×
Ad

ಹಾಸ್ಟೆಲ್ ಸಮಸ್ಯೆ ನಿವಾರಿಸಿ

Update: 2016-10-06 00:20 IST

ಮಾನ್ಯರೆ,
  ಬೆಂಗಳೂರು ವಿಶ್ವವಿದ್ಯಾನಿಲಯದ ಬಹುತೇಕ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯವಿಲ್ಲದೆ ಹಲವಾರು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ ಸರಿಯಾಗಿ ಯಾವುದೇ ರೀತಿಯ ಸಮರ್ಪಕ ಮಾಹಿತಿಯನ್ನೂ ನೀಡಿಲ್ಲ. ಅಲ್ಲದೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೆಲವೇ ದಿನಗಳ ಅವಕಾಶವನ್ನು ನೀಡಿದ್ದರಿಂದ ಅದಕ್ಕೆ ಸಂಬಂದಿಸಿದಂತೆ ಸರಿಯಾದ ಮಾಹಿತಿಯನ್ನು ತಿಳಿಯುವಷ್ಟರಲ್ಲಿ ಅರ್ಜಿಸಲ್ಲಿಸಲು ಕಾಲ ಮುಗಿದು ಹೋಗಿತ್ತು. ಬಹುತೇಕ ಗ್ರಾಮೀಣ ಭಾಗದವರೇ ವಿಶ್ವವಿದ್ಯಾನಿಲಯದಲ್ಲಿ ಅಭ್ಯಾಸ ಮಾಡಲು ಬರುವುದರಿಂದ ಅವರಿಗೆ ಸರಿಯಾದ ವಸತಿ ಹಾಗೂ ಆಹಾರ ಸೌಲಭ್ಯವಿಲ್ಲದೆ ಸ್ನಾತಕೋತ್ತರ ಹಾಗೂ ಇತರ ಕೋರ್ಸ್‌ಮಾಡಲು ವ್ಯತ್ಯಯವಾಗುತ್ತದೆ. ಅಲ್ಲದೆ ಅರ್ಜಿಯನ್ನು ಆನ್‌ಲೈನ್‌ನಲ್ಲೇ ನೀಡಬೇಕು. ಅಲ್ಲದೆ ಈ ಬಗ್ಗೆ ಅವಕಾಶವಂಚಿತರಿಗೆ ಹೇಗೆ ಆ ಸೌಲಭ್ಯವನ್ನು ಪಡೆಯಬೇಕೆಂಬ ಸರಿಯಾದ ವಿವರಣೆಯನ್ನು ವಿಶ್ವವಿದ್ಯಾನಿಲಯದ ವೆಬ್ ಹಾಗೂ ಪತ್ರಿಕೆಗಳಲ್ಲಿ ಸರಿಯಾದ ಮಾಹಿತಿ ಲಭ್ಯವಿಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಕೆಲವರು ನಿಖರವಾದ ವಿಳಾಸದಲ್ಲಿ ನೆಲೆಸದೆ ಇರುವುದರಿಂದ ಬಸ್‌ಪಾಸ್‌ನ್ನು ಸಹ ಮಾಡಿಸಿಕೊಳ್ಳದೆ, ದಿನವೂ 100 ರಿಂದ 150ರೂ.ಅನ್ನು ತೆತ್ತು ಸ್ನೇಹಿತರೋ, ಇಲ್ಲವೋ ಸಂಬಂಧಿಕರ ಮನೆಗಳಲ್ಲಿ ನೆಲೆಸುವಂತಾಗಿದೆ. ಆದ್ದರಿಂದ ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯವರು ಗಮನ ನೀಡಿ ಬೇಗ ಸಮಸ್ಯೆಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿ ಮಾಡುತ್ತೇನೆ.
-ಕಾಂತರಾಜ್ ಯಾದವ್ ಸಿ., ಲಿಂಗದವೀರನಹಳ್ಳಿ, ದೊಡ್ಡಬಳ್ಳಾಪುರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News