಿಸಿಬಿಯನ್ನು ಒತ್ತಾಯಿಸಿದ್ದಾರೆ.

‘‘ಮುಂದಿನ ವಾರ ಕೇಪ್‌ಟೌನ್‌ನಲ್ಲಿ ನಡೆಯಲಿರುವ ಐಸಿಸಿ ಕಾರ್ಯಕಾರಿಣಿ ಮಂಡಳಿ ಸಭೆಯಲ್ಲಿ ಪಾಕಿಸ್ತಾನದ ಕ್ರಿಕೆಟ್ ಅಧಿಕಾರಿಗಳು ಪ್ರತಿರೋಧ ತೋರಬೇಕು. ಬಿಸಿಸಿಐ ಅಧ್ಯಕ್ಷರ ಅಪ್ರಬುದ್ಧ ಹಾಗೂ ಪ್ರಚೋದನಕಾರಿ ಹೇಳಿಕೆ ಬಗ್ಗೆ ಐಸಿಸಿ ಸಭೆಯಲ್ಲಿ ಪಾಕಿಸ್ತಾನ ಪರಿಣಾಮಕಾರಿಯಾಗಿ ವಾದ ಮಂಡಿಸಬೇಕು’’ ಎಂದು ಮಾನಿ ಆಗ್ರಹಿಸಿದ್ದಾರೆ.

‘‘ಅನುರಾಗ್ ಠಾಕೂರ್ ಓರ್ವ ರಾಜಕಾರಣಿ, ಆಡಳಿತ ಪಕ್ಷದ ಸಂಸತ್ ಸದಸ್ಯ. ಪಾಕಿಸ್ತಾನ ಹಾಗೂ ಇತರ ಕ್ರಿಕೆಟ್ ವಿಷಯಕ್ಕೆ ಸಂಬಂಧಿಸಿ ಯಾವ ಆಧಾರದಲ್ಲಿ ಹೇಳಿಕೆ ನೀಡಿದ್ದೀರಿ ಎಂದು ಐಸಿಸಿ ಅವರನ್ನು ಪ್ರಶ್ನಿಸಬೇಕೆಂದು ಮಾನಿ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News